ಕೃಷ್ಣ ಕುಟೀರ-ಭಾಗ-2
ಕೃಷ್ಣ ಕುಟೀರ-ಭಾಗ-2
ಸುರೇಂದ್ರ ಏಟು ತಿಂದು ಹಾಸಿಗೆಯಲ್ಲಿ ಮಲಗಿದ್ದನು ವಿಭಾ ಸುರೇಂದ್ರ ತಾಯಿ ಹಾಗೂ ವಿಶ್ವನಾಥ ಸುರೇಂದ್ರನ ತಾತ ಗಾಯಗಳಿಗೆ ಶಾಖವನ್ನು ಕೊಡುತ್ತಿದ್ದರು.
ವಿಶ್ವನಾಥ ತನ್ನ ಮಗನಾದ ಜಗನ್ನಾಥನನ್ನು ಕುರಿತು ಜಗ್ಗ ನಿನಗೆ ತಲೆ ಸರಿ ಇದೆಯಾ ಯಾರಾದ್ರೂ ಬೆಳೆಯುವ ಮಕ್ಕಳಿಗೆ ಹೀಗೆ ಹೊಡೆಯುತ್ತಾರಾ? ಒಳ್ಳೆ ಬೆತ್ತದಲ್ಲಿ ಜ್ವರ ಬರುವ ಹಾಗೆ ಹೋದಡೆದ್ದಾಲ್ಲವು
ಆಗ ಸುರೇಂದ್ರನ ಅಯ್ಯೋ ಅಮ್ಮ ಅಂತ ನೋವಿನಿಂದ ಕಿರುಚಿದ ಆವಾಗ ವಿಭಾ ಅಳುತ್ತಾ ನಿಮಗೆ ಮನುಷತ್ವ ಇಲ್ಲವೆ ಮಗುಗೆ ಹೀಗೆ ಹೊಡಿತೀರಲ್ಲ
ಜಗನ್ನಾಥ: hmm ಮಗು ಬೆರಳು ಚಿಪ್ಪು ಮಗು ನಾಲ್ಕು ಕತ್ತೆಯ ವಯಸ್ಸು ಇವನ ವಯಸ್ಸಿನ ಮಕ್ಕಳೆಲ್ಲ ಏನೇನೆಲ್ಲ ಸಾಧನೆ ಮಾಡುತ್ತಾರೆ ಈ ನನ್ ಮಗ ಪಿ.ಯು.ಸಿನಲ್ಲಿ ನಾಲ್ಕು ಸರಿ ಫೈಲ್ಲಾಗಿ ರೆಕಾರ್ಡ್ ಕ್ರಿಯೇಟ್ ಮಾಡಿದ್ದಾನೆ
ಆರು ತಿಂಗಳು ನೀನು ಕೊಟ್ಟ ಚಿನ್ನದ ಉಂಗುರವನ್ನು ಕಳಕೊಂಡಿದ್ದಾನೇ ನನ್ನಪ್ಪ ಕೊಟ್ಟ ಬಂಗಾರದ ಕಡವನ್ನು ಮೂರು ತಿಂಗಳ ಮುಂಚೆ ಕಳಕೊಂಡಿದ್ದಾನೇ ಇವತ್ತು ನಾನು ಬರುವುದು ಸ್ವಲ್ಪ ಲೇಟ್ ಆಗಿದ್ದಾರೆ ಚೈನನ್ನು ಕಳೆದುಕೊಳ್ಳುತ್ತ ಇದ್ದ ನನಗೆ ಯಾಕೋ ಡೌಟು ಅವುಗಳನ್ನು ಕಳೆದುಕೊಂಡದಲ್ಲ ಇವನು ಯಾರಿಗೂ ದಾನಮಾಡಿದನೇ
ಸುರೇಂದ್ರ: ಅಲ್ಲಮ್ಮ ಕೃಷ್ಣ ಕುಟೀರ ಮನೆಗೆ ಊರಲ್ಲಿ ಏನು ಮರ್ಯಾದೆ ಇದೆ ತಾತನನ್ನು ಮತ್ತು ಅಪ್ಪನನ್ನು ಊರಿನ ಜನ ದೇವರ ಸ್ಥಾನದಲ್ಲಿದ್ದಾರೆ ಅಂಥವರ ಮಗ ಯಾರೋ ಒಬ್ಬ ದಾರಿಹೋಕನತ್ರ ಜಗಳವಾಡಿ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತುವುದು ಅಸಹ್ಯ ಅನ್ಸಲ್ವಾ ಅದಕ್ಕೆ ನಾನು ಈ ವಂಶದ ಮರ್ಯಾದೆ ಎತ್ತಿಹಿಡಿಲಿಕೆ ಹಾಗೆ ಮಾಡಿದೆ ನಾನ್ ಮಾಡಿದ್ ತಪ್ಪಾ ಅಮ್ಮ
ಅದನ್ನು ಕೇಳಿದ ಜಗನ್ನಾಥನು ಸುರೇಂದ್ರನಿಗೆ ಕೋಪದಿಂದ ಒದೆಯಲು ಬಂದನು ಅವಾಗ ವಿಶ್ವನಾಥನು ಜಗನ್ನಾಥನನ್ನು ತಡೆದು ಜಗ್ಗು ಸುಮ್ನೆ ಇರೋ ಎಂದು ಪಕ್ಕಕ್ಕೆ ದುಡಿದ
ವಿಭಾ : ಹೌದ್ರೀ ಮಗುನ ಹೊಡೆದು ಸಾಯಿಸಿ ಬಿಡಿ ಇರಲಿ ನನ್ನ ಮಗ ಶೇಷ ಬರಲಿ ಇದೆ ನಿಮಗೆ
ಅವಾಗ ಜಗನ್ನಾಥನು ಲೆ ವಿಭಾ ಈ ದಂಡಪಿಂಡ ನಿನ್ನ ಮಗ ನಿನ್ನದೇ ಬುದ್ಧಿ ಬಂದಿರುವುದು ಶೇಷ ನನ್ನ ಮಗ ಇವನಿಗಿಂತ ಕೇವಲ ಮೂರು ವರ್ಷ ದೊಡ್ಡವನಾದರೂ ವಕಾಲತ್ತು ಮಾಡುತ್ತಿದ್ದಾನೆ ಇದುವರೆಗೆ ಯಾವ ಕೇಸು ಸೋಲಲಿಲ್ಲ ಎಂದು ಹೇಳಿ ತನ್ನ ಮಯ್ಯನ್ನು ಪುಲಕಿಸಿಧನು (( ಜಗನ್ನಾಥನು ತುಂಬಾ ಸಂತೋಷ ಹಾಗೂ ಹೆಮ್ಮೆಯಾಗದಾಗ ತನ್ನ body ಯನ್ನು shake ಮಾಡುತ್ತಾನೆ ಅದು ಅವನಿಗೆ subconsciously ಆಗುವ ಕ್ರಿಯೆ)
ಸುರೇಂದ್ರ ತನ್ನ ಅಮ್ಮನಾದ ವಿಭಾ ಹಾಗೂ ತನ್ನ ತಾತನಾದ ವಿಶ್ವನಾಥನನ್ನು ಕುರಿತು ಶುರುವಾಯ್ತು ಅಪ್ಪನದು ಬ್ರೇಕ್ ಡ್ಯಾನ್ಸ್ ಅಣ್ಣನ ಬಗ್ಗೆ ಮಾತನಾಡುವಾಗ ಅಪ್ಪ ಯಾವಗಳು ಬ್ರೇಕ್ ಡ್ಯಾನ್ಸ್ ಮಾಡ್ತಾರೆ ಆದರೆ ನನ್ನ ಬಗ್ಗೆ ಮಾತಾಡುವಾಗ ಯಾಕಪ್ಪಾ ರುದ್ರತಾಂಡವ ಆಡುತ್ತಾರೆ.
ವಿಶ್ವನಾಥ: ನೀನು ಹೀಗೆ ಆಡುತ್ತಿದ್ದರೆ ನನ್ನಮಗನೇ ನಿಂಗೆ ರುದ್ರತಾಂಡವ ಅಲ್ಲ ಒಂದು ದಿನ ನಿನ್ನನ್ನು ಭಕ್ತಕುಂಬಾರ ನಾಗೆ ಕಾಲಿನ ಒಳಗಡೆ ಹಾಕಿ ತುಳಿಯುತ್ತಾನೆ
