STORYMIRROR

Mouna M

Others

3  

Mouna M

Others

ನನ್ನ ನಮನ

ನನ್ನ ನಮನ

1 min
11.8K

ಹೇ ದೇವ ಸ್ವೀಕರಿಸು ನನ್ನ ನಮನ ನಿನ್ನಿಂದಲೇ ನಾವೆಲ್ಲಾ, ನೀ ಇಲ್ಲದೆ ನಾವಿಲ್ಲ 

ಗೊತ್ತಿದ್ದೂ ಗೊತ್ತಿಲ್ಲದೆಯೋ ಮಾಡಿದ್ವಿ ಈ ಭೂಮಿಯ ಕಲುಷಿತ 

ನೀ ಎಂದೂ ಮಾಡ್ಲಿಲ್ಲ ನಮ್ಮನ್ನು ದೂಷಿತ 

ಹೇ ದೇವ ಸ್ವೀಕರಿಸು ನನ್ನ ನಮನ ನಿನ್ನಿಂದಲೇ ನಾವೆಲ್ಲಾ, ನೀ ಇಲ್ಲದೆ ನಾವಿಲ್ಲ 

ಗೊತ್ತಿದ್ದೂ ಗೊತ್ತಿಲ್ಲದೆಯೋ ನೀರನ್ನು ಪೋಲು ಮಾಡಲು ನಾವು 

ಎಳ್ಳಷ್ಟೂ ನೀ ನಮಗೆ ತಾಗಿಸಲಲಿಲ್ಲ ಇದರ ಕಾವು 

ಹೇ ದೇವ ಸ್ವೀಕರಿಸು ನನ್ನ ನಮನ ನಿನ್ನಿಂದಲೇ ನಾವೆಲ್ಲಾ, ನೀ ಇಲ್ಲದೆ ನಾವಿಲ್ಲ 

ಗೊತ್ತಿದ್ದೂ ಗೊತ್ತಿಲ್ಲದೆಯೋ ಗಾಳಿಯ ಕುಡಿದು ಮರೆತ ನಮ್ಮನ್ನು 

ನೀ ಮಾತ್ರ ಎಂದೆಂದು ಗಾಳಿಯ ಮಾಡಲಿಲ್ಲ ಬರಿದು

ಹೇ ದೇವ ಸ್ವೀಕರಿಸು ನನ್ನ ನಮನ ನಿನ್ನಿಂದಲೇ ನಾವೆಲ್ಲಾ, ನೀ ಇಲ್ಲದೆ ನಾವಿಲ್ಲ 

ಗೊತ್ತಿದ್ದೂ ಗೊತ್ತಿಲ್ಲದೆಯೋ ಅಗ್ನಿಯಿಂದ ಮಾಡಿದ ಕೂಳನ್ನು ತಿಂದು 

ಅಗ್ನಿಯನ್ನೇ ಬಿಸುಟಿದ ನಮ್ಮನ್ನ ಸುಡಲಿಲ್ಲ ನೀ ಇಂದು

ಹೇ ದೇವ ಸ್ವೀಕರಿಸು ನನ್ನ ನಮನ ನಿನ್ನಿಂದಲೇ ನಾವೆಲ್ಲಾ, ನೀ ಇಲ್ಲದೆ ನಾವಿಲ್ಲ 

ಗೊತ್ತಿದ್ದೂ ಗೊತ್ತಿಲ್ಲದೆಯೋ ಆಕಾಶದೆತ್ತರಕ್ಕೆ ಹಾರಿದ ನಮ್ಮನ್ನು 

ಬರಮಾಡಿಕೊಂಡ ನಿನ್ನನ್ನೇ ಮರೆತರೂ, ಮರೆಯಲಿಲ್ಲ ನೀ ನಮ್ಮನ್ನು 

ಹೇ ದೇವ ಸ್ವೀಕರಿಸು ನನ್ನ ನಮನ ನಿನ್ನಿಂದಲೇ ನಾವೆಲ್ಲಾ, ನೀ ಇಲ್ಲದೆ ನಾವಿಲ್ಲ 

 ಶಿಕ್ಷಿಸು ದುಷ್ಟರನು, ಇದೋ ತಂದೆ ನಿನ್ನ ಕುಂಚ  

ರಕ್ಷಿಸು ಶಿಷ್ಟರನ್ನು , ಅವರಿಂದಲೇ ನಡೆವುದು ಪರಪಂಚ 

ಕ್ಷಮೆ ಇರಲಿ ತಂದೆ, ಈ ಪದ್ಯವೂ ಕೂಡ ನಿನ್ನದೇ ... 

Rate this content
Log in