StoryMirror Feed

Children Stories

2  

StoryMirror Feed

Children Stories

ಮಕ್ಕಳ ಕಥೆ: ರಾಜನ ಮನ ಪರಿವರ್ತನೆ

ಮಕ್ಕಳ ಕಥೆ: ರಾಜನ ಮನ ಪರಿವರ್ತನೆ

2 mins
13.1K


ಒಬ್ಬ ರಾಜ ತನ್ನ ರಾಜ್ಯ ನೋಡಲು ಕುದುರೆಯನೇರಿ ಹೊರಟ. ಒಂದೂರಿನ ಹಾದಿಯಲ್ಲಿಹೋಗುವಾಗ ಆತನಿಗೆ ತುಂಬಾ ಹಸಿವಾಯಿತು. ಸುತ್ತಮುತ್ತ ನೋಡಿದಾಗ ಬೃಹದಾಕಾರದ ಮರದಲ್ಲಿತುಂಬಾ ಹಣ್ಣುಗಳು ಜೋತು ಬಿದ್ದಿದ್ದವು. ಆ ಮರ ಎತ್ತರವಿದ್ದ ಕಾರಣ ಒಂದು ಹಣ್ಣೂ ಆತನ ಕೈಗೆ ಎಟಕಲಿಲ್ಲ. ಆಗ ಮರ ಕಡಿಯುವವನೊಬ್ಬ ಸಾಕಷ್ಟು ಹಣ್ಣುಗಳನ್ನು ಕೊಯ್ದು ರಾಜನಿಗೆ ಕೊಟ್ಟ ತಕ್ಷಣ ಆತ ಅದನ್ನು ಗಬಗಬನೆ ತಿಂದು ಮರ ಕಡಿಯುವವನಿಗೆ ಚಿನ್ನದ ನಾಣ್ಯಗಳನ್ನು ಕೊಟ್ಟು ಮುಂದೆ ಸಾಗಿದ. 


ಹೀಗೆ ಸಾಗುವಾಗ ಆತ, ನಾನು ರಾಜನಾದರೂ ನನಗೆ ಮರ ಏರಲು ತಿಳಿದಿಲ್ಲ. ಇದೆಂತಹ ಅವಮಾನ' ಎಂದು ಮರುಗಿದ. ಹೀಗೆ ದೂರ ಸಾಗುವಾಗ ಬಿಸಿಲು ಆತನಿಗೆ ಸುಸ್ತಿನ ಜೊತೆಗೆ ನಿದ್ರೆ ಬರಲು ಶುರುವಾಯಿತು. ಮರದ ಕೆಳಗೆ ಮಲಗಿದರೂ ಆತನಿಗೆ ನಿದ್ರೆ ಬರಲಿಲ್ಲ. ದೂರದಲ್ಲಿಮರಗೆಲಸದವನೊಬ್ಬ ತನ್ನ ತಲೆಗೆ ಕಟ್ಟಿದ್ದ ತುಂಡು ಬಟ್ಟೆ ಹಾಸಿ ಗಾಢ ನಿದ್ರೆಗೆ ಜಾರಿದ್ದ. ಆಗ ರಾಜನಿಗೆ, ಅವನಿಗೆ ಆ ಭಗವಂತ ಅದೆಷ್ಟು ಸುಖ ನಿದ್ರೆ ಕರುಣಿಸಿದ್ದಾನೆ. ಕಲ್ಲು, ಮಣ್ಣು ತರಗೆಲೆಯ ಮೇಲೆಯೇ ಗಾಢ ನಿದ್ರೆ ಮಾಡುತ್ತಿರುವನಲ್ಲ' ಎಂದು ಯೋಚಿಸಿ ಆತನನ್ನು ಕರೆದು ನಿನಗೆ ಹೇಗೆ ಇಷ್ಟು ನಿದ್ರೆ ಬರುತ್ತದೆ. ಈ ಮಣ್ಣು, ಧೂಳಿನಲ್ಲಿನನಗೆ ಕೂರಲೂ ಮನಸ್ಸಾಗುತ್ತಿಲ್ಲ' ಎಂದ. ಆಗ ಮರಗೆಲಸದವ ನಮ್ಮ ಬದುಕೇ ಹೀಗೆ. ಕಷ್ಟಪಟ್ಟು ದುಡಿದರೆ ದೇಹಕ್ಕೆ ಆಯಾಸವಾಗುತ್ತದೆ. ಆಗ ಎಲ್ಲಿಮಲಗಿದರೂ ನಿದ್ರೆ ಬರುತ್ತದೆ ಎಂದ. 


ರಾಜ ಹೀಗೆ ಮುಂದೆ ಹೋಗುವಾಗ ನದಿ ಕಾಣಿಸಿತು. ರಾಜನಿಗೆ ಈಜು ಬರುತ್ತಿರಲಿಲ್ಲ. ಅಲ್ಲಿಚಿಕ್ಕ ಮಕ್ಕಳೆಲ್ಲನೀರಿನಲ್ಲಿಈಜುತ್ತಾ ಆಟವಾಡುತ್ತಿದ್ದರು. ಕತ್ತಲಾಗುತ್ತಾ ಬಂದಾಗ ರಾಜನಿಗೆ ನದಿ ದಾಟಿ ಅರಮನೆ ತಲುಪಲೇ ಬೇಕಾಯಿತು. ಕೂಡಲೇ ಅಲ್ಲಿದ್ದ ಜನರನ್ನು ಕರೆದು, ನಾನು ರಾಜ. ನನ್ನನ್ನು ಮತ್ತು ಕುದುರೆಯನ್ನು ಈ ನದಿಯಿಂದ ದಾಟಿಸಿ ಆ ದಡಕ್ಕೆ ಕೊಂಡೊಯ್ಯಿರಿ' ಎಂದು ಆಜ್ಞಾಪಿಸಿದ. ಜನರೆಲ್ಲರೂ ಓಡೋಡಿ ಬಂದು ರಾಜನನ್ನು ಹೊತ್ತು ನದಿಯಲ್ಲಿನಡೆದರು ಮತ್ತು ಕುದುರೆಯನ್ನು ಎಳೆದುಕೊಂಡು ಹೋಗಿ ದಡ ಮುಟ್ಟಿಸಿದರು. 


ಅರಮನೆ ಸೇರಿದ ರಾಜ ತನ್ನ ಮಹಾರಾಣಿಯನ್ನು ಕರೆದು, ನಾನು ರಾಜ. ನನಗೆ ತಿಳಿಯದೇ ಇರುವ ವಿದ್ಯೆಯೇ ಇಲ್ಲಎಂದೆನಿಸಿದ್ದೆ. ಆದರೆ ಮರ ಏರಿ ಹಣ್ಣುಗಳನ್ನು ಕೊಯ್ಯುವ ಕಲೆ ನನಗೆ ತಿಳಿದೇ ಇಲ್ಲ. ನಾನು ಸುಖದ ಅರಮನೆಯಲ್ಲಿಹೇಗೆ ಬೇಕಾದರೂ ಮಲಗುವೆ ಎಂದೆನಿಸಿದ್ದೆ. ಆದರೆ ಅಲ್ಲೊಬ್ಬ ಮಣ್ಣಿನ ಮೇಲೆಯೇ ಸುಖವಾಗಿ ಮಲಗಿದ್ದ. ನನಗೆ ಅಲ್ಲಿನಿದ್ರೆಯೇ ಬರಲಿಲ್ಲ. ಈಜಿ ನದಿ ದಾಟಲೂ ನನಗೆ ತಿಳಿದಿಲ್ಲ. ಅರಮನೆಯಿಂದ ಒಮ್ಮೆಯೂ ಹೊರಗೆ ಹೋಗದ ನಾನು ಈ ಆಸ್ತಿ ಧನಕನಕದಲ್ಲಿಯೇ ಬದುಕಿ ಇದನ್ನೇ ಸುಖ ಜೀವನ ಎಂದು ಭಾವಿಸಿರುವೆ. ಆದರೆ ಅವರೆಲ್ಲಅಷ್ಟೋ ಇಷ್ಟೋ ಹಣದಲ್ಲಿಹೇಗೆ ಸುಖವಾಗಿದ್ದಾರೆ ನೋಡು ಎಂದ. ಆಗ ಮಹಾರಾಣಿ ಆತನಿಗೆ ನೀವು ರಾಜ ಎಂಬ ನಿಮ್ಮ ಮನಸ್ಥಿತಿಯೇ ನಿಮಗೆ ಮುಳ್ಳಾಗಿದೆ. ನೀವು ಸಾಮಾನ್ಯರಲ್ಲಿಸಾಮಾನ್ಯರಾಗಿ ಬದುಕಿ. ಆಗ ಎಲ್ಲವೂ ನಿಮಗೆ ಸಿದ್ಧಿಸುತ್ತದೆ. ಪ್ರಜೆಗಳು ಬಹಳ ಕಷ್ಟದಲ್ಲಿಬದುಕು ನಡೆಸುತ್ತಿದ್ದಾರೆ ಎಂದು ಅರಿತುಕೊಳ್ಳಿ ಎಂದಳು. ಆಗ ರಾಜನಿಗೆ ತನ್ನ ತಪ್ಪಿನ ಅರಿವಾಗಿ ಪ್ರಜೆಗಳ ಒಳಿತಿಗಾಗಿ ಅನೇಕ ಕೆಲಸಗಳನ್ನು ಮಾಡಿ ಅವರಿಗಾಗಿಯೇ ಬದುಕಿದನು. 




Rate this content
Log in