ಆತ್ಮ ಕ(ವಿ)ತೆ
ಆತ್ಮ ಕ(ವಿ)ತೆ


ಬದುಕು ನನ್ನ, ಪಯಣವೂ ನನ್ನ,
ವಿಜಯವೂ ನನ್ನ, ಶ್ಲಾಘನೆಯೂ ನನ್ನ,
ಎಲ್ಲವೂ ನನ್ನದೆಂದು ಕಾಣುತ್ತ ಮುಂದೆ ಸಾಗಿದೆ!
ತೊಟ್ಟಿಲು ತೊರೆದು, ಮೆಟ್ಟಿಲು ಏರಿದೆ,
ಕುರುಡು ಜಗತ್ತಿನ ಕಣ್ಮಣಿಯೂ ಆದೆ,
ರಾಜಘನದ ನಡಿಗೆ ನಡೆಯುತ್ತ ಮುಂದೆ ಸಾಗಿದೆ!
ತುಂಬು ಯವ್ವನದ ಕಾಮುಕತೆಯ ನಶೆಯನು ಏರಿಸಿದೆ,
ಕೌಮಾರ್ಯದೆಯ ಕನ್ಯೆಯನು ಅಂತಃಪುರದಲ್ಲಿ ಸೇರಿಸಿದೆ,
ಬದುಕಿನ ನೈಜ ಉದ್ದೇಶ ಮರೆತು ಮರೆಸುತ್ತ ಮುಂದೆ ಸಾಗಿದೆ!
ಸಣ್ಣ ಪುಟ್ಟ ತಪ್ಪುಗಳಿಗೂ ಹೀನಾಯವಾಗಿ ಹಿಯ್ಯಾಳಿಸಿದೆ,
ತೋಳು ಬಲದಲ್ಲಿ ಹೆತ್ತ ತಾಯಿಯನ್ನೂ ಸೋಲಿಸಿದೆ,
ಬಲಿಷ್ಠ ತಾಕತ್ತು ಪ್ರದರ್ಶಿಸುತ್ತ, ಹೂಂಕರಿಸುತ್ತ ಮುಂದ
ೆ ಸಾಗಿದೆ!
ಬಲು ಸಣ್ಣ ನಷ್ಟವನ್ನೂ ತಲೆ ಬಾಗದೆ ನಿರಾಕರಿಸಿದೆ,
ತುತ್ತು ಅನ್ನಕ್ಕಾಗಿ, ಮುತ್ತು ಕನ್ನ ಹಾಕಿದೆ,
'ಸಾಯುವವರೆಗೆ ಬದುಕು' ಎನ್ನುತ್ತ ಮುಂದೆ ಸಾಗಿದೆ!
ಮುಪ್ಪು ಮುನಿಸಿನಲ್ಲಿ ಕಳೆದೆ, ಹಾಗೆಯೇ ಹಾಸಿಗೆ ಹಿಡಿದೆ,
ನಾಲಗೆಯ ಲಗಾಮು ಬಿಗಿಯದೇ ಮಕ್ಕಳಿಗೆ ಹಗಲಿರುಳು ಕಾಡಿದೆ,
ಕಾಲಚಕ್ರದಲ್ಲಿ ಸಿಲುಕಿ ಅಂದು ನಾನು ದಿವ್ಯದೆಡೆಗೆ ಪಯಣ ಬೆಳೆಸಿದೆ!
ತೀರಿ ಹೋಗುವುದರಲ್ಲಿ ದಫನಗೊಳಿಸಿದರು ಕವಿದ ಕತ್ತಲ ಹೊಂಡದಲಿ,
ಕೇಳಿದರಲ್ಲಿ ಮಾಡಿದೆಯೇನು ನೀನು ಅನುಗ್ರಹಿಸಿದ ಇಹದ ಬದುಕಿನಲ್ಲಿ?
ಉತ್ತರಿಸಲಾಗದೆ ಪಶ್ಚಾತ್ತಾಪ ಪತ್ತೆ; ಮರು ಅವಕಾಶಕ್ಕಾಗಿ ಇಚ್ಚಿಸಿದೆ...