STORYMIRROR

Shreenidhi Baindur

Others

1  

Shreenidhi Baindur

Others

ಮಾತೃ ಭೂಮಿ

ಮಾತೃ ಭೂಮಿ

1 min
218

ನಾ ಜನ್ಮತಳೆದಾಗ ಜಾಗ ಕೊಟ್ಟು ಸಲುಹಿದ ಆಶ್ರಯದಾತೆ ನೀ, 

 ನಾ ಬೆಳೆಯುವಾಗ ನನ್ನ ತುಳಿತವ ಸಹಿಸಿದ ಸಹನಾಮೂರ್ತಿ ನೀ, 

 ಹಸಿವಾದ ಜೀವಕ್ಕೆ ಅನ್ನಕೊಟ್ಟ ಅನ್ನದಾತೆ ನೀ, 

 ನಮ್ಮ ತಪ್ಪುಗಳ ಕ್ಷಮಿಸಿ ಜೊತೆಗಿರುವ ಮಾತೃಹೃದಯಿ ನೀ, 

 ಸಕಲ ಕಷ್ಟಗಳ ನಿವಾರಿಸುವ  ದೈವಿ ಸ್ವರೂಪ ನೀ, 

 ನಮ್ಮ ಆದಿಯೂ ನಿನ್ನೊಂದಿಗೆ ನಮ್ಮ ಅಂತ್ಯವು ನಿನ್ನೊಂದಿಗೆ, 

 ನಾ ಮರಣಿಸಿದಾಗ ನಿನ್ನ ಮಡಿಲಿಗೆ ಸೇರಿಸಿಕೊಳ್ಳುವ ಮಾತೆ ನೀ, 

 ಓ ನನ್ನ ಮಾತೃಭೂಮಿಯೆ ನಿನಗಿದೋ ನನ್ನ ಮನದಾಳದ ವಂದನೆ.....


Rate this content
Log in