Gireesh pm Giree

Others

3.7  

Gireesh pm Giree

Others

ಹಾಸ್ಯಗಾರ

ಹಾಸ್ಯಗಾರ

1 min
122


ಮನದೊಳಗೆ ಅತಿಯಾದ ನೋವಿದ್ದರೂ ಎಲ್ಲರನ್ನೂ ನಗಿಸುವಾತ. ಕಣ್ಣ ಮುಂದೆ ಕಂತೆ ಕಂತೆ ಚಿಂತೆಯೆಂಬ ಸಂತೆ ಇದ್ದರೂ ತನ್ನ ನೆಚ್ಚಿನ ಪ್ರೇಕ್ಷಕರ ಹೊಟ್ಟೆ ಹುಣ್ಣಾಗುವಂತೆ ಮಾಡಿ ನಗುವ ಕಡಲಲ್ಲಿ ತೇಲುವಂತೆ ಮಾಡುವ ಮೋಜುಗಾರ. ತನ್ನ ಅಭೂತಪೂರ್ವ ಪ್ರತಿಭೆಯ ಮೂಲಕ ಎಲ್ಲರ ಹೃದಯವನ್ನು ಗೆದ್ದು ಶಾಶ್ವತವಾಗಿ ಮನಸ್ಸಿನ ಅಂತರಾಳದಲ್ಲಿ ಆ ನಟನೆ, ಆ ಮುಗ್ಧತೆ ,ಅವನ ಹಾವಭಾವಗಳ ನೆನಪುಗಳು ಸದಾ ಮಾಸದಂತೆ.

ನಗಿಸುವ ಅವನ ತಾಕತ್ತಿಗೆ ನಾನು ಕೂಡ ಮೂಕವಿಸ್ಮಯ ನಾಗಿದ್ದೇನೆ. ಆತ ಮಾತನಾಡದೆ ಅವನ ಭಾವನೆ ನಟನೆಯ ಮೂಲಕ ಎಲ್ಲರನ್ನು ನಗಿಸುತ್ತಾನೆ ಅವರನ್ನು ನೋಡಿ ತಾನು ಸಂತಸ ಪಡುತ್ತಾನೆ. ಭಾವನೆಗಳು ಅವನ ಮಾತುಗಳು ಎಂದರೂ ತಪ್ಪಾಗದು ಖಂಡಿತ. ಆತನಿಗೆ ನಗಿಸುವ ಕಲೆಯು ದೇವರು ಅವನಿಗಾಗಿ ಕೊಟ್ಟ ಉಡುಗೊರೆಯೇ ಸರಿ. ನಮ್ಮ ನೋವು ಚಿಂತೆ ಮನಸ್ಸಿನ ಭಾರವನ್ನು ಕ್ಷಣಮಾತ್ರದಲ್ಲಿ ಕರಗುವಂತೆ ಮಾಡುವ ಅವನ ನಗಿಸುವ ಪ್ರತಿಭೆಗೆ ಬೇರೆ ಯಾರು ಸಾಟಿ?.

 ದುಃಖದ ಕಡಲಲ್ಲಿ ಸದಾ ಈಜುವ ಅವನ ಮನಸ್ಸು ನಮ್ಮ ಮನಸ್ಸನ್ನು ನಲಿವಿತ ಕೊಂಡೊಯ್ಯುತ್ತಾನೆ. ಮುಖದ ಮೇಲೆ ಬಣ್ಣ ವಿದ್ದರೂ ಅವನ ಮುಗ್ಧತೆ ಪ್ರತಿಭೆ ಎಂದೂ ಮಾಸದ ಬಣ್ಣ . ನಗಿಸುವ ಶ್ರೀಮಂತಿಕೆ ಅವನು ಹಣಕೊಟ್ಟು ಸಂಪಾದಿಸಿಲ್ಲ ಬದಲಾಗಿ ಅವನ ಮುಗ್ಧತೆ ಎಂಬ ಗುಣದಿಂದ ಸಂಪಾದಿಸಿದ ಸಂಪತ್ತು.

ನಗುವಿಂದ ಮಾಯವಾಗುವ ಮೊಗದಲಿ ನಗುವನ್ನು ಕಾಣೆಯಾಗುವ ಈ ಜಗದಲಿ ಇಂತಹ ಅಪರೂಪದ ನಕ್ಷತ್ರಗಳು ಎಲ್ಲರನ್ನೂ ನಗಿಸುತ್ತಾರೆ. ಜಗದಲ್ಲಿ ನಟಿಸುವುದಕ್ಕಿಂತ ಶ್ರೇಷ್ಠ ವ್ಯಕ್ತಿತ್ವ ಬೇರೆ ಏನಿದೆ?...



Rate this content
Log in