ನಾಡದೇವಿ
ನಾಡದೇವಿ

1 min

42
ಶಿರಬಾಗಿ ಮುನ್ನೆಡೆ ಯಾತ್ರಿಕನೆ,
ಬರೀ ಶಿಲೆಯಲ್ಲ ಇದು,
ಗತವೈಭವ ಸಾರುವ ಗುಡಿ,
ಇದರಂತರಾಳದ ಕಥೆಯರಿ ನೀ,
ಕೈ ಮುಗಿದು ಭಕ್ತಿ ಬಿಂಬಿಸು,
ನಾಡ ಹರಸಲು ಆಸೀನಳಾದ ತಾಯಿ ಇವಳು,
ಆದಿ ಕಾಲದಿಂದಲೂ ಪೊರೆಯುತ್ತಾ ಬಂದ ಮಾತೆ ಇವಳು,
ಇಕೆಯ ವಿಜಯ ಸಾಧನೆ ಅಪಾರ, ದುಷ್ಟರ ಶಿಕ್ಷಿಸಿ ನಮ್ಮೆಲರ ಪೊರೆಯುವ ನಾಡದೇವಿ ಇವಳು,
ಇವಳೆ ಜಗದಾಂಬ ಶಿರಸಿಯ ಮಾರಿಕಾಂಬಾ 👏🏻