ಕಡಲು
ಕಡಲು
ಅಳಿವೆಯನ್ನು ನೋಡಲು
ತವಕದಿ ನಾ ಕುಣಿ ಕುಣಿದು ಬಂದೆನು.
ಸಿಹಿನೀರು-ಉಪ್ಪುನೀರು ಸಂಗಮವಾಗಲು
ಮೌನಿಯಾಗಿ ವೀಕ್ಷಿಸಿದೆನು ಕಡಲನು.
ಮೌನಿಯಾಗಿ ವೀಕ್ಷಿಸಿದೆನು ನಾ ಕಡಲ ತೀರದ ಅಳಿವೆಯನ್ನು.
ಅಲೆಗಳ ಮಧುರ ನಾದದ
ಸೆಳೆತಕ್ಕೆ ನಾ ಓಡಿ ಓಡಿ ಬಂದೆನು.
ನಿಟ್ಟುಸಿರಿಂದ ಅಲೆಗಳು ನಿಶಬ್ದವಾಗಲು
ಮೌನಿಯಾಗಿ ವೀಕ್ಷಿಸಿದೆನು ಕಡಲನು.
ಮೌನಿಯಾಗಿ ವೀಕ್ಷಿಸಿದೆನು ನಾ ಕಡಲ ತೀರದ ನಿಶಬ್ದವನ್ನು.
ಮರಳಲ್ಲಿ ಪಾದದ ನಕ್ಷೆಯನ್ನು
ಬಿಡಿಸಲು ಕಾತರದಿ ನಾ ಬಂದೆನು.
ಬಿಡಿಸುವಾಗಲೇ ನಕ್ಷೆಯನ್ನು ಅಲೆಗಳು ಅಳಿಸಲು
ಮೌನಿಯಾಗಿ ವೀಕ್ಷಿಸಿದೆನು ಕಡಲನು.
ಮೌನಿಯಾಗಿ ವೀಕ್ಷಿಸಿದೆನು ನಾ ಕಡಲ ತೀರದ ಅಲೆಗಳನ್ನು.
ಸೂರ್ಯನು ನಾಚುತ ಕರೆದಾಗ
ಗಾಳಿಯಲ್ಲಿ ತೇಲುತ ನಾ ಬಂದೆನು.
ದೂರದಿ ಅಲ್ಲಿ ಎಲ್ಲೋ ಸೂರ್ಯನು ಮುಳುಗಲು
ಮೌನಿಯಾಗಿ ವೀಕ್ಷಿಸಿದೆನು ಕಡಲನು.
ಮೌನಿಯಾಗಿ ವೀಕ್ಷಿಸಿದೆನು ನಾ ಕಡಲ ತೀರದ ಸೂರ್ಯನನ್ನು.