STORYMIRROR

Shreenidhi Baindur

Others

1  

Shreenidhi Baindur

Others

ಆಕೆ

ಆಕೆ

1 min
26


ಜಗನ್ಮಾತೆ ಜನ್ಮದಾತೆ ಎಂದು ಕರೆದರೂ ಆಕೆಯ,  

ಜೀವಜಲ ಪ್ರಕೃತಿಯೊಡನೆ ಹೋಲಿಸಿ ಪೂಜಿಸಿದರು ಆಕೆಯ, 

 ಗುಡಿಯಲ್ಲಿ ಕಾಳಿ ದುರ್ಗಿಯ ಮೂರ್ತಿ ಮಾಡಿ ಕಷ್ಟಕಾರ್ಪಣ್ಯ ಹೋಗಲಾಡಿಸು ತಾಯಿ ಎಂದು ಗೋಗರೆದರು, 

ಹೀಗೆ ಕಲ್ಪನೆಯ ಪೂಜೆಗೆ ಅಷ್ಟೇ ಸೀಮಿತವಾದಲೆ ಹೆಣ್ಣು, 

 ಜನ್ಮ ಕೊಟ್ಟಾಕೆ ಅವಳು ಎಲ್ಲರ ಬದುಕಿಗೆ ಬುನಾದಿಯಾದವಳು, 

ಮಾತೆಯಾಗಿ - ಸೋದರಿಯಾಗಿ- ಗೆಳತಿಯಾಗಿ- ಸಂಗಾತಿಯಾಗಿ- ಮಗಳಾಗಿ, ಸುಂದರ ಪ್ರಪಂಚದಲ್ಲಿ ಒಂದಾದ ಜೀವ ಅದು, 

ಆದರೆ ಏಕೆ ಈ ತಾತ್ಸಾರ, 

 ಆ ಮುಗ್ಧ ಜೀವದ ಮೇಲೆ ವಿಧಿ ಏಕೆ ತನ್ನ ಕ್ರೂರ ಮುಖ ತೋರಿಸಿ ಹಂಗಿಸುವ ನಗೆ ಬೀರಿ ಆಟವಾಡಿತು, 

 ಆ ಮುಗ್ಧ ಜೀವ ಬಯಸಿದ್ದು ಗುಡಿಯಲ್ಲಿ ಪೂಜೆಯಲ್ಲ, ಪ್ರಕೃತಿಯೊಡನೆ ಹೋಲಿಕೆಯಲ್ಲಾ, 

 ಆಕೆ ಬಯಸಿದ್ದು ಎಲ್ಲರೊಡನೆ ಒಂದಾಗಲು ತನ್ನವರೊಡನೆ ಬದುಕಲು, 

ಅದೇ ತಪ್ಪಾಯಿತೆ, 

 ಕ್ರೂರ ಮೃಗಗಳ ಹುಚ್ಚಾಟಕ್ಕೆ ಆಕೆಯ ಜೀವ ಬಲಿ ತೆತ್ತಿತೇ...


Rate this content
Log in