StoryMirror Feed

Children Stories

4.0  

StoryMirror Feed

Children Stories

ಮಕ್ಕಳ ಕಥೆ: ಪರೋಪಕಾರಿ ರಾಮು

ಮಕ್ಕಳ ಕಥೆ: ಪರೋಪಕಾರಿ ರಾಮು

1 min
12.5K


ರಾಮು, ರವಿ ಮತ್ತು ಶಂಕರ ಜೊತೆಯಾಗಿ ಶಾಲೆಯಿಂದ ಮನೆಗೆ ಬರುತ್ತಿರುವಾಗ ರಸ್ತೆ ಬದಿಯಲ್ಲಿ ನಾಯಿಮರಿಯೊಂದು ಕಾಲಿಗೆ ಗಾಯವಾಗಿ ನರಳುತ್ತಾ ಬಿದ್ದಿತ್ತು. ಅದು ನೋವಿನಿಂದ ಅರಚುತ್ತಿತ್ತು. ಈ ಶಬ್ದ ಕೇಳಿ ಎಲ್ಲರೂ ಅತ್ತ ಓಡಿ ಬಂದು ನೋಡಿದರು. ನಾಯಿಮರಿಯ ಮೈಯಿಂದ ರಕ್ತ ಹರಿಯುತ್ತಿತ್ತು. 


ಅಯ್ಯೋ ಪಾಪ, ಪುಟ್ಟ ನಾಯಿಮರಿ. ಗಾಯಗೊಂಡು ನಡೆಯಲಾಗದೆ ಪರದಾಡುತ್ತಿದೆ. ಏನ್ಮಾಡೋದು ಎಂದು ರಾಮು ಗೆಳೆಯರನ್ನು ಕೇಳಿದಾಗ ಅವರೆಲ್ಲಾ ಏಕಕಂಠದಿಂದ ನಮಗ್ಯಾಕೆ ಬೇಕು ಈ ಉಸಾಬರಿ? ಮನೆಗೆ ಹೋಗೋದು ಲೇಟಾದ್ರೇ ಮಮ್ಮಿ, ಡ್ಯಾಡಿ ಬೈತಾರೆ ಎಂದು ಕುಂಟು ನೆಪ ಹೇಳಿ ಅಲ್ಲಿಂದ ಪಾರಾದರು. 


ರಾಮುವಿಗೆ ಆ ಪುಟ್ಟ ನಾಯಿಮರಿಯನ್ನು ಬಿಟ್ಟು ಹೋಗಲು ಮನಸ್ಸಾಗಲಿಲ್ಲ. ಆಗ ಅಲ್ಲೇ ಹತ್ತಿರದಲ್ಲಿ ಪಶು ಚಿಕಿತ್ಸಾಲಯ ಇದ್ದಿದ್ದು ಆತನಿಗೆ ನೆನಪಾಯಿತು. ತಡ ಮಾಡದೆ ಆತ ನಾಯಿಮರಿಯನ್ನು ಮೆಲ್ಲಗೆ ಎತ್ತಿಕೊಂಡು ಅಲ್ಲಿಗೆ ಹೋದ. ಅಲ್ಲಿದ್ದ ವೈದ್ಯರು ನಾಯಿಮರಿಯ ಕಾಲಿನ ಗಾಯಕ್ಕೆ ಸೂಕ್ತ ಔಷಧ ಹಾಕಿ ಬ್ಯಾಂಡೇಜ್‌ ಕಟ್ಟಿದರು. 


ನಾಯಿಮರಿಗೆ ಸ್ವಲ್ಪ ನೋವು ಕಡಿಮೆಯಾಗಿ ನಡೆದಾಡಲು ಶಕ್ತಿ ಬಂತು. ವೈದ್ಯರು ರಾಮುವಿನ ಪ್ರಾಣಿ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಯಾರೇ ಆಗಲಿ, ಸಂಕಷ್ಟದಲ್ಲಿರುವವರಿಗೆ ನಮ್ಮಿಂದಾದ ಸಹಾಯ ಮಾಡಬೇಕು. ಅದುವೇ ಮಾನವ ಧರ್ಮ ಎಂದು ಅವರು ರಾಮುವಿಗೆ ಹೇಳಿದರು. Rate this content
Log in