ಬಾಂಧವ್ಯ
ಬಾಂಧವ್ಯ
1 min
20
ಓರ್ವ ಧರಿತ್ರಿಗೆ ಇಬ್ಬರು ಸುತರು
ಅವರೇ ಅಹಸ್ಕರ ಹಾಗು ಶಶಧರ.
ಭೇದ ಭಾವ ತೋರದ ಹೆತ್ತ ಮಡಿಲೇ
ಸಹಬಾಳ್ವೆಯ ಪ್ರೀತಿಯ ಮಂದಿರ.
ಅಗ್ರಜನೇ ಶ್ರೇಷ್ಠನೆಂದು ಶಶಧರ ಹೇಳಿದನು.
ಅನುಜನೇ ಸಮರ್ಥಕನೆಂದು ಅಹಸ್ಕರ ಹೇಳಿದನು.
ಇಬ್ಬರ ಮಾತುಗಳ ಕೇಳಿ ಖುಷಿಪಟ್ಟಳು ಧರಿತ್ರಿಯು.
ಇಬ್ಬರ ಪ್ರೀತಿಯ ಕಂಡು ಜನನಿಯ ಜನುಮ ಸಾರ್ಥಕವು.
