STORYMIRROR

#Love Language

SEE WINNERS

Share with friends

ಪ್ರೀತಿಯನ್ನು ವ್ಯಾಖ್ಯಾನಿಸುವುದು ಕಷ್ಟ, ಪ್ರೀತಿಯನ್ನು ಅಳೆಯುವುದು ಕಷ್ಟ ಹಾಗೂ ಪ್ರೀತಿಯನ್ನು ಅರ್ಥಮಾಡಿಕೊಳ್ಳುವುದು ಸಹ ಕಷ್ಟ. ಪ್ರೀತಿ ಎಂದರೆ ಶ್ರೇಷ್ಠ ಬರಹಗಾರರು ಬರೆಯುವುದು, ಶ್ರೇಷ್ಠ ಗಾಯಕರು ಹಾಡುವುದು ಮತ್ತು ಮಹಾನ್ ತತ್ವಜ್ಞಾನಿಗಳು ಯೋಚಿಸುವುದು. ಪ್ರೀತಿಯು ಶಕ್ತಿಯುತವಾದ ಭಾವನೆಯಾಗಿದೆ, ಇದಕ್ಕೆ ಯಾವುದೇ ತಪ್ಪು ವ್ಯಾಖ್ಯಾನವಿಲ್ಲ. ಏಕೆಂದರೆ ಪ್ರಿತಿಯೆನ್ನುವುದು ಪ್ರತಿಯೊಬ್ಬ ವ್ಯಕ್ತಿಗೂ ವಿಭಿನ್ನವಾಗಿ ಸರಿಹೊಂದುತ್ತದೆ. ಪ್ರೀತಿಯು ಕುಟುಂಬದವರೊಂದಿಗಿರಲಿ, ಸ್ನೇಹಿತರೊಂದಿಗಿರಲಿ ಅಥವಾ ಪ್ರೇಮಿಗಳ ನಡುವೆಯೇ ಇರಲಿ, ಇದು ವಿವಿಧ ರೀತಿಯಲ್ಲಿ ಅನುಭವಿಸಬಹುದಾದ ಅಗಾಧವಾದ ಭಾವನೆಯಾಗಿದೆ.

ಸ್ಟೋರಿಮಿರರ್ ಲವ್ ಲಾಂಗ್ವೇಜ್‌ನ ಭಾಗವಾಗಲು ನಿಮ್ಮನ್ನು ಆಹ್ವಾನಿಸುತ್ತಿದೆ. ಇದು ಪರಿಪೂರ್ಣತೆಯಿರುವ ಅಥವಾ ಇಲ್ಲದಿರುವ ಬಲವಾದ ಪ್ರೀತಿಯ ಕಥೆಯ ಬಗ್ಗೆ ಮಾತನಾಡುವ ಬರವಣಿಗೆ ಸ್ಪರ್ಧೆಯಾಗಿದೆ. ಮತ್ತೇಕೆ ತಡ, ಬನ್ನಿ ನಾವು ಪ್ರೀತಿಯ ಕುರಿತು ಮಾತನಾಡೋಣ! ಬರೆಯೋಣ! ಪ್ರೀತಿ ಹಂಚೋಣ!

ವಿಷಯ - ಪ್ರೀತಿ

ನಿಯಮಗಳು:

  1. ಸ್ಪರ್ಧಿಗಳು 'ಪ್ರೀತಿ' ವಿಷಯದ ಮೇಲೆ ಕಥೆ ಮತ್ತು ಕವನಗಳನ್ನು ಮಾತ್ರ ಸಲ್ಲಿಸಬಹುದು.
  2. ಸಂಪಾದಕೀಯ ಅಂಕಗಳ ಆಧಾರದ ಮೇಲೆ ವಿಜೇತರನ್ನು ನಿರ್ಧರಿಸಲಾಗುತ್ತದೆ.
  3. ಸ್ಪರ್ಧಿಗಳು ತಮ್ಮ ಸ್ವಂತ ವಿಷಯವನ್ನು ಸಲ್ಲಿಸಬೇಕು. ಸ್ಪರ್ಧೆಗೆ ನೀವು ಎಷ್ಟಾದರೂ ಕಥೆ-ಕವನಗಳನ್ನು ಸಲ್ಲಿಸಬಹುದು. ಬರಹಗಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ.
  4. ನಿಮ್ಮ ಬರಹಗಳಿಗೆ #lovelanguage ಅನ್ನು ಖಡ್ಡಾಯವಾಗಿ ಬಳಸಿ.
  5. ಬರಹಗಳಿಗೆ ಪದಗಳ ಮಿತಿ ಇಲ್ಲ.

ಕೆಟಗರಿಗಳು :

ಕಥೆ

ಕವಿತೆ

ಬಹುಮಾನಗಳು:

ಟಾಪ್ 3 ಕಥೆಗಳು ಮತ್ತು ಕವನಗಳು ₹250 ಮೌಲ್ಯದ SM ವೋಚರ್‌ಗಳನ್ನು ಪಡೆಯುತ್ತವೆ.

ವಿಜೇತರು 'ಮೆಚ್ಚುಗೆ ಪ್ರಮಾಣಪತ್ರಗಳನ್ನು' ಪಡೆಯುತ್ತಾರೆ.

ಎಲ್ಲಾ ಸ್ಪರ್ಧಿಗಳು 'ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು' ಸ್ವೀಕರಿಸುತ್ತಾರೆ.

ವಿಶೇಷ ಬಹುಮಾನ:

ನಿಮ್ಮ ಯಾವುದೇ 5 ಮತ್ತು ಅದಕ್ಕಿಂತ ಹೆಚ್ಚಿನ ಸ್ನೇಹಿತರನ್ನು ಈ ಸ್ಪರ್ಧೆಗೆ ಕರೆತರುವ ಮೂಲಕ ಪ್ರೀತಿಯನ್ನು ಹಂಚಿರಿ. ಮತ್ತು ಪುಸ್ತಕವನ್ನು ಗೆಲ್ಲಿರಿ. ಸ್ಪರ್ಧೆಯು ಮುಗಿದ ನಂತರ ಅವರು ಸಲ್ಲಿಸಿದ ವಿಷಯದ ಲಿಂಕ್ ಅನ್ನು ನೀವು ಹಂಚಿಕೊಳ್ಳಬೇಕು.

ಗಮನಿಸಿ : ನೀವು ಕರೆತರುವ ನಿಮ್ಮ ಸ್ನೇಹಿತರು / ಬರಹಗಾರರು ಸ್ಟೋರಿಮಿರರ್ ವೇದಿಕೆಗೆ ಹೊಸಬರಾಗಿರಬೇಕು.

ಸಲ್ಲಿಕೆ ಹಂತ : ಫೆಬ್ರವರಿ 08, 2022 ರಿಂದ ಮಾರ್ಚ್ 07, 2022

ಫಲಿತಾಂಶದ ಘೋಷಣೆ : ಏಪ್ರಿಲ್ 07, 2022

ಸಂಪರ್ಕಿಸಿ :

ಇಮೇಲ್: neha@storymirror.com

ದೂರವಾಣಿ ಸಂಖ್ಯೆ: +91 9372458287