STORYMIRROR

Vijaya Bharathi.A.S.

Children Stories Thriller Others

4  

Vijaya Bharathi.A.S.

Children Stories Thriller Others

ಮಕ್ಕಳ ಮ್ಯಾಜಿಕ್

ಮಕ್ಕಳ ಮ್ಯಾಜಿಕ್

1 min
474

ನಾನ್ ಸ್ಟಾಪ್ ನವೆಂಬರ್ 3 ಬಿಗಿನರ್

 ದಿನ : 19 


ವಿಷಯ : ಜಾದೂ


ಅಂದು ಶಾಲೆಯಿಂದ ಓಡಿ ಬಂದ ಹತ್ತು ವರ್ಷದ ಸುಶಾಂತ್ ತನ್ನ ಅಮ್ಮನ ಹತ್ತಿರ ನಿಂತು ಅತ್ಯುತ್ಸಾಹದಿಂದ 

"ಅಮ್ಮ,ಅಮ್ಮ. ಹತ್ತು ರೂಪಾಯಿ ಕೊಡಮ್ಮ"ಅಂತ ಕೇಳಿದ.

"ಯಾಕಪ್ಪ, ನಾಳೆ ಏನು ಸ್ಪೆಷಲ್" ಅಮ್ಮ ಕೇಳಿದಾಗ,

"ನಾಳೆ ನಮ್ಮ ಶಾಲೆಯಲ್ಲಿ ಮ್ಯಾಜಿಕ್ ಶೊ ಇದೆಯಂತೆ. ಅದಕ್ಕೆ ಎಲ್ಲರೂ ಹತ್ತು ರೂಪಾಯಿ ತೆಗೆದುಕೊಂಡು ಹೋಗಬೇಕಂತೆ. ನಮ್ಮ ಮಿಸ್ ಹೇಳಿದ್ದಾರೆ" ಅಂದ ಸುಶಾಂತ್.

"ಆಯ್ತಪ್ಪ, ಕೊಡುತ್ತೇನೆ. ಈಗ ನಿನ್ನ ಬ್ಯಾಗ್ ಕೆಳಗಿರಿಸಿ ಕೈಕಾಲು ತೆಗೆದುಕೊಂಡು ಬಾ ,ತಿಂಡಿ ಕೊಡ್ತೀನಿ" 


ಅಂದೆಲ್ಲಾ ಸುಶಾಂತ್ಗೆ ನಾಳೆ ಶಾಲೆಯಲ್ಲಿ ನಡೆಯಲಿರುವ ಮ್ಯಾಜಿಕ್ ಶೋನದೇ ಕನಸು. ಮಾರನೆ ದಿನ ಎಂದಿಗಿಂತ ಒಂದು ಗಂಟೆ ಬೇಗ ಎದ್ದು, ತಯಾರಾಗಿ ಶಾಲೆಗೆ ಹೊರಟ ಸುಶಾಂತ್.  ಮಧ್ಯಾಹ್ನದ ಲಂಚ್ ಬ್ರೇಕ್ ನ ನಂತರ ಶಾಲೆಯ ಹೊರಾಂಗಣದಲ್ಲಿ ಮ್ಯಾಜಿಕ್ ಶೋ ಪ್ರಾರಂಭವಾಯಿತು. 

ವಿದ್ಯಾರ್ಥಿಗಳೆಲ್ಲರೂ ಬಿಟ್ಟ ಕಣ್ಣು ಬಿಟ್ಟುಕೊಂಡು ಜಾದೂಗಾರ ತೋರಿಸುವ ಎಲ್ಲ ಟ್ರಿಕ್ಸ್ ಗಳನ್ನು ನೋಡುತ್ತಿದ್ದರು. ಕೋಲಿನಿಂದ ಹಾರ ಮಾಡುವುದು, ತಲೆ ತೆಗೆದು ತಲೆ ಸೇರಿಸುವುದು, ಕಾಗದ ಮುದುರಿಚಿಟ್ಟೆ ಹಾರಿಸುವುದು.....ಹೀಗೆ ಹಲವು ರೀತಿಯ ಜಾದುಗಳನ್ನು ತೋರಿಸಿ ವಿದ್ಯಾರ್ಥಿಗಳ ಮನವನ್ನು ಗೆದ್ದರು. 

ಕೆಲವು ವಿದ್ಯಾರ್ಥಿಗಳು ಕಡೆಯಲ್ಲಿ ಜಾದೂಗಾರನನ್ನು ಮುತ್ತಿಗೆ ಹಾಕಿ, ಕೆಲವು ಸಣ್ಣ ಪುಟ್ಟ ಜಾದೂಗಳನ್ನು ಕೇಳಿ ತಿಳಿದುಕೊಂಡರು. 


ಅಂದು ಸಂಜೆ ಮನೆಗೆ ಬಂದ ಸುಶಾಂತ್ ಮತ್ತು ಅವನ ಇಬ್ಬರು ಸ್ನೇಹಿತರು, ಮನೆಯಲ್ಲಿದ್ದ ಬಟ್ಟೆ,ಬರೆ, ಕಾಗದ, ಮೋಂಬತ್ತಿ, ಮ್ಯಾಚ್ ಬಾಕ್ಸ್ ಎಲ್ಲವನ್ನೂ ಹರಡಿಕೊಂಡು ಏನೇನೋ ಮ್ಯಾಜಿಕ್ಗಳನ್ನು ಮಾಡಿ ಮಾಡಿ ಯಾವುದೂ ಸರಿಯಾಗದೆ ಎಲ್ಲಾ ಪದಾರ್ಥಗಳನ್ನು ಹರಡಿ ಕೈ ಚೆಲ್ಲಿ ಕುಳಿತಾಗ, ಮಕ್ಕಳ ಪೆಚ್ಚು ಮುಖಗಳನ್ನು ನೋಡುತ್ತಾ ಕುಳಿತಿದ್ದ ಸುಶಾಂತ್ ಅಮ್ಮ ಅವರ ಹತ್ತಿರ ಬಂದು,

" ಮಕ್ಕಳಿರಾ, ಜಾದೂ ಎಂಬುದೂ ಸಹ ಒಂದು ವಿದ್ಯೆ. ಅದನ್ನು ಸಹ ಗುರುಗಳಿಂದ ಕಲಿಯಬೇಕು. ಅವರು ಮಾಡಿದರೆಂದು ಸುಮ್ಮನೆ ನೋಡಿಕೊಂಡು ಮಾಡುವಂತಿಲ್ಲ. ನೀವು ಸುಮ್ಮನೆ ಹೇಗೆ ಹೇಗೋ ಮಾಡಿದರೆ ಆಗುವುದಿಲ್ಲ"

ತುಂಬಾ ಬೇಜಾರು ಮಾಡಿಕೊಂಡಿದ್ದ ಮಕ್ಕಳಿಗೆ ಅಮ್ಮ ಕುರುಕುಲು ತಿಂಡಿಗಳನ್ನು ಕೊಟ್ಟಾಗ, ಮಕ್ಕಳ ಮುಖ ಅರಳಿತು.



இந்த உள்ளடக்கத்தை மதிப்பிடவும்
உள்நுழை