ಮಕ್ಕಳ ಕಥೆ: ಹುಡುಗನ ಜಾಣ್ಮೆ
ಮಕ್ಕಳ ಕಥೆ: ಹುಡುಗನ ಜಾಣ್ಮೆ
ರಾಮಪುರ ಎಂಬ ಊರಿಗೆ ಐದಾರು ವರ್ಷಗಳಿಂದ ಮಳೆ ಬಂದಿರಲಿಲ್ಲ. ಬೆಳೆ ಇಲ್ಲ, ತಿನ್ನಲು ಆಹಾರವಿಲ್ಲ ಮತ್ತು ಕುಡಿಯಲು ನೀರು ಕೂಡ ಸಿಗದಷ್ಟು ಅಲ್ಲಿನ ಜನರಿಗೆ ಕಷ್ಟ ಬಂದಿತ್ತು. ಒಂದು ದಿನ ಅಲ್ಲಿಗೆ ಬಂದ ಸನ್ಯಾಸಿಯೊಬ್ಬರು ಬೆಟ್ಟದ ಆಚೆ ಬದಿಯಲ್ಲಿ ಒಬ್ಬ ಋುಷಿಯಿದ್ದಾರೆ. ನಿಮ್ಮಲ್ಲಿ ಯಾರಾದರೂ ಒಬ್ಬರು ಅಲ್ಲಿಗೆ ಹೋಗಿ ಸಮಸ್ಯೆ ಹೇಳಿಕೊಂಡರೆ ಅವರು ಖಂಡಿತಾ ಮಳೆ ಬರಿಸಬಲ್ಲರು ಎಂದು ಹೇಳಿ ಹೋದರು.
ಮರುದಿನವೇ ಊರಿನ ಇಬ್ಬರು ಯಜಮಾನರು ಬೆಟ್ಟದ ಕಾಡಿನ ಹಾದಿಯಲ್ಲಿ ಹೊರಟರು. ಆದರೆ ಸಂಜೆ ಹೊತ್ತಿಗೆ ಅವರಲ್ಲೊಬ್ಬ ಹೆಣವಾಗಿ ಊರಿನ ಅಗಸಿಯಲ್ಲಿ ಬಿದ್ದಿದ್ದನು. ಇನ್ನೊಬ್ಬನನ್ನು ಬೆಟ್ಟದ ರಾಕ್ಷ ಸ ತಿಂದು ಹಾಕಿದ್ದ. ಹೆಣದೊಂದಿಗೆ ಬಂದಿದ್ದ ರಾಕ್ಷ ಸ ಕಾಡಿನ ದಾರಿಯಲ್ಲಿ ಯಾರಾದರೂ ಸುಳಿದರೆ ಸುಮ್ಮನಿರಲ್ಲ ಅಂತ ಹೇಳಿ ಹೋಯಿತು. ಅಂದಿನಿಂದ ಯಾರೂ ಆ ಪ್ರಯತ್ನ ಮಾಡಲು ಹೋಗಲಿಲ್ಲ.
ಒಬ್ಬ ಪುಟಾಣಿ ಹುಡುಗ ಇದನ್ನು ಗಮನಿಸುತ್ತಿದ್ದ. ಊರಿಗೆ ಇಷ್ಟೊಂದು ಕಷ್ಟ ಬಂದಿರುವಾಗ ನಾನೇಕೆ ಪ್ರಯತ್ನಿಸಬಾರದು ಎಂದು ಯೋಚಿಸಿದ. ಆದರೆ ಹೇಗೆ ಹೋಗುವುದು?, ಅಲ್ಲಿ ಕೊಲ್ಲುವ ರಾಕ್ಷ ಸನಿದ್ದನಲ್ಲ, ಏನು ಮಾಡುವುದು? ಎಂದೆಲ್ಲಾ ಯೋಚನೆ ಮಾಡಿದ. ಏನಾದರೂ ಆಗಲಿ ಎಂದು ನಿರ್ಧರಿಸಿ ರಾತ್ರಿ ಎಲ್ಲರೂ ಮಲಗಿರುವಾಗ ಮನೆಯಿಂದ ಹೊರಟು ಕಾಡಿನ ಹಾದಿಯಲ್ಲಿ ನಡೆದ. ರಾಕ್ಷ ಸನ ಭಯವಿದ್ದರೂ ಧೈರ್ಯ ಮಾಡಿ ಹೆಜ್ಜೆ ಹಾಕಿದ.
ದೂರದಿಂದಲೇ ಆ ಹುಡುಗನನ್
ನು ನೋಡಿದ ರಾಕ್ಷ ಸ ಹಾರಿಕೊಂಡು ಹುಡುಗನ ಬಳಿ ಬಂದ. ಹುಡುಗ ಹೆದರದೆ ಅದರ ಮುಂದೆ ನಿಂತ. ಆಗ ರಾಕ್ಷ ಸ ನಿನಗೆಷ್ಟು ಧೈರ್ಯ? ನನ್ನನ್ನು ಕಂಡರೆ ಎಲ್ಲರೂ ಹೆದರಿ ಓಡುವಾಗ ನೀನು ಬಂದಿರುವೆ. ನಿನಗೆ ಬದುಕಲು ಆಸೆ ಇಲ್ಲವೇ ಎಂದು ಕೇಳಿದ. ಆಗ ಹುಡುಗ ಭಯ ಯಾಕೆ?' ಎಂದು ಕೇಳಿದ. ನಿನ್ನನ್ನು ಕೊಲ್ಲುತ್ತೇನಲ್ಲ ಅದಕ್ಕೆ' ಅಂದ ರಾಕ್ಷ ಸ. ಯಾಕೆ ಕೊಲ್ಲುವುದು ನೀನು? ಎಂದು ಕೇಳಿದ ಹುಡುಗ. ನನ್ನ ಊಟಕ್ಕಾಗಿ' ಅಂದಿತು ರಾಕ್ಷ ಸ.ಆಗ ಹುಡುಗ ನೀನು ಬಹಳ ಧೈರ್ಯವಂತ, ಬಲಶಾಲಿ ಎಂದು ತಿಳಿದಿದ್ದೆ. ಆದರೆ ನೀನು ಕೇವಲ ಒಬ್ಬಂಟಿ. ಈ ಚಿಕ್ಕ ಹುಡುಗನ ಮೇಲೆ ನಿನ್ನ ಪೌರುಷ ಒಳ್ಳೆಯದಲ್ಲ. ನಾಳೆ ನಿನ್ನ ಗೆಳೆಯರ ಮುಂದೆ ಇದನ್ನು ಹೇಳಿದರೆ ನಿನ್ನ ಮರ್ಯಾದೆ ಏನಾಗುತ್ತದೆ ಗೊತ್ತಾ?' ಎಂದು ಹೇಳಿದ. ಆ ಮಾತು ಕೇಳಿ ರಾಕ್ಷ ಸನಿಗೆ ನಾಚಿಕೆ ಆಯ್ತು. ಹಾಗಾದರೆ ನಾನು ಏನು ಮಾಡಬೇಕು ಹೇಳು?' ಅಂದಾಗ ಹುಡುಗ ಈ ಬೆಟ್ಟದ ಆಚೆ ಒಬ್ಬ ಋುಷಿಯಿದ್ದಾರೆ. ಅವರ ಬಳಿ ಬಾ ಹೋಗೋಣ. ಅಲ್ಲಿ ಮುಂದಿನ ಮಾತು' ಅಂತ ಹೇಳಿದ. ಇಬ್ಬರೂ ಋುಷಿಗಳ ಹತ್ತಿರ ಹೋದರು.
ಋುಷಿಗಳು ಹುಡುಗನ ಇಂಗಿತವನ್ನು ಕಣ್ಣಿನ ಸನ್ನೆಯಲ್ಲೇ ಓದಿ ಮಂತ್ರದಂಡವನ್ನು ರಾಕ್ಷ ಸನ ಕಡೆ ಬೀಸಿದರು. ರಾಕ್ಷ ಸ ಅಲ್ಲೇ ಕುಸಿದುಬಿದ್ದ. ಋುಷಿಗಳು ಹುಡುಗನನ್ನು ಇಲ್ಲಿಗೆ ಬಂದ ಕಾರಣ ಕೇಳಿದಾಗ ಆ ಹುಡುಗ ಊರಿನಲ್ಲಿ ಮಳೆಯ ಅಭಾವವನ್ನು ವಿವರಿಸಿ ಸಹಾಯ ಕೋರಿದ. ಋುಷಿಗಳು ಹುಡುಗನ ಜತೆ ಊರಿಗೆ ಬಂದು ಪರ್ಜನ್ಯಯಾಗ ಮಾಡಿದರು. ಯಾಗ ಮುಗಿದಾಗ ಮಳೆ ಧೋ ಎಂದು ಸುರಿಯಲು ಆರಂಭಿಸಿತು. ಊರಿನ ಜನ ಖುಷಿಯಲ್ಲಿ ಕುಣಿದಾಡಿದರು. ಹುಡುಗನ ಧೈರ್ಯ ಮತ್ತು ಬುದ್ಧಿವಂತಿಕೆಯನ್ನು ಕೊಂಡಾಡಿದರು.