Vijayalaxmi C Allolli

Children Stories Drama Others

4  

Vijayalaxmi C Allolli

Children Stories Drama Others

ಹೀಗೊಂದು ಕಾಲ್ಪನಿಕ ಕಥೆ

ಹೀಗೊಂದು ಕಾಲ್ಪನಿಕ ಕಥೆ

2 mins
364


ಹುಟ್ಟು ಸಾವುಗಳ ಮಧ್ಯ ಇರೋ ಈ ಜೀವನದಲ್ಲಿ ಅನೇಕ ಪಾತ್ರಗಳನ್ನು ಅನುಭವಿಸಿ,ಅನುಸರಿಸಿಕೊಂಡು ಹೋಗಬೇಕಾಗುತ್ತದೆ..ಕಾಲಚಕ್ರ ಉರುಳಿದಂತೆ ಮೇಲಿದ್ದವರು ಕೆಳಗೆ,ಕೆಳಗಿದ್ದವರು ಮೇಲೆ ಹೋಗಲೆ ಬೇಕಾಗುತ್ತೆ..ಅದೆ ರೀತಿ ಮನುಷ್ಯರ ಸ್ವಭಾವಗಳು ಬದಲಾಗುತ್ತಿರುತ್ತವೆ....


ನಿಸರ್ಗ ಮತ್ತು ಪ್ರಕೃತಿ ಇಬ್ಬರೂ ಒಳ್ಳೆಯ ಸ್ನೇಹಿತರು.ಅಕ್ಕ ಪಕ್ಕದ ಮನೆಯವರು,ಓರಗೆಯವರು,ಸಮ ಮನಸ್ಥಿತಿಯುಳ್ಳವರಾಗಿದ್ದರು.ಮಕ್ಕಳ ಶಾಲೆಗೆ,ಮಾರುಕಟ್ಟೆಗೆ,

ಸಮಾರಂಭಗಳಿಗೆ ಹೋಗಬೇಕಾದರೂ ಕೂಡಿಯೆ ಹೋಗುತ್ತಿದ್ದರು.ಆರ್ಥಿಕವಾಗಿ ನಿಸರ್ಗ ಉತ್ತಮವಾಗಿದ್ದಳು..


ನಿಸರ್ಗ ಮೂಲತಃ ಸೌಮ್ಯ ಸ್ವಭಾವದವಳು.ಯಾರನ್ನೂ ನೋಯಿಸುತ್ತಿರಲಿಲ್ಲ.ತುಂಬಾ ತಿಕ್ಷ್ಣ ಬುದ್ದಿಯವಳಾಗಿದ್ದಳು...

ಪ್ರಕೃತಿಯೂ ಕೂಡಾ ಸೌಮ್ಯ ಹಾಗೂ ನಿಸರ್ಗಳ ಹಾಗೆಯೇ ಇದ್ದಳು ಮತ್ತು ಸ್ವಉದ್ಯೋಗ ಮಾಡುತ್ತಿದ್ದಳು.


ಪ್ರಕೃತಿ ತನ್ನ ಸ್ವಉದ್ಯೋಗದ ಮೂಲಕ ಸಂಡಿಗೆ,ಹಪ್ಪಳ,ಉಪ್ಪಿನಕಾಯಿಗಳನ್ನು ಮಾಡಿ ಮಾರುತ್ತಿದ್ದಳು.ತಾನು ಮಾಡಿದ ಇವೆಲ್ಲವುಗಳನ್ನು ಸ್ನೇಹಿತೆಗೆ ಉಚಿತವಾಗಿ ಕೊಡಲು ಹೋದರು,ನಿಸರ್ಗ ತೆಗೆದು ಕೊಳ್ಳುತ್ತಿರಲಿಲ್ಲ.ಅದಕ್ಕೆ ತಗಲುವ ಹಣವನ್ನು ನೀಡಿ ಪಡೆಯುತ್ತಿದ್ದಳು..


ಕರೋನಾದಿಂದಾಗಿ ಪ್ರಕೃತಿಯ ಗೃಹಉದ್ಯೋಗಕ್ಕೆ ಹೊಡೆತ ಬಿತ್ತು.ಖಾಸಗಿ ಶಾಲೆಯಲ್ಲಿ ಕಲಿಯುತ್ತಿದ್ದ ಮಕ್ಕಳನ್ನು ಶಾಲೆ ಬಿಡಿಸಲು ಮುಂದಾದಳು.ಆಗ ನಿಸರ್ಗಳ ಸಹಾಯದಿಂದ ಮಕ್ಕಳ ಶಿಕ್ಷಣವನ್ನು ಮುಂದುವರೆಸಿದಳು.ಅವರಿಬ್ಬರ ಸ್ನೇಹ,ಸಹಕಾರ ಗುಣವನ್ನು ಎಲ್ಲರೂ ಮೆಚ್ಚುತ್ತಿದ್ದರು.


ಅವರಿಬ್ಬರ ಮನೆಯ ಹತ್ತಿರವೆ ಸುನಾಮಿ ಎನ್ನುವಳ ಮನೆಯಿತ್ತು. ಎಲ್ಲರಲ್ಲೂ ಬೇಡುವ ಕೆಟ್ಟ ಗುಣ ಅವಳಲ್ಲಿ ಮೈಗೂಡಿತ್ತು.ಪ್ರಕೃತಿಯ ಹತ್ತಿರ ಸಾವಿರಾರೂ ರೂಪಾಯಿಗಳ ಸಂಡಿಗೆ,ಹಪ್ಪಳ ಮತ್ತು ಉಂಪಿನಕಾಯಿಗಳನ್ನು ಪಡೆದುಕೊಂಡು ಮಾರುತ್ತಿದ್ದಳು ಆದರೆ ಅದಕ್ಕೆ ತಗಲುವ ಅರ್ಧದಷ್ಟು ಹಣವನ್ನು ನೀಡುತ್ತಿರಲಿಲ್ಲ.ಕಷ್ಟದ ಸಮಯದಲ್ಲಿ ಸಹಾಯ ಮಾಡಿದವರ ಬಗ್ಗೆ ಸ್ವಲ್ಪವೂ ಗೌರವ ತೊರುತ್ತಿರಲಿಲ್ಲ.ಪ್ರಕೃತಿಯ ಮುಗ್ಧ ಸ್ವಭಾವವನ್ನು ದುರುಪಯೋಗ ಪಡೆದ ಸುನಾಮಿಗೆ ತಕ್ಕ ಪಾಠ ಕಲಿಸಿದ್ದಳು ನಿಸರ್ಗ.


ಪ್ರಕೃತಿಯ ಉಪ್ಪಿನಕಾಯಿಗಳಿಗೆ ಭಾರಿ ಬೇಡಿಕೆ ಬಂದ ಕಾರಣ..ಅತಿಹೆಚ್ಚಿನ ಆರ್ಡರ್ ಗಳು ಬಂದಿದ್ದವು.ಅವುಗಳ ತಯಾರಿಕೆಯಲ್ಲಿ ಸಂಪೂರ್ಣ ತೊಡಗಿದಳು.


ನಿಸರ್ಗ ಮತ್ತು ಪ್ರಕೃತಿಯ ಸ್ನೇಹವನ್ನು ಬೇರ್ಪಡಿಸುವ ದುರುದ್ದೇಶಕ್ಕೆ ಕೈ ಹಾಕಿದಳು ಸುನಾಮಿ.ತನ್ನ ಎಲ್ಲ ಕೆಲಸಗಳನ್ನು ಮುಗಿಸಿ ಮಗನನ್ನು ಆಟಕ್ಕೆ ಕಳುಹಿಸಿ ಪ್ರಕೃತಿಯ ಮನೆಗೆ ಬಂದಳು ನಿಸರ್ಗ.ಅಲ್ಲಿ ಅವಳ ಮಗನನ್ನು ಆಟಕ್ಕೆ ಕಳುಹಿಸಿದಳು.ಇದನ್ನು ನೋಡಿದ ಸುನಾಮಿಗೆ ತನ್ನ ತಲೆಯಲ್ಲಿಯ ಕೆಟ್ಟ ವಿಚಾರದ ಬಗ್ಗೆ ಮೂಡಿತು. ಪ್ರಕೃತಿಯ ಮನೆಯ ಹತ್ತಿರ ಅವಳು ಹೋದಾಗ, ಅಲ್ಲಿ ನಿಸರ್ಗ ಕೂತಿರುವುದನ್ನು ನೋಡಿದಳು.ಪ್ರಕೃತಿಗೆ ಸಿಕ್ಕ ಉಪ್ಪಿನಕಾಯಿ ಆರ್ಡರ್ ನ್ನು ಮಾಡಿಮುಗಿಸಿದ್ದ ಅವಳು.ಅವುಗಳನ್ನು ಕೊಟ್ಟು ಬರಲು ತಯಾರಿ ನಡೆಸಿದ್ದಳು.ಆ ತರಾತುರಿಯಲ್ಲಿ ಡಬ್ಬಿಗೆ ಕಟ್ಟಲು ದಾರವನ್ನು ತರಲು ಮರೆತಿದ್ದಳು.ಮಗನನ್ನು ಅಂಗಡಿಗೆ ಕಳುಹಿಸ ಬೆಕೆಂದರೆ ಅವನು ಆಟವಾಡಲು ಹೋಗಿದ್ದ.ಆಗ ನಿಸರ್ಗಳ ಮೇಲೆ ಮನೆಯನ್ನು ಬಿಟ್ಟು ದಾರ ತರಲು ಹೋದಳು ಪ್ರಕೃತಿ..


ಇದನ್ನು ಗಮನಿಸಿದ ಸುನಾಮಿ ತನ್ನ ಮಗನನ್ನು ಕರೆದು,"ವಿನಯ್, ನಿಸರ್ಗ ಆಂಟಿಗೆ ಅವರ ಮಗ ಗಿಡದ ಮೇಲಿಂದ ಬಿದ್ದಿದ್ದಾನೆ ಎಂದು ಹೇಳಿ ಕರೆದುಕೊಂಡು ಬಾ" ಎಂದು ಹೇಳಿದಳು..ವಿನಯ್ ನ ಮಾತು ಕೇಳಿ ಗಾಬರಿಯಿಂದ ಓಡಿದಳು ನಿಸರ್ಗ.ಮನೇಲಿ ಯಾರೂ ಇಲ್ಲದ್ದನ್ನು ಗಮನಿಸಿದ ಸುನಾಮಿ, ಪ್ರಕೃತಿಯ ಉಪ್ಪಿನಕಾಯಿ ಹಾಳಾಗಲೆಂದು ಅವುಗಳಿಗೆ ಅಡುಗೆ ಸೋಡಾ ಹಾಕಿದಳು.


"ಅಂಗಡಿಗೆ ಹೋದ ಪ್ರಕೃತಿ ಮನೆಗೆ ಬಂದಳು.ಉಪ್ಪಿನಕಾಯಿ ಡಬ್ಬಗಳಿಗೆ ದಾರವನ್ನು ಕಟ್ಟಿ ಕೊಡಲು ಹೋದಳು..ಉಪ್ಪಿನಕಾಯಿ ತೆಗೆದುಕೊಳ್ಳುವವರು ಅವುಗಳನ್ನು ನೋಡಿ ಪ್ರಕೃತಿಗೆ ಬೈದು ವಾಪಸ್ ಕಳುಹಿಸಿದರು.ಹೀಗೆಕೆ ಆಯಿತು,ಎಲ್ಲವೂ ಸರಿಯಾಗೆ ಮಾಡಿದ್ದೆ.


ಅವಳಿಗೆ ನೆನಪಾಯ್ತು ನಿಸರ್ಗಳನ್ನು ಬಿಟ್ಟು ದಾರ ತರಲು ಹೋದಾಗ ಅವಳೆ ಏನಾದರೂ!!!! ಕೆಡಿಸಿ ಬಿಟ್ಟಳಾ????ಎಂದು.ಇಬ್ಬರೂ ಕಾದಾಡಲು ಶುರು ಮಾಡಿದರು.ಇದನ್ನು ನೋಡಿದ ಸುನಾಮಿಗೆ ಆನಂದವೋ!ಆನಂದ!!..."ಎಚ್ಚರಗೊಂಡ ಸುನಾಮಿ ಪ್ರಕೃತಿಯ ಮನೆಯ ಹತ್ತಿರ ಹೋದಳು.ಅಲ್ಲಿ ಇಬ್ಬರು ಗೆಳತಿಯರ ಮಾತುಕತೆ ನಡೆದಿತ್ತು.


ದಾರ ತೆಗೆದು ಕೊಂಡು ಬಂದ ಪ್ರಕೃತಿ.ಉಪ್ಪಿನಕಾಯಿ ಡಬ್ಬದ ಹತ್ತಿರ ಬಿದ್ದಿರುವ ಅಡುಗೆ ಸೋಡಾವನ್ನು ನೋಡಿ ಗಾಬರಿಯಾದಳು.ಅವಳು ತಯಾರಿಸಿದ ನೂರು ಡಬ್ಬದ ಉಪ್ಪಿನಕಾಯಿ ಬದಲು ಕೆವಲ ಹತ್ತು ಡಬ್ಬಗಳಿದ್ದವು.ಆ ಹತ್ತು ಡಬ್ಬಗಳು ಸೋಡಾಪುಡಿಯಿಂದ ಕೂಡಿದ್ದವು.ಇನ್ನುಳಿದ ಡಬ್ಬಗಳನ್ನು ನಿಸರ್ಗ ಒಳಗಡೆ ರೂಮಿನಲ್ಲಿಟ್ಟಿದ್ದಳು.ವಿನಯ್ ನ ಅವಸರಕ್ಕೆ ಮತ್ತು ಮಗನಿಗೆ ಏನಾಯಿತೊ ಎಂದು ಗಾಬರಿಯಿಂದ ಮಕ್ಕಳು ಆಡುತ್ತಿರುವಲ್ಲಿ ದೌಡಾಯಿಸಿದ್ದಳು.ಅಲ್ಲಿಗೆ ಹೋದ ಮೇಲೆ ತಿಳಿಯಿತು ಅದು ಸುನಾಮಿಯ ಅವಾಂತರ ಎಂದು.ಮರಳಿ ಪ್ರಕೃತಿಯ ಮನೆಗೆ ಬರುವಷ್ಟರಲ್ಲಿ ಅಲ್ಲಿ ಸೋಡಾಪುಡಿಯ ಕಥೆ.ಎಲ್ಲವನ್ನೂ ಅವಲೋಕಿಸಿದ ನಿಸರ್ಗಾಳಿಗೆ ತಿಳಿಯಿತು ಇದು ನಮ್ಮ ಖಳನಾಯಕಿ ಸುನಾಮಿಯ ಕೆಲಸವೆಂದು...


ಧನ್ಯವಾದಗಳು...


Rate this content
Log in