STORYMIRROR

Achala B.Henly

Children Stories Classics Children

4  

Achala B.Henly

Children Stories Classics Children

ದೀಪಾವಳಿ ಹಬ್ಬ

ದೀಪಾವಳಿ ಹಬ್ಬ

2 mins
380


(ಅಮ್ಮ ಮತ್ತು ಮಗ ಚಿನ್ನುವಿನೊಂದಿಗೆ ದೀಪಾವಳಿಯ ಸಂದರ್ಭದಲ್ಲಿ ಒಂದು ಕಾಲ್ಪನಿಕ ಸಂವಾದ)


ಚಿನ್ನು: ಅಮ್ಮ, ಇನ್ನೊಂದೇ ವಾರ ಉಳಿದಿದೆ ದೀಪಾವಳಿ ಹಬ್ಬಕ್ಕೆ..! ಆಮೇಲೆ ಒಟ್ಟಿಗೆ ಮೂರು ದಿನ ರಜೆ ಸಿಗುತ್ತೆ..


ಅಮ್ಮ: ಹೂಂ ಚಿನ್ನು, ಅದಕ್ಕೆ ಈಗಿನಿಂದಲೇ ಎಲ್ಲಾ ಹೋಂವರ್ಕ್ ಮತ್ತು ಪಾಠಗಳನ್ನು ಓದಿಬಿಡು. ಆಮೇಲೆ ದೀಪಾವಳಿ ಹಬ್ಬದ ಟೈಮಿನಲ್ಲಿ ಅನು ಮತ್ತು ನಿತಿನ್ ಜೊತೆ ಆಡುವಿಯಂತೆ..!!


ಚಿನ್ನು : ಅಂದ್ರೆ ಊರಿನಿಂದ ಅಕ್ಕ ಮತ್ತು ಅಣ್ಣ ಬರ್ತಾರಾ..?! ಹಾಗಾದ್ರೆ ಈ ಸಲ ಪಟಾಕಿ ಹಬ್ಬಕ್ಕೆ ದೊಡ್ಡಮ್ಮ- ದೊಡ್ಡಪ್ಪನೂ ಇರ್ತಾರೆ..!!


ಅಮ್ಮ: ಹೌದು ಮಗನೇ, ಇರ್ತಾರೆ. ನಾಳೆ ಅಂಗಡಿಗೆ ಹೋಗಿ ಹೊಸ ಬಟ್ಟೆಯನ್ನು ಎಲ್ಲರಿಗೂ ತರೋಣ. ನಿನ್ನೆಲ್ಲಾ ಸ್ಕೂಲ್ ವರ್ಕ್ ಅನ್ನು ಇವತ್ತೇ ಮುಗಿಸಿಬಿಡು.


ಚಿನ್ನು : ಓಹೋ, ಥ್ಯಾಂಕ್ ಯು ಅಮ್ಮ..! ನಂಗೆ ಈ ಸಲ ಬ್ಲೂ ಶರ್ಟ್ ಮತ್ತು ಬ್ಲಾಕ್ ಪ್ಯಾಂಟ್ ಬೇಕು ಪ್ಲೀಸ್..!!


ಅಮ್ಮ: ಓಕೆ ಚಿನ್ನು. ಅಲ್ಲಿ ಹೋದ ಮೇಲೆ ಅಲ್ವಾ ಯಾವುದು ಅಂತ ಡಿಸೈಡ್ ಮಾಡೋದು..! ಮೊದಲೇ ಇದು ಬೇಕು ಅದು ಬೇಕು, ಎಂದು ಫಿಕ್ಸ್ ಆಗಬೇಡ..!! ಎಲ್ಲವನ್ನು ನೋಡಿದ ನಂತರ ಡಿಸೈಡ್ ಮಾಡು.


ಚಿನ್ನು: ಓಕೆ ಅಮ್ಮ. ಅದ್ಸರಿ, ನನಗೆ ಒಂದು ಡೌಟು..... ಹಬ್ಬ ಬಂತೆಂದರೆ ಹೊಸ ಬಟ್ಟೆಯನ್ನು ಅಪ್ಪ ಅಮ್ಮ ಏಕೆ ಕೊಡಿಸ್ತಾರೆ...? ಹಬ್ಬದ ದಿನ ಅದ್ಯಾಕೆ ಸ್ಪೆಷಲ್ ಊಟ ಅಂದರೆ ಪಾಯಸ, ಬೋಂಡ, ಒಬ್ಬಟ್ಟು, ಪಲಾವ್, ಪೂರಿ... ಈ ರೀತಿ ಎಷ್ಟೊಂದು ತಿಂಡಿ ಮಾಡ್ತಾರೆ..?!


ಅಮ್ಮ: ಹಹಹ (ನಗುತ್ತಾ), ಒಳ್ಳೆಯ ಪ್ರಶ್ನೆ ಕೇಳಿದೆ ಮಗನೇ... ಹಬ್ಬ ಅಂದರೆ ಖುಷಿ ಸಡಗರ ಅಲ್ವಾ..? ಆ ದಿನ ಎಲ್ಲರೂ ಸಂತೋಷದಿಂದ ಕುಟುಂಬದವರು ಮತ್ತು ಸ್ನೇಹಿತರ ಜೊತೆ ಕಾಲ ಕಳೆಯುತ್ತಾರೆ. ಅದಕ್ಕೆ ಅಲ್ವಾ, ನಾನು ಒಂದು ವಾರದ ಮುಂಚಿನಿಂದಲೇ ಮನೆಯನ್ನು ಕ್ಲೀನ್ ಮಾಡಲು ಶುರು ಮಾಡುವುದು...?! ಹೂವು, ಹಣ್ಣು, ಸ್ವೀಟುಗಳನ್ನು ತರುವುದು..?


ಚಿನ್ನು : ಅದೇ ಯಾಕೆ ಆ ಟೈಮಿನಲ್ಲಿಯೇ ನೀನು ಹೆಚ್ಚು ಮನೆಯನ್ನು ಕ್ಲೀನ್ ಆಗಿ ಇಡುತ್ತೀಯಾ ಅಂತ..?!


ಅಮ್ಮ: ಹೇಳಿದ್ನಲ್ಲ ಚಿನ್ನು... ಹಬ್ಬ ಅಂದರೆ ಪೂಜೆ ಇರುತ್ತದೆ. ಮನೆಯನ್ನು ಕ್ಲೀನ್ ಆಗಿ ಇಡುವುದರಿಂದ ಒಂಥರಾ ಪಾಸಿಟಿವ್ ಫೀಲಿಂಗ್ ಬರುತ್ತದೆ. ಇನ್ನು ಎಲ್ಲರೂ ಕೂಡಿ ಹಬ್ಬ ಆಚರಿಸುವ ಮಜವೇ ಬೇರೆ...!! ಸಿಹಿ ಊಟ ಯಾಕೆ ಮಾಡ್ತೀಯಾ ಅಂತ ನಿನ್ನ ಪ್ರಶ್ನೆ ಅಲ್ವಾ..? ಚೆನ್ನಾಗಿ ಒಳ್ಳೆಯ ಮನಸ್ಸಿನಿಂದ ಹಬ್ಬ ಆಚರಿಸಿದ ಮೇಲೆ, ನಮ್ಮ ದೇಹಕ್ಕೂ ಸುಸ್ತಾಗಿರುತ್ತದೆ.


ಅದಕ್ಕೂ ಒಳ್ಳೆಯ ತಿಂಡಿ-ಊಟದ ಅಗತ್ಯವಿರುತ್ತೆ ಅಲ್ವಾ..?! ದಿನಾ ಸ್ಕೂಲು-ಆಫೀಸು ಎಂದು ಅರ್ಜೆಂಟ್ ನಲ್ಲಿಯೇ ತಿಂಡಿ-ಊಟ ಮಾಡುತ್ತೇವೆ. ನಮ್ಮ ದೇಹವನ್ನು ಚೆನ್ನಾಗಿ ಕಾಳಜಿವಹಿಸಬೇಕು ಅಲ್ವಾ..?! ಹಾಗಾಗಿ ಈ ರೀತಿಯ ವಿಶೇಷ ತಿಂಡಿಗಳನ್ನು ಮಾಡಿ, ಖುಷಿಯಿಂದ ತಿಂದು, ಆರಾಮಾಗಿ ಆ ದಿನವನ್ನು ಎಲ್ಲರ ಜೊತೆ ಇದ್ದು ಕಾಲ ಕಳೆಯುತ್ತೇವೆ..!!


ಚಿನ್ನು : ಓಕೆ ಅಮ್ಮ, ಇನ್ನು ನಾನು ಓದಲು ಕೂರುತ್ತೇನೆ. ಆಮೇಲೆ, ದೊಡ್ಡಮ್ಮಂಗೆ ಫೋನ್ ಮಾಡಿ ಮನೆಗೆ ಬನ್ನಿ ಎಂದು ನಾನೂ ಕರೆಯುತ್ತೇನೆ..!


ಅಮ್ಮ: ಹಾಂ ಸರಿ ಚಿನ್ನು. ನೀನು ಅವತ್ತು ಕೇಳಿದ ಹಾಗೆ ಪಟಾಕಿ ಕೊಡಿಸುತ್ತೇನೆ..! ಆದರೆ ಸ್ವಲ್ಪ ಮಾತ್ರ, ಓಕೆನಾ..? ಪಟಾಕಿ ಹಾನಿಕಾರಕ ಎಂದು ಗೊತ್ತು ತಾನೇ..?! ಅದರ ಬದಲು ಈ ಸಲ ಸ್ಪೆಷಲ್ ಆಗಿ ಹೆಚ್ಚು ದೀಪಗಳನ್ನು ಹಚ್ಚೋಣ. ಜೊತೆಗೆ ಆಕಾಶಬುಟ್ಟಿಯನ್ನು ಹಾರಿಸೋಣ ಏನಂತಿಯಾ..?!


ಚಿನ್ನು : ಓ ಸೂಪರ್, ಒಳ್ಳೆಯ ಐಡಿಯಾ ಅಮ್ಮ..!!ತುಂಬಾ ಥ್ಯಾಂಕ್ಸ್.




ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ