ಕುಚಿಕು
ಕುಚಿಕು
1 min
85
ಬದುಕೆಂಬ ಬಿಳಿ ಹಾಳೆಯಲ್ಲಿ ಪ್ರೀತಿಯೆಂಬ ಇಂಕಿನಿಂದ ಸ್ನೇಹವೆಂಬ ಅಕ್ಷರ ಬರೆದರು,
ನಿರಂತರ ದಣಿದ ಮನಕೆ ಮುದ ನೀಡುವ ಕೊಂಡಿ ಯಾದರೂ,
ಈ ಮನವೆಂಬ ಪುಟ್ಟ ಗೂಡಿನಲ್ಲಿ ಸಾವಿರಾರು ಸಿಹಿನೆನಪುಗಳ ಅಲೆ ಎಬ್ಬಿಸಿದರು,
ಮನದ ಮೌನದ ಮಾತ ಹೇಳದೆ ಅರಿತರು,
ನಿನ್ನೆ ಮೊನ್ನೆ ಹುಟ್ಟಿದ ಹಾಗಿರುವ ಈ ಸ್ನೇಹಕ್ಕೆ ವರುಷಗಳೆ ತುಂಬಿದೆ, ಈಗ ಬರೀ ನೆನಪುಗಳ ಬುತ್ತಿ ಯೊಡನೆ ಅಗಲುವ ಸಮಯವಾಗಿದೆ,
ಮನದ ಗೋಡೆಯಲ್ಲಿ ಪ್ರತಿ ಉಸಿರಿನಲ್ಲಿ ಹಚ್ಚ ಹಸಿರಾಗಿ ಇರುವುದು ಮರೆಯಲು ಸಾಧ್ಯವಾಗದ ಈ ನಿಮ್ಮ ಹೆಸರುಗಳು,
ಈ ಕಳೆದುಹೋದ ಸುಮಧುರ ಕ್ಷಣಗಳು ಮತ್ತೊಂದು ಬಾರದು,
ಸಾಗಿದ ಸಮಯದ ಮುಳ್ಳು ಹಿಂದಿರುಗದು.