ಆ ಹೊತ್ತು ಆಗಮಿಸುತ್ತಿದೆ... ಭಾಗ ೨
ಆ ಹೊತ್ತು ಆಗಮಿಸುತ್ತಿದೆ... ಭಾಗ ೨


ಮತ್ತು ಆ ಅಹಿತ ಹೊಸ್ತಿಲು ಸಾಕ್ಷಿವಹಿಸುವುದು:
ಹೃದಯ ನಡುಗಿಸುವಂತಹ ಕ್ಲೇಶಗಳು ಪ್ರತಿ ಮನೆ ನುಗ್ಗುವುದು,
ಮತ್ತು ಗೌರವಾನ್ವಿತ ಸಮಾಜಗಳು ನೈತಿಕವಾಗಿ ಕೊಳೆಯುವುದು!
ಅಕ್ರಮ ಸಂಬಂಧಗಳು ಕಾಲ ತಕ್ಕಂತೆ ಹೆಚ್ಚಾಗುವುದು ಮತ್ತು
ಒಡತಿಯರ ಭ್ರೂಣಗಳು ಸೇವಕಿಯರ ಗರ್ಭಗಳಲ್ಲಿ ಬೆಳೆಯುವುದು!
ಮಹಿಳೆಯರು ನಡಿಗೆಗಳಲ್ಲಿ ನಾಟ್ಯಿಕರಿಸುವುದು,
ಮತ್ತು ಇತರರನ್ನು ತಮ್ಮತ್ತ ಆಕರ್ಷಿಸುವುದು!
ಕುಟುಂಬವೊಂದು ಎರಡೆರಡು ಆದಾಯಗಳನು ಹೊಂದರೂ,
ದುರಾಸೆಗಳು ಎಂದಿಗೂ ತೃಪ್ತಿಗೊಳ್ಳದಿರುವುದು!
"ಇವುಗಳೇ ಆ ಹೊತ್ತಿನ ಸಂಜ್ಞೆಗಳು"
ಅಹಿಂಸವಾದಿಗಳೇ ಮರೆಯದಿರಿ!
ಎಲ್ಲಕ್ಕಿಂತ ಹೆಚ್ಚಾಗಿ ಶಾಂತಿ ಒಪ್ಪಂದಗಳನ್ನು ರುಜುವಾತಿಸಲಾದರೂ,
ಯುದ್ಧಗಳು ದೈನಂದಿನ ದಿನಚರಿಗಳಲ್ಲಿ ಒಂದಾಗುವುದು!
ಮಾನವ ಹಕ್ಕುಗಳನ್ನು ವಂಚಿತರಿಗೆ ಎಂದಿಗೂ ನ್ಯಾಯ ಒದಗದು,
ಮತ್ತು ರಕ್ತವು ತುಂಬಿ ತುಳುಕಿದ ನದಿಗಳಂತೆ ಹರಿಯುವುದು!
ಹಠಾತ್ ಸಾವುಗಳು ಸಮಯ ತಕ್ಕಂತೆ ಹೆಚ್ಚಾದರೂ-
ಜೀವಿಗಳ ಮೇಲಿರುವ ಕರುಣೆಯನ್ನು ನಿರಾಕರಿಸಲಾದರೂ-
ಸಾಯುವ ಬಯಕೆಗಳು ಸಾಮಾನ್ಯವಾಗುವುದು!
"ಇವುಗಳೇ ಆ ಹೊತ್ತಿನ ಸಂಜ್ಞೆಗಳು"
ಸಂಗೀತಗಳಿಗೆ ಹೆಜ್ಜೆಹಾಕುವವರನ್ನು ಪ್ರೋತ್ಸಾಹಿಸಲಾವುದು...
ಮತ್ತು ದಿವ್ಯ ಧರ್ಮೋಪ
ದೇಶಗಳನ್ನು ನಿರ್ಲಕ್ಷಿಸಲಾಗುವುದು;
ಕೇಶ ವಿನ್ಯಾಸಗಳು ಅನಿರೀಕ್ಷಿತವಾಗಿ ಮುಳ್ಳು ಹಂದಿಗಳನ್ನು ಹೋಲಿಸಲಾರಂಭವಾಗುವುದು...
ಮತ್ತು ಗಂಡಸರು ಹೆಂಗಸರಾಗುವುದು ಮತ್ತು ಹೆಂಗಸರು ಗಂಡಸರಾಗುವುದು;
"ಇವುಗಳೇ ಆ ಹೊತ್ತಿನ ಸಂಜ್ಞೆಗಳು"
ಆ ಹೊತ್ತು ತನ್ನ ಘೋರ ನೆರಳು ಬೀರುವ ಮೊದಲು,
ಸಮಯದಲ್ಲಿರುವ ಕೃಪೆಗಳು ಮಾಯವಾಗಿ, ಸಮಯ ಕುಗ್ಗುವುದು.
'ವರ್ಷ'ಗಳು 'ತಿಂಗಳಿ'ನಂತೆ ಮತ್ತು 'ತಿಂಗಳು' 'ವಾರ'ದಂತೆ...
'ವಾರ'ಗಳು 'ದಿನ'ಗಳಂತೆ ಮತ್ತು 'ದಿನ'ಗಳು 'ಗಂಟೆ'ಗಳಂತೆ...
ಗಂಟೆ 'ಸುಡುವ ಎಲೆ'ಯಂತೆ ತ್ವರಿತವಾಗಿ ಕಳೆದು ಹೋಗುತ್ತದೆ!
"ಇವುಗಳೇ ಆ ಹೊತ್ತಿನ ಸಂಜ್ಞೆಗಳು"
ಆ ಹೊತ್ತಿನಲ್ಲಿ ನಿಮಗೆ ಕಾಣಸಿಗಬಹುದು:
ನಿರ್ಗತಿಕರು ಮತ್ತು ಬರಿಗಾಲಿನ ಕುರುಬರು
ಗಗನಚುಂಬಿ ಕಟ್ಟಡಗಳನ್ನು ನಿರ್ಮಿಸುವಲ್ಲಿ ಸ್ಪರ್ಧಿಸುವುದನ್ನು!
ಈ ಸಂಜ್ಞೆಗಳು ದಾರವೊಂದರಲ್ಲಿ ಕಟ್ಟಲಾಗಿದ್ದ ಮಣಿಗಳಂತೆ
ಮತ್ತು ದಾರವನ್ನು ಕತ್ತರಿಸಿದೊಡೆ ಮಣಿಗಳೆಲ್ಲವೂ ಎಲ್ಲೆಡೆ ಹರಡಿದಂತೆ,
ಸ್ವಯಂಘೋಷಿತ ಬುದ್ಧಿಜೀವಿಗಳು ಅನಿರೀಕ್ಷಿತವಾಗಿ ಆ ಹೊತ್ತು
ಅವರತ್ತ ಬರಬೇಕೆಂದು ಕಾಯುತ್ತಿದ್ದಾರೆಯೇ?
ಆದರೆ, ಆ ಹೊತ್ತಿನ ಹೆಚ್ಚಿನ ಸಂಜ್ಞೆಗಳು ಈಗಾಗಲೇ ಆಗಮಿಸಿದೆ!
ಮತ್ತು ಕ್ಷಣಗಣನೆ ಈಗಾಗಲೇ ಆರಂಭವಾಗಿದೆ!