STORYMIRROR

Vaishnavi S Rao

Children Stories Inspirational Children

4  

Vaishnavi S Rao

Children Stories Inspirational Children

ಕಾತುರ

ಕಾತುರ

4 mins
281

ನನ್ನದು ಒಂದೇ ನೋಟ ಅವರು ಇಂದು ಬರುತ್ತಾರೆ ಎನ್ನುವ ನನ್ನ ಮನಸಿನ ತವಕವು ಇಂದು ನಿನ್ನೆಯದ್ದು ಅಲ್ಲ ಅದು ಸುಮಾರು ಒಂದು ವರುಷಗಳ ಹಿಂದೆ. ನಾನು ಯಾವಾಗಲು ಅವರ ನೆನಪಿನಲ್ಲೇ ಇರುವಾಗ ನನ್ನ ಜೊತೆ ನನ್ನ ನೆಚ್ಚಿನ ಕೂಸು ಬಂದು ಅಮ್ಮ ಅಮ್ಮ ಯಾವಾಗ ಬರುತ್ತಾರೆ..............


ಇಂದು ಕೇಳುವಾಗ ಇವತ್ತು ಬರುತ್ತಾರೆ ಎಂದು ಹೇಳುವಾಗ ನನ್ನ ಮನದಲ್ಲಿ ಇನ್ನೂ ತವಕ ಹೆಚ್ಚಾಗ ತೊಡಕಿತು. ಅವಾಗ ಅವಳ ನೆಚ್ಚಿನ ಅಂಚು..........  


ಅವರ ತೊಡೆಯ ಮೇಲೆ ಕುಳಿತುಕೊಂಡು ಅವರು ಹೇಳುವ ಸಾಹಸ ಕೇಳಿ ಅವಳು ನಮ್ಮವರ ಹಾಗೆ ಆಗುತ್ತೇನೆ ಎಂದು ಹೇಳುವ ಮುದ್ದು ಮಾತುಗಳನ್ನು ಕೇಳುವಾಗ ನನಗೆ ಒಮ್ಮೆ ಕಣ್ಣಿನ ಅಂಚಿನಲ್ಲಿ ನೀರುಬರುವುದು. ಅವಾಗ ನಾನು ಅವರ ಜೊತೆಯಲ್ಲಿ ಕಳೆದ ಆ ಸವಿನೆನಪು ಗಳನ್ನು ಮತ್ತೆ ಮೇಲಕು ಹಾಕಿದಂತೆ ಭಾಸವಾಗುತ್ತದೆ.ಸುಂದರ ಹಚ್ಚಹಸಿರು ಕಾಡುಪ್ರದೇಶದಲ್ಲಿ ಮುದ್ದುಮುದ್ದಾ ಗಿಣಿಗಳ ಹಾಗೆ ನಮ್ಮ ನಿಮ್ಮ ನಾಮಗಮ ಆಯಿತು. ಅಂಥ ಸಂದರ್ಭದಲ್ಲಿ ನಮ್ಮವರ ಮುಖದಲ್ಲಿ ಇದ್ದ ಆ ಮುಗಳ್ನಗು ನನಗೆ ಇಷ್ಟವಾಯಿತು. ಆದರೆ ಅವರ ಮುಖದಲ್ಲಿ ಕಾಣುತ್ತಾ ಇದ್ದ ಆ ದೇಶಪ್ರೇಮದ ಕಿಚ್ಚು ಅಮರ ಸನ್ನಿವೇಶವನ್ನು ಸೃಷ್ಟಿಮಾಡಿತು.......... 


ಅವರು ಮೊದಲು ನನ್ನ ಜೊತೆ ಮಾತುಗಳನ್ನು ಆಡಿದಾಗ ಅವರು ಸುಭಾಷ್ ಚಂದ್ರ  ಮತ್ತು ಈ ದೇಶಕ್ಕೆ ಕೊಡುಗೆ ನೀಡಿದ ಸಾಹಸಿಗಳ ಚರಿತ್ರೆ ಹೇಳಿದಾಗ ಇದನ್ನು ಹೇಳಿದಾಗ ನನಗೆ ಖುಷಿಯಾಗಿ ನಿಜವಾಗಲೂ ನಾನು ಯಾವ ಜನುಮದಲ್ಲಿ ಪುಣ್ಯಮಾಡಿದೆನೋ ತಿಳಿಯದು.......... 



ನಮ್ಮ ಮದುವೆಯ ಸಂದರ್ಭದಲ್ಲಿ ಅವರು ನನ್ನ ಜೊತೆ ಎದ್ದಿದ್ದು ಒಂದು ಕ್ಷಣ ಆದರೂ ಅವರು ನಮ್ಮ ದೇಶವನ್ನು ಕಾಯುವ ಪುಣ್ಯದ ಕಾರ್ಯವನ್ನು ಮಾಡುತ್ತಾ ಇರುವುದಕ್ಕೆ ನನ್ನ ಕೈನಲ್ಲಿ ಸಣ್ಣ ತ್ಯಾಗದ ಭಾವನೆ.ಹೀಗೆ ಮುಂದು ಸಾಗುತ್ತಾ ಇರುವಾಗ ನನ್ನ ಮುದ್ದು ಮಗಳು ಅಜ್ಜ ತೊಡೆಯ ಮೇಲೆ ಕುಳಿತುಕೊಂಡು ದಿನಕ್ಕೆ ಒಂದುರಂತೆ ಕತೆಗಳನ್ನು ಕೇಳುವ ಪರಿ ಆಕೆಯದ್ದು. ಅವಳು ಹೀಗೆ ಕೇಳಿದಾಗ ಪುಟ್ಟು ಇವತ್ತು ನನ್ನ ಸೈನಿಕ ಜೀವನದ ಪರಿಯನ್ನು ತಿಳಿಸೋದ ಎಂದು ಹೇಳಿದಾಗ.........



ಆಕೆಯ ಉತ್ಸಾಹ ಎಂದರೆ ಬಂದೆ ಎಂದು ಹೇಳಿ ಅವಳ ಕೋಣೆಯ ಮೇಲೆ ಒಂದು ಪುಸ್ತಕವನ್ನು ತೆಗೆದುಕೊಂಡು ಬಂದು ಅಜ್ಜಿ ನೀನು ಬಾ ಎಂದು ಎಳೆದುಕೊಂಡು ಕೂರಿಸಿಕೊಂಡು..........


ಇವಳು ಕೂತು ಹೇಳಿ ಅಜ್ಜ ಇದು ಏನು ಪುಟ್ಟು ಎಂದು ಕೇಳಿದಾಗ ನನಗೆ ಒಂದು ಪುಸ್ತಕವನ್ನು ಬರೆಯೋಣ ಎಂದು ಹೇಳಿದಾಗ ಅಜ್ಜ ಪುಟ್ಟು ಇಬ್ಬರು ಆಲಿಂಗನ ಮಾಡಿಕೊಂಡು ಎಷ್ಟು ಸಣ್ಣ ವಯಸ್ಸಿಗೆ ಎಷ್ಟು ದೊಡ್ಡ ಕೆಲಸ ಮಾಡುತ್ತಾ ಇದ್ದಿಯಾ ಎಂದು ಹೇಳಿದಾಗ ಹಾಗೆ ಏನು ಎಲ್ಲಾ ಅಜ್ಜ ಹೇಳಿ ಎಂದು ಹೇಳಿದಾಗ ಅವರು ಪ್ರಾರಂಭಮಾಡಿದರು......... 


ನಾನು ಅಲ್ಲಿ ಅವಳಿಗೆ ಊಟಕ್ಕೆ ಜೋಳದ ರೊಟ್ಟಿ ಕಳಿಸುತ್ತಾ ನಾನು ಅಲ್ಲೇ ಅವರು ಹೇಳಿದ ಮಾತುಗಳನ್ನು ಆಲಿಸುತ್ತಾ ಇದ್ದೆ. ತನ್ನ 6ನೇ ವಯಸ್ಸಿನಲ್ಲಿ ಸೈನಿಕ ಜೀವನಕ್ಕೆ ನನ್ನನ್ನು ತೊಡಗಿಸಿಕೊಂಡೆನು. ಅವಾಗ ಮೊದಲಬಾರಿಗೆ ನಾನು ಆಯುಧವನ್ನು ಹಿಡಿದುಕೊಂಡು ಭಾರತದೇಶದ ಸಂರಕ್ಷಣೆ ನನ್ನ ಗುರಿ ಎಂದು ತಿಳಿದು ಎಷ್ಟು ವರ್ಷಗಳ ಕಾಲ ಜೀವ ತೆತ್ತಿದೆ.......... 


ನಂತರ 10ನೇ ವಯಸ್ಸಿಗೆ ನಾನು ಆಂಗ್ಲರ ವಿರುದ್ಧ ನಮ್ಮ ತಂದೆಯ ಜೊತೆಯಲ್ಲಿ ನಾನು ಹೋದಾಗ ನನ್ನ ಕಿಚ್ಚು ಇನ್ನೂ ಹೆಚ್ಚಿತು. ನಮ್ಮ ತಂದೆಯವರು ಸಣ್ಣ ವಯಸ್ಸಿಗೆ ನನ್ನ ಆಗಲಿ ಹೋದರು. ಅವಾಗ ನಾನು ಅವರ ವಿರುದ್ಧ ಹೋರಾಡಿದೆನು. ಸುಮಾರು 30ನೇ ವಯಸ್ಸಿಗೆ ನನ್ನ ದೇಶಕ್ಕಾಗಿ ತನ್ನ ದೇಹವನ್ನು ಅರ್ಪಣೆ ಮಾಡಿದೆನು. ಈಗೋ ಎಲ್ಲಿ ನೋಡು ಎಂದು ತೋರಿಸಿದಾಗ ಅವರ ಕಾಲು ತೋರಿಸಿದಾಗ ಅಜ್ಜ ಎಂದು ಆಕೆ ಒಮ್ಮೆ ಆಕೆಗೆ ಭಯ ಆಯಿತು.

ಯಾಕೋ ಪುಟ್ಟು ಭಯಪಡುತ್ತೀಯ ಧೈರ್ಯವಾಗಿ ಇರಬೇಕು. ನಾನು ಅವಾಗ ಕಳೆದುಕೊಂಡಾಗ ಅದರಲ್ಲಿಯೂ ನಾನು ನನ್ನ ದೇಶಕ್ಕಾಗಿ ಅರ್ಪಣೆ ಭಾವನೆ ಹೊಂದಿರುವ ಗಟ್ಟಿ ಮನಸ್ಸು ಮತ್ತು ಛಲ ನನ್ನದ್ದು........


ಈಗ ನಿನ್ನ ಅಪ್ಪಾಜಿ ನೋಡು ಎಂದು ಹೇಳಿದಾಗ ನಾನು ಹೋಗಿ ದೇಶಕ್ಕಾಗಿ ಅರ್ಪಣೆ ಮತ್ತು ಸೇವೆಯನ್ನು ಮಾಡುತ್ತೇನೆ ಇದು ಸತ್ಯ ಸತ್ಯ ಅಜ್ಜ ಅಜ್ಜಿ ನೋಡಿ ಎಂದು ದೇವರ ಇದ್ದರು ಅವಳು ಹೇಳಿದಾಗ ಅಜ್ಜ ಅಜ್ಜಿಯವರು ಗಟ್ಟಿಯಾಗಿ ಹಿಡಿದುಕೊಂಡು ಕಣ್ಣಿನ ಅಂಚಿನಲ್ಲಿ ನೀರು ಬಂದಿತು......... 


ಅಂಥ ಸನ್ನಿವೇಶ ಆಗುತ್ತಾ ಇರುವಾಗ ನಮ್ಮ ಮನೆಯ ಸಂಪರ್ಕದ ಕರೆ ಬಂದಿತು ಅವಾಗ ನಾನು ಸ್ವೀಕರಿಸುವ ಹೊತ್ತಿಗೆ ಪುಟ್ಟು ವೇಗದಲ್ಲಿ ಹೋಗಿ ಹಲೋ ಎಂದು ಹೇಳಿದಾಗ ನಾನು ಪುಟ್ಟು ಎಂದು ಹೇಳಿದಾಗ ಆಕೆ ನೀವು ಬರುತ್ತೀರಾ ಎಂದು ಕೇಳುವುದನ್ನು ಕಂಡು ನಾವು ಎಲ್ಲರಿಗೂ ಖುಷಿ ಸಂತೋಷವಾಯಿತು.

ಅವಾಗ ಅಜ್ಜ ಅಜ್ಜಿ ಮಾತುಗಳನ್ನು ಆಡುವುದನ್ನು ಕಂಡ ನನ್ನ ಮನವು ಸಂತೋಷಗೊಂಡಿತು. ಅವಾಗ ಪುತ್ತುವಿನ ಮುಖದಲ್ಲಿ ಕಂಡು ಎಷ್ಟೋ ವರ್ಷಗಳೇ ಆಯಿತು ಅವಳ ಮುದ್ದು ಮುದ್ದು ಮಾತುಗಳು ಅವರಿಗೆ ಹಳೆಯ ನೆನಪು ಎಂದರೆ ನಮ್ಮನ್ನು ಬಿಟ್ಟು ಹೋದಾಗ ಅವರ ಮುಖದಲ್ಲಿ ಎಂದ ಆ ನಗು ಈಗ ಬರುವಾಗ ಅದೇ ಉತ್ಸಾಹ ಹಾಗೆ ಇದೆ ಅವರಲ್ಲಿ ನಾನು ಮೆಲ್ಲನ್ನೇ ಅವಳಿಗೆ ಯಾವಾಗ ಬರುತ್ತಾರೆ ಎಷ್ಟು ಗಂಟೆಗೆ ಎಂದು ಕೇಳಿದಾಗ ಆಕೆಯು ನನಗೆ ಕಣ್ಣುಗಳಲ್ಲೇ ಉತ್ತರ ನೀಡಿದಳು...........



ಮಾವನವರಿಗೆ ಎಷ್ಟು ಖುಷಿ ಎಂದರೆ ಎಲ್ಲಾ ಊರಿಗೆ ಊರೇ ಮಗನು ಬರುತ್ತಾ ಇದ್ದಾನೆ ಎಂದು ಹೇಳಿ ಅವರ ಆಗಮನಕ್ಕಾಗಿ ಕಾಲವನ್ನು ಎಣಿಸುತ್ತ ಇದ್ದಾರೆ. ಅವಾಗ ನಾನು ಅವರಿಗೆ ಇಷ್ಟವಾದ ಪಾಯಸ ಕಜ್ಜಾಯ ಲಾಡು ಅವರಿಗೆ ಪ್ರಿಯವಾದ ಕಡುಬು ಕಾಯಿಹಾಲುಗಳನ್ನು ಮಾಡಿ ಅವರನ್ನು ಕರೆದುಕೊಂಡು ಬರುತ್ತೇನೆ ಎಂದು ನಮ್ಮ ಮಾವನವರು ಪುಟ್ಟು ಹೊರತರು. 

ನಾನು ಅವರ ನೆನಪಿನಲ್ಲೇ ನಾನು ಕಲ್ಪನಾ ಲೋಕಕ್ಕೆ ಜಾರಿದೆನು. ನಮ್ಮ ಅತ್ತೆಯಮ್ಮ ದೇವರ ಗುಡಿಯಲ್ಲಿ ಪ್ರಾಥನೆ ಮಾಡುತ್ತ ಇದ್ದರು.ಅವರು ನನ್ನ ಬಳಿ ಬಂದು ಅವರ ಮುಗ್ದತೆಯ ನಗುವು ನನ್ನ ಕಣ್ಣಮುಂದೆ ಬಂದ ಹಾಗೆ ಅವರು ನನ್ನ ಹಿಡಿದುಕೊಂಡು ಮುದ್ದುಮಾಡಿದ ಹಾಗೆ ಪುಟ್ಟುವಿನ ಜೊತೆ ಮುದ್ದು ಮುದ್ದು ಮಾತುಗಳನ್ನು ಆಗುವ ಹಾಗೆ ಎಲ್ಲವೂ ನನ್ನ ಕಲ್ಪನೆಯೋ ವಾಸ್ತವಿಕೆಗೆ ಮೀರಿದಂತೆ ಇದ್ದವು.......... 


ನಮ್ಮ ಅತ್ತೆಯಮ್ಮ ಮಗನನ್ನು ಸಣ್ಣಮಗುವಂತೆ ಊಟ ಪಾಯಸವನ್ನು ತಿನ್ನಿಸುವ ಹಾಗೆ ಬಾಸವಾಗತೊಡಗಿತು........ 



ಆ ಸಂದರ್ಭದಲ್ಲಿ ಯಾರೋ ನನ್ನ ಕರೆದ ಹಾಗೆ ಆಯಿತು ನೋಡಿದಾಗ ಮಾವನವರು ಬಂದು ನನ್ನ ಮುಖದಲ್ಲಿ ಇದ್ದ ಸಂತೋಷವನ್ನು ಗಮನಿಸಿದರು. ಅವಾಗ ಅವರು ಏನು ಮಾತುಗಳನ್ನು ಆಡದಿದ್ದಾಗ ನನಗೆ ಭಯವಾಯಿತು.

ಅವರ ಮುಖದಲ್ಲಿ ಯಾವ ಭಾವನೆಗಳು ಸಹ ವ್ಯಕ್ತಪಡಿಸದೇ ಇರುವುದುದನ್ನು ಕಂಡು ನನ್ನ ಮನದ ಹೃದಯವು ಒಂದು ನಿಮಿಷದಲ್ಲಿ ನಿಂತುಹೋಗಿದಂತೆ ಆಯಿತು. ಅವಾಗ ನನ್ನ ಪುಟ್ಟು ಬಂದಳು ಅವಳ ಮುಖದಲ್ಲಿ ಇರುವ ಪ್ರೀತಿಯ ಮುದ್ದು ನಗುವನ್ನು ಕಂಡು ಅವರು ಬಂದಿರುತ್ತಾರೆ ಎಂದು ತಿಳಿದುಕೊಂಡು.........


ಆ ವೇಳೆಯಲ್ಲಿ ವಾಹನದ ಶಬ್ದವನ್ನು ಕಂಡು ನಮ್ಮ ಅತ್ತೆಯಮ್ಮ ದೇವರ ಗುಡಿಯಿಂದ ಹೊರಗಡೆ ಬಂದರು ಅವಾಗ ನನಗೆ ಒಂದು ರೀತಿಯಲ್ಲಿ ಆಶ್ಚರ್ಯವೇ ನನ್ನ ಕಣ್ಣ ಮುಂದೆ ಬಂದು ಹಾಗೆ ಸೃಷ್ಟಿಯಾಗಿತ್ತು. ಅವಾಗ ನಾನು ಮೂಕಸದೃಶವಾಗಿ ಹೋದೆ......... 


ಅವಾಗ ಅವರು ನನ್ನ ಎಲ್ಲರ ಕಾಲಿಗೆ ಬಿದ್ದು ಎಲ್ಲರೂ ಮನೆಯ ಒಳಗಡೆ ಹೋದರು ನಾನು ಅಲ್ಲೇ ಇದ್ದಿದ್ದೇ ಅಂಥ ಸಂದರ್ಭದಲ್ಲಿ ನನ್ನ ಪುಟ್ಟು ಅಮ್ಮ ಎಂದು ಕರೆದಾಗ ನಾನು ಒಮ್ಮೆಲೇ ಭಯ ಗೊಂಡೆನು.

ಪುಟ್ಟು ಏನು ಆಯಿತು ಯಾವ ಕನಸಿನಲ್ಲಿ ಇದ್ದೀರಾ ಎಂದು ಕೇಳಿದಾಗ ಹಾಗೆ ಏನು ಎಲ್ಲಾ ಪುಟ್ಟು ಎಂದು ಹೇಳಿದಾಗ ಅವಳ ಸಣ್ಣ ಕೈನಲ್ಲಿ ಅಪ್ಪಾಜಿ ನೋಡಿ ಅಲ್ಲಿ ಎಂದು ತೋರಿಸಿದಾಗ ನನ್ನ ಮನದಲ್ಲಿ ಹೊಸ ಭರವಸೆಯನ್ನು ತಿಳಿಸುವ ತವಕ ಸೃಷ್ಟಿಸಿತು.......... 


ಅವಾಗ ಪುಟ್ಟವನ್ನು ಕರೆದುಕೊಂಡು ಅವರ ಬಳಿ ಕರೆದುಕೊಂಡು ಹೋದಾಗ ಅವರು ಅಮ್ಮ ಅಪ್ಪಾಜಿಯವರ ಜೊತೆಯಲ್ಲಿ ಮಾತುಗಳನ್ನು ಆಡುವುದನ್ನು ಕಂಡು ಯಾಕೆ ನಾನು ಸುಮ್ಮನೆ ತೊಂದ್ರೆ ಕೊಡುವುದು ಬೇಡ ಎಂದು ಮರೆಯಲ್ಲಿ ನಿಂತು ಕೇಳುತ್ತಾ ಇರುವಾಗ ನಮ್ಮವರು ಬಾರೆ ಎಂದು ಕರೆದಾಗ ನನಗೆ ಭಯವಾಯಿತು............ 



ಪುಟ್ಟು ನನ್ನ ಕೈಯನ್ನು ಹಿಡಿದುಕೊಂಡು ಅವರ ಕೋಣೆಗೆ ಪ್ರವೇಶ ಮಾಡಿದೆವು. ಅವರು ನಮ್ಮ ಸಂಸ್ಕೃತಿಯನ್ನು ಇನ್ನೂ ಹಾಗೆ ನೆನಪಿನಲ್ಲಿ ಎತ್ತುಕೊಂಡಿದರೆ ನಮ್ಮ ಮಾವನವರು ಇದ್ದ ಹಾಗೆ ಸಂಪ್ರದಾಯದ ಉಡುಪಿಗೆ ಪ್ರಾಮುಖ್ಯತೆ ಕೊಟ್ಟಿದ್ದರು ಅವರ ಮುಖದಲ್ಲಿ ಅದೇ ಗಾಂಭೀರ್ಯತೆ ಕಾಣುತ್ತಾ ಇತ್ತು........... 



ಅವರು ಕರೆದಾಗ ಅತ್ತೆ ಮಾವ ಇಬ್ಬರು ನಿನಗೆ ಅವಳು ತಿಂಡಿ ಮಾಡಿದಳೇ ತೆಗೆದುಕೊಂಡು ಬರುತ್ತೇವೆ ಎಂದು ಹೇಳಿದಾಗ ನಾನು ಬಂದೆ ಎಂದು ಹೇಳಿದಾಗ ಮಾತಾಡಿ ಎಂದು ಹೊರಟರು ಅಂಥ ಸಂದರ್ಭದಲ್ಲಿ ಅವರು ಒಂದೇ ಮಾತು ಆಡಿದ್ದು ನಾನು ಯಾವಾಗ ಮರಣ ಹೊಂದುತ್ತೇನೋ ತಿಳಿಯದು ಆದರೆ ನನ್ನ ಜವಾಬ್ದಾರಿ ನೀನು ನಿರ್ವಹಿಸುತ್ತಿರುವುದು ಉತ್ತಮ ಎಂದು ಹೇಳಿದಾಗ ನಾನು ಯಾಕೆ ಎಂದು ಹೇಳಿದಾಗ ನನ್ನ ಸಣ್ಣ ಕಾಣಿಕೆ ಎಂದು ತಿಳಿಸಿದರು. 




ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ