STORYMIRROR

Harish T H

Others

4  

Harish T H

Others

ಅಮ್ಮನಿಗೊಂದು ಲಾಲಿ ಹಾಡು

ಅಮ್ಮನಿಗೊಂದು ಲಾಲಿ ಹಾಡು

1 min
104

ಜಠರದಲ್ಲೇ ಲಾಲಿ ನಾದವ ಕೇಳಿದೆನು ನಾ ಅಂದು.

ಮಮತೆಯ ಲಾಲಿ ನಾದವ ನಾ ಹಾಡುವೆ ನಿನಗಿಂದು.


ನಿಷ್ಕಲ್ಮಶ ಹೃದಯದ ತಾಯಿಯೇ

ಕಂದಮ್ಮನ ಆರೈಕೆಗೆ ವಾತ್ಸಲ್ಯದ ನೆರಳು.

ಕತ್ತಲಿಂದ ಬೆಳಕಿನ ಕಡೆಗೆ

''ಅ ಆ'' ಕಲಿಸಿ, ಜ್ಞಾನವ ಹೊದಿಸಿ ದೂಡಿದಳು.


ದಿನಕರನ ಪ್ರಕಾಶದಂತೆ ನಗುತ

ಸಂತಸದ ಮಳೆಯನ್ನು ಸುರಿಸಿದಳು.

ಚಂದಿರನ ಹತ್ತಿರ ಕರೆದೊಯ್ಯುವೆ 

ಎಂದು ಸಿಹಿ ಸುಳ್ಳು ಹೇಳಿ ಅನ್ನವ ಉಣಿಸಿದಳು.


ಸಮಚಿತ್ತ ಯೋಚನೆ ಮಾಡುತಲಿ

ಸದ್ಭಾವನೆಯ ಮೂಲಧಾತು ಆಗಿದಳು.

ಔದಾರ್ಯವ ಧಾರೆ ಎರೆದು

ಪ್ರಾಜ್ಞವಂತಿಕೆಗೆ ದಾರಿಯ ತೋರಿದಳು.


ಇನ್ನೆಷ್ಟು ಲಾಲಿಯ ಹಾಡಲಿ ನಿನಗೆಂದು

ಹಾಡಲು ಸಾಕಾಗಿ ಬತ್ತಿ ಹೋಯಿತು ಕೊರಳು.

ಲಾಲಿಯ ಹಾಡ ಕೇಳುವ ಬಯಕೆಯಿಂದು

ಕೇಳುತ ನಲಿಯುತ ಸೇರುವೆ ಮಡಿಲು.

      


Rate this content
Log in