Shanthi Tantry

Others

1  

Shanthi Tantry

Others

'ನೀ ಮೆಟ್ಟುವ ನೆಲ, ಅದೇ ಕರ್ನಾಟಕ...'

'ನೀ ಮೆಟ್ಟುವ ನೆಲ, ಅದೇ ಕರ್ನಾಟಕ...'

1 min
152


ಇಲ್ಲಿ ಎಲ್ಲಾ ಇದೆ...


ಸಾಲು ಮರದ ತಿಮ್ಮಕ್ಕನ ನೆನಪು ಬರಿಸುವ ಸಾಲು ಸಾಲು ಮರಗಳು - ಎರಡು ಮನೆಗಳ ಮಧ್ಯೆ ಸಹಜ ಸೀಮಾರೇಖೆಯಾಗಿ ನಿಂತಿಹವು.


ಜೋಗದ ಜಲಪಾತ ಹೋಲುವ ಪೆಟಾಪ್ಸ್ಕೋ ವ್ಯಾಲಿಯ ಝರಿ - ಶನಿವಾರದ ವಾಯುವಿಹಾರಕ್ಕೆ ಸೂಕ್ತ ಜಾಗವೇ ಸರಿ.


ಯಥಾವತ್ ಆಗುಂಬೆಯನ್ನೇ ಹೋಲುವ ಆಲ್ಬರ್ಟನ್ ರೋಡ್ ಟ್ರೇಲ್ - ಕಾಲ್ನಡಿಗೆಯಲ್ಲೇ ಕಾಡು ಸುತ್ತುವ ಯೋಗ.


ಮನೆಯ ೩೦ ಮೈಲಿಯ ಪರಿಧಿಯಲ್ಲಿ ಬರೋಬ್ಬರಿ ೧೨ ದೇವಸ್ಥಾನಗಳು! - ನಾಲ್ಕು ಗಂಟೆ ಪ್ರಯಾಣ ಬೆಳೆಸಿದರೆ ಸ್ಟ್ರೌಡ್ಸ್ ಬರ್ಗ್ ನಲ್ಲಿ ಸಿಗುವ ಶೃಂಗೇರಿ ದೇವಸ್ಥಾನ!


ದುರ್ಗಾ ನಮಸ್ಕಾರ ಪೂಜೆ ಮಾಡಲು ಮನೆಯ ಬಾಗಿಲಿಗೇ ಫೆಡೆಕ್ಸ್ ಅವರಿಂದ ಕೇಪ್ಳೆ ಹೂವಲ್ಲದೇ, ಮಂಗಳೂರು ಮಲ್ಲಿಗೆಯ ಬಳ್ಳಿ ಸಹ ಸರಬರಾಜು - ನ್ಯೂ ಯಾರ್ಕಿನ ಹೂವಿನಂಗಡಿಯಿಂದ!


ಪ್ರತಿ ಭಾನುವಾರ ಭಾರತೀಯ ಸಮುದಾಯದ ಭೇಟಿ - ಶ್ಲೋಕ ಭಜನೆಯಿಂದ ಹಿಡಿದು ಸನಾತನ ಧರ್ಮದ ಅಧ್ಯಯನದ ಸಲುವಾಗಿ!


ಹಬ್ಬ ಹರಿದಿನಗಳಲ್ಲಿ ಅರಸಿನ-ಕುಂಕುಮಕ್ಕೆ ಮನೆಭೇಟಿಯಾದರೆ, ನವರಾತ್ರಿಯಲ್ಲಿ ದಸರಾ ಬೊಂಬೆಗಳ ಪ್ರದರ್ಶನದ ಸಡಗರ!


ಭಾರತೀಯ ಅಂಗಡಿಗಳಲ್ಲಿ ಇಡ್ಲಿ-ದೋಸೆ ಹಿಟ್ಟು, ಉಪ್ಪಿನಕಾಯಿಯಿಂದ ಹಿಡಿದು, ಕೊರಿಯನ್ ಸ್ಟೋರ್ಸ್ ಗಳಲ್ಲಿ ಬಾಣಂತಿಯ ಪೋಷಣೆಗೆ ಪೂಂಬೆ ಸಹಿತ ಲಭ್ಯ!


ಆದರೆ... ನೆನಪಾದ ಹಾಡು -


ತಾಯೆ ಬಾರ ಮೊಗವ ತೋರ…. ಕನ್ನಡಿಗಳ ಮಾತೆಯೇ

ಹರಸು ತಾಯೆ ಸುತಳ ಕಾಯೆ… ನನ್ನ ಜನ್ಮದಾತೆಯೇ

...............................



Rate this content
Log in