Vaman Acharya

Children Stories Classics Inspirational

4  

Vaman Acharya

Children Stories Classics Inspirational

ಆಗೋದೆಲ್ಲ ಒಳ್ಳೆಯದಕ್ಕೆ

ಆಗೋದೆಲ್ಲ ಒಳ್ಳೆಯದಕ್ಕೆ

4 mins
273



ಪವನಪುರ ನಗರದ ಮಾತಾ ಮಹೇಶ್ವರಿ ಮಾಧ್ಯಮಿಕ ಶಾಲೆಯಲ್ಲಿ ಬೆಳಗಿನ ಹನ್ನೊಂದು ಗಂಟೆ ಸಮಯ.  ಏಳನೇ ತರಗತಿಯಲ್ಲಿ ಗಣಿತ ವಿಷಯದಮೇಲೆ ವಿದ್ಯಾರ್ಥಿಗಳು ಶಿಕ್ಷಕರು ಕೇಳಿದ ವಿವಿಧ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿದ್ದರು. ಸುಮಿತ್ ಎನ್ನುವ ಹುಡುಗ ಎಲ್ಲ ಪ್ರಶ್ನೆಗಳಿಗೆ ತಪ್ಪು ಉತ್ತರ ಕೊಡುವದಲ್ಲದೆ ಪಕ್ಕದ ಹುಡುಗನ ಜೊತೆಗೆ ಚೇಷ್ಟೆ ಮಾಡುತ್ತಿರುವುದನ್ನು ಗಮನಿಸಿದ ಶಿಕ್ಷಕ ಅಮರ್ ನಾಥ್ ಅವರಿಗೆ ಕೋಪ ಬಂದು ಅವನಿಗೆ ಬೆಂಚ್ ಮೇಲೆ ನಿಲ್ಲಿಸಿ ಅವನ ಕೈಗೆ ಛಡಿಯಿಂದ ಜೋರಾಗಿ ಎರಡು ಸಲ ಹೊಡೆದರು. ಅದರಿಂದ ಅವನ ಕೈಗೆ ಬಾವು ಬಂದು ಅತೀವ ನೋವು ಅನುಭವಿಸಿದ. ಕ್ಲಾಸ್ ಮುಗಿದ ಕೂಡಲೇ ತನಗಾದ ನೋವನ್ನು ಲೆಕ್ಕಿಸದೆ ಅವನು ನೇರವಾಗಿ ಹೆಡ್ ಮಾಸ್ತರ ಮುಕುಂದರಾವ್ ಅವರನ್ನು ಭೇಟಿಯಾಗಲು ಅವರ ಕೋಣೆಗೆ ಹೋದ. ಅವನ ಪರಿಸ್ಥಿತಿ ಗಮನಿಸಿದ ಅವರು,

"ನಿನ್ನ ಕೈಗೆ ಏನಾಗಿದೆ? ಬೇಗ ಆಸ್ಪತ್ರೆಗೆ ಹೋಗಿ ಡಾಕ್ಟರ್ ಗೆ ತೋರಿಸು," ಎಂದರು.

"ಸರ್, ನಿಮ್ಮ ಸಹಾನುಭೂತಿಗೆ ಧನ್ಯವಾದ. ನಾನು ಇಲ್ಲಿಗೆ ಬಂದಿರುವದು ನಿಮಗೆ ದೂರು ಕೊಡುವದಕ್ಕೆ ಅಲ್ಲ. ವಿದ್ಯಾರ್ಥಿಗಳು ತಪ್ಪು ಮಾಡಿದರೆ ಶಿಕ್ಷಕರಿಗೆ ಹೊಡೆಯುದನ್ನು ಬಿಟ್ಟು ಅನ್ಯ ಮಾರ್ಗ ಇಲ್ಲವೇ?"

ಪುಟ್ಟ ಹುಡುಗನ ಅಚ್ಚರಿ ಪ್ರಶ್ನೆ ಕೇಳಿದ ಹೆಡ್ ಮಾಸ್ಟರ್ ಅವರಿಗೆ ಆಶ್ಚರ್ಯವಲ್ಲದೆ ಕುತೂಹಲ ಆಯಿತು. 

ಆಗ ಸುಮಿತ ಮುಂದುವರೆದು ಹೇಳಿದ.

"ಸರ್,ನೀವು ಈಗಾಗಲೇ ಪತ್ರಿಕೆಗಳಲ್ಲಿ ಶಿಕ್ಷಕರು ಸರಿಯಾದ ಉತ್ತರ ಕೊಡದ ವಿದ್ಯಾರ್ಥಿಗಳಿಗೆ ಬೆಂಚ್ ಮೇಲೆ ನಿಲ್ಲಿಸುವದು, ಬೆತ್ತದಿಂದ ಹೊಡೆಯುವದು ಹಾಗೂ ಕ್ಲಾಸ್ ನಿಂದ ಹೊರಗೆ ಹಾಕುವದು ಇಂತಹ ಅನೇಕ ಅಮಾನವೀಯ ಕೃತ್ಯಗಳನ್ನು ಮಾಡಿರುವದನ್ನು ಓದಿರ ಬಹುದು. ಅದರಿಂದ ಮಕ್ಕಳಿಗೆ ವೇದನೆ ಅಷ್ಟೇ ಅಲ್ಲ ಜೀವ ಕಳೆದುಕೊಂಡ ನಿದರ್ಶನಗಳು ಇವೆ. ಅಂತಹ ಸಂದರ್ಭದಲ್ಲಿ ಪಾಲಕರು ಪೋಲಿಸ್ ಗೆ ದೂರು ಕೊಟ್ಟಿರುವರು. ಅದರಿಂದ ಅಪರಾಧಿ ಶಿಕ್ಷಕರಿಗೆ ಬಿಸಿ ಕೂಡಾ ಮುಟ್ಟಿದೆ.  ಇದನ್ನು ತಪ್ಪಿಸಲು ಪರ್ಯಾಯ ಮಾರ್ಗ ಹುಡುಕಿ ಸರ್," ಎಂದ. 

ಆ ಸಮಯದಲ್ಲಿ ಮುಕುಂದರಾವ್ ಹೀಗೆ ವಿಚಾರ ಮಾಡಿದರು. ಶಿಕ್ಷಕರನ್ನು ಕರೆಸಿ ಇದು ಅಪರಾಧ ಇನ್ನು ಮುಂದೆ ಹೀಗೆ ಮಾಡಬೇಡಿ ಎನ್ನುವ ನಿರ್ಧಾರಕ್ಕೆ ಬಂದರು.

"ನೀನು ಚೆನ್ನಾಗಿ ಓದಿ ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡುವದನ್ನು ಬಿಟ್ಟು ಎಲ್ಲವೂ ತಿಳಿದವನಂತೆ ದೊಡ್ಡವರ ಹಾಗೆ ದೊಡ್ಡ ದೊಡ್ಡ ಮಾತಾಡುತ್ತಿ. ಮೊದಲು ನೀನು ಅಭ್ಯಾಸ ಚೆನ್ನಾಗಿ ಮಾಡು. ಇನ್ನು ನಿನ್ನ ವಿಚಾರಗಳ ಬಗ್ಗೆ ಆಮೇಲೆ ಚರ್ಚೆ ಮಾಡುವೆ", ಎಂದರು.

"ಸರ್, ಇನ್ನು ಮುಂದೆ ಕಷ್ಟ ಪಟ್ಟು ಓದುತ್ತೇನೆ. ಇಂತಹ ಪರಿಸ್ಥಿತಿ ಬರದೇ ಇರುವಂತೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ."

"ಸಧ್ಯ ನೀನು ಆಸ್ಪತ್ರೆಗೆ ಹೋಗು. ನಂತರ ಮನೆಗೆ ಹೋಗು," ಎಂದರು.

"ಆಗಲಿ ಸರ್," ಎಂದು ಹೊರಟ.

ಆಸ್ಪತ್ರೆಗೆ ಹೋಗಿ ಚಿಕಿತ್ಸೆ ತೆಗೆದುಕೊಂಡು ಮನೆಗೆ ಹೋದ. ಮನೆಯಲ್ಲಿ ತಂದೆ ತಾಯಿ ಇಬ್ಬರೂ ಇದ್ದರು. ಮಗನನ್ನು ನೋಡಿದ ತಾಯಿ ಗಾಬರಿ ಆಗಿ,

"ಇದೇನು ಸುಮಂತ್, ಕೈಗೆ ಬ್ಯಾಂಡೇಜ್. ಏನಾಯಿತು?"

ತಂದೆ ಕೂಡಾ,"ಬೇಗ ಹೇಳು? ಯಾರ ಜೊತೆಗೆ ಜಗಳವಾಡಿದೆ?" ಎಂದು ಕೇಳಿದರು.

ಸುಮಂತ್ ಆಗಿರುವ ಘಟನೆಯನ್ನು ವಿವರಿಸಿದ. ಇದನ್ನು ಕೇಳಿದ ಅವರಿಬ್ಬರ ಪ್ರತಿಕ್ರಿಯೆ ವಿಭಿನ್ನವಾಗಿತ್ತು.

ತಾಯಿ ಮಗನ ಮೇಲಿನ ಮಮತೆ ವ್ಯಕ್ತ ಪಡಿಸಿ, 

"ಏನ್ರೀ, ಅ ಶಿಕ್ಷಕ ಯಾಕೆ ಇಂತಹ ಶಿಕ್ಷೆ ಕೊಟ್ಟ ಎನ್ನುವ ದೂರು ಕೊಡಬೇಕು. ನನ್ನ ಮಗ ಬಹಳ ನೊಂದು ಕೊಂಡಿದ್ದಾನೆ."

ಅದಕ್ಕೆ ತಂದೆ,

"ಮಕ್ಕಳನ್ನು ಸರಿಯಾದ ದಾರಿಗೆ ತರಲು ಶಿಕ್ಷೆ ಕೊಡುವದು ಸಾಮಾನ್ಯ. ಅವರ ವಿರುದ್ಧ ದೂರು ಕೊಡುವ ಅವಶ್ಯಕತೆ ಇಲ್ಲ.  ಆದರೆ ಅದು ಅತಿರೇಕವಾಗಬಾರದು. ಮಗ ತನ್ನಂತೆ ದುಡಿಯುವ ರೈತನಾಗಬೇಕೆಂದು ನಾನು ಮಗನ ಅಭ್ಯಾಸದ ಕಡೆಗೆ ಗಮನ ಹರಿಸಲಿಲ್ಲ," ಎಂದರು.

ಮಂಜುಳ ಹಾಗೂ ಮಂಜುನಾಥ ಅವರ ಏಕೈಕ ಪುತ್ರ ಸುಮಂತ್. ಪವನಪುರದಿಂದ ಮೂರು ಕಿಲೋಮೀಟರ್ ದೂರ ಇರುವ ರಮೇಶನ ಹಳ್ಳಿಯಲ್ಲಿ ಐದು ಎಕರೆ ಫಲವತ್ತಾಗಿರುವ ಜಮೀನು. ಪರಿಶ್ರಮ ದಿಂದ ಮಂಜುನಾಥ ಅವರು ಪ್ರಗತಿಪರ ರೈತ ರಾಗಿದ್ದರು. ಮಗನಿಗೆ ಪ್ರೀತಿಯಿಂದ ಬೆಳೆಸಿದರು.  ಅದರಿಂದ ಅವನು ತರಗತಿಯ ಓದಿನಲ್ಲಿ ನಿರುತ್ಸಾಹಿ ಆಗಿ ಅಟ ಪಾಟಗಳಲ್ಲಿ ಸಮಯ ಹೆಚ್ಚಿನ ಕಳೆದ. ಸುಮಂತ್ ನಿಗೆ ಯಾರು ಏನೇ ಹೇಳಲಿ ಅವರ ಕಡೆ ಲಕ್ಷ್ಯ ಕೊಡದೆ ಹೋದ. ಹಾಗೆ ನೋಡಿದರೆ ಅವನಿಗೆ ಓದಿರುವದನ್ನು ಅರ್ಥ ಮಾಡಿಕೊಳ್ಳುವದು, ನಿರರ್ಗಳವಾಗಿ ಮಾತನಾಡುವ ಕೌಶಲ್ಯ ಇರುವದು ಅಪರೂಪ. 

ಸಮಂತನಿಗೆ ಶಿಕ್ಷಕರು ಕೊಟ್ಟ ಶಿಕ್ಷೆ ಅವನ ಜೀವನದಲ್ಲಿ ಟರ್ನಿಂಗ್ ಪಾಯಿಂಟ್ ಆಯಿತು. ಅವನ ವಾರ್ಷಿಕ ಪರೀಕ್ಷೆಗೆ ಉಳಿದಿರುವದು ಕೇವಲ ಆರು ತಿಂಗಳು. ದಿನದ ಅಧಿಕ ಸಮಯ ಓದುವದು ಹಾಗೂ ಬರೆಯುವದರಲ್ಲಿ ನಿರತನಾದ. ಮನಸ್ಸಿದ್ದರೆ ಮಾರ್ಗ ಎನ್ನುವುದನ್ನು ಮನದಟ್ಟು ಮಾಡಿಕೊಂಡ. 

ಅವನ ಪರಿಶ್ರಮ ಫಲಕಾರಿ ಆಯಿತೇ?

ಆ ಘಟನೆ ಆದ ನಂತರ ಸುಮಿತ್ ಶಾಲೆಗೆ ಹೋಗುವದು ತರಗತಿಯಲ್ಲಿ ಗಂಭೀರವಾಗಿ ಕುಳಿತು ಯಾರ ಜೊತೆಗೆ ಮಾತನಾಡಿದೇ ಇರುವದನ್ನು ಗಮನಿಸಿದ ಇತರ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಆಶ್ಚರ್ಯ ವಾಯಿತು. ಗಣಿತ ಮೇಷ್ಟ್ರು ಸುಮಂತ್ ನಲ್ಲಿ ಆಗಿರುವ ಬದಲಾವಣೆ ನೋಡಿ ಸಂತೋಷ ಪಟ್ಟರು. ಈಗಾಗಲೇ ಹೆಡ್ ಮಾಸ್ಟರ್ ಶಿಕ್ಷರನ್ನು ಕರೆಸಿ ಮಾತನಾಡಿದ ಬಗ್ಗೆ ಸುಮಂತ್ ನಿಗೆ ತಿಳಿಯಿತು.

 ಮುಂದಿನ ದಿನಗಳಲ್ಲಿ ಸುಮಂತ್ ಪ್ರತಿಭಾವಂತ ವಿದ್ಯಾರ್ಥಿ ಆಗುವ ಎಲ್ಲ ಲಕ್ಷಣಗಳು ಕಂಡು ಬಂದವು. ಇದರಿಂದ ಇತರ ವಿದ್ಯಾರ್ಥಿಗಳಲ್ಲಿ  ವಿಶೇಷವಾಗಿ ಫಸ್ಟ್ ಕ್ಲಾಸ್ ನಲ್ಲಿ ಪಾಸಾಗುವ ಶೇಷಗಿರಿಗೆ ಸುಮಂತ್ ನ ಮೇಲೆ ಎಲ್ಲಿಲ್ಲದ ಮತ್ಸರ ಬರತೊಡಗಿತು. ಇದನ್ನು ಅವನು ಸುಮಂತ್ ಗೆ ಎಷ್ಟೋ  ಬಾರಿ ವ್ಯಕ್ತ ಪಡಿಸಿದ. ಆಗ ಸುಮಂತ್ ಅವನಿಗೆ ಹೇಳಿದ ಮಾತು ಕೇಳಿ ಉಳಿದ ವಿದ್ಯಾರ್ಥಿಗಳು ದಂಗಾದರು.

ಸುಮಂತ್ ಹೇಳಿರುವದಾದರೂ ಏನು?

"ಏ ಶೇಷ, ನಿನಗೆ ಆಗಿರುವ ನೋವು ನನಗೆ ಗೊತ್ತಿದೆ. ನೀನು ನನ್ನ ಮೇಲೆ ಮತ್ಸರ ಮಾಡುವ ಬದಲು ಪರಿಶ್ರಮ ವಹಿಸಿ ನನಗಿಂತಲೂ ಹೆಚ್ಚಿನ ಅಂಕ ಪಡೆದು ನಂಬರ್ ಒನ್ ಆಗು. ಯಾವುದೂ ಅಸಾಧ್ಯ ಇಲ್ಲ," ಎಂದ.

ಶೇಷನಿಗೆ ಜ್ಞಾನೋದಯ ವಾಗಿ ಸುಮಂತ್ ನಿಗೆ ಆಲಿಂಗನ ಮಾಡಿದ. ಅಂದಿನಿಂದ ಇಬ್ಬರೂ ಒಳ್ಳೆಯ ಸ್ನೇಹಿತರಾದರು. 

ವಾರ್ಷಿಕ ಪರೀಕ್ಷೆಯಲ್ಲಿ ಸುಮಂತ್ ಇಡೀ ಏಳನೇ  ತರಗತಿಗೆ  ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾಗಿ ಎಲ್ಲರ ಮೆಚ್ಚುಗೆ ಪಾತ್ರ ನಾದ. ಆ ಸಮಯದಲ್ಲಿ ಸುಮಂತ್ ಗಣಿತ ಶಿಕ್ಷಕ ಅಮರ್ ನಾಥ ಅವರಿಗೆ ಕಾಲು ಮುಟ್ಟಿ ನಮಸ್ಕಾರ ಮಾಡಿದ. ಮನೆಯಲ್ಲಿ ಅವನ ತಾಯಿಗೆ ಸಂತೋಷವಾದರೂ ತಂದೆಗೆ ಒಂದು ಕೊರಗು. ಸುಮಂತ್ ಉಚ್ಚ ಶಿಕ್ಷಣ ಮಾಡಿ ತಮ್ಮ ಅಚ್ಚು ಮೆಚ್ಚಿನ ಕೃಷಿ ವ್ಯವಸಾಯ ಮಾಡುವದಿಲ್ಲ. 

ಪತಿಯ ಅಸಮಾಧಾನವನ್ನು ಅರಿತ ಆಕೆ,

"ಆಗುವದೆಲ್ಲ ಒಳ್ಳೆಯದಕ್ಕೆ," ಎಂದು ಸಮಾಧಾನ ಮಾಡಿದಳು


Rate this content
Log in