ವಿಸ್ಮಯ ಹೆಂಡತಿ
ವಿಸ್ಮಯ ಹೆಂಡತಿ
ಒಂದು ಊರಿನಲ್ಲಿ ಒಬ್ಬ ಯುವಕ ಇದ್ದ. ಅವನಿಗೆ ಮದುವೆಯಾಗದ ಕಾರಣ ಊರಿನ ಎಲ್ಲಾ ಹೆಣ್ಣು ಮಕ್ಕಳು ಅವನನ್ನು ಮದುವೆಯಾಗಬೇಕೆಂದು ತರಾತುರಿಯಲ್ಲಿ ಇದ್ದರೂ ನೋಡಲು ತುಂಬಾ ಸುಂದರನಾಗಿದ್ದ ಕಾರಣ ಅವನನ್ನು ಮದುವೆಯಾಗಲು ನಾ ಮುಂದು ತಾಮುಂದು ಎನ್ನುತ್ತಿದ್ದರು. ಅಲ್ಲಿ ಇರುವ ಯಾವ ಹುಡುಗಿಯೂ ಅವನಿಗೆ ಇಷ್ಟ ಆಗಲಿಲ್ಲ.ಒಂದು ದಿನ ಅವನು ಕಾಡಿನಲ್ಲಿ ನಡೆದುಕೊಂಡು ಹೋಗುವಾಗ ಒಬ್ಬ ಋಷಿ ಮುನಿಗಳು ಕಾಣಿಸಿದರು ಅವನು ಅವರಿಗೆ ವಂದಿಸಿ ಅವರನ್ನು ಮಾತನಾಡಿಸಿದನು. ಅವರು ಇವನ ಕಷ್ಟವನ್ನು ಅರ್ಥ ಮಾಡಿಕೊಂಡು ನೀನೂ ಹುಡುಕುತ್ತಿರುವ ಸುಂದರ ಸುಶೀಲ ಲಾದ ಹೆಣ್ಣನ್ನು ನಿನಗೆ ಕರುಣಿಸುತ್ತೆನೆ ಎಂದು ಹೇಳಿ ಒಂದು ನಿಂಬೆ ಹಣ್ಣನ್ನು ನೀಡುತ್ತಾರೆ ಇದನ್ನು ಇಲ್ಲಿಯೇ ಮುಂದೆ ಒಂದು ನದಿ ಇದೆ ಅದರ ಮಧ್ಯದಲ್ಲಿ ಎಸೆ ಎಂದು ಹೇಳುತ್ತಾರೆ.ಅವನು ನದಿಯ ಕಡೆ ಹೋಗುತ್ತಾನೆ ನಂತರ ಅವರು ಹೇಳಿದ ಹಾಗೆ ಮಾಡುತ್ತಾನೆ ಒಂದು ಸುಂದರವಾದ ಹುಡುಗಿ ಆ ನೀರಿನಿಂದ ಬರುತ್ತಾಳೆ ಅವನಿಗೆ ಆನಂದ ತಡೆಯಲಾಗದೆ ಅವನು ಅವಳನ್ನು ಅಪ್ಪಿ ಕೊಳ್ಳುತ್ತಾನೆ ನಂತರ ಅವಳನ್ನು ಮನೆಗೆ ಕರೆದು ಕೊಂಡು ಹೋಗಿ ಮದುವೆಯಾಗುತ್ತಾನೆ.
ಊರವರೆಲ್ಲ ಅವಳನ್ನು ಕಂಡು ತುಂಬಾ ಅಸೂಯೆ ಪಡುತ್ತಾರೆ ಅವಳ ಸೌಂದರ್ಯ ನೋಡಿ ಬೆರಗಾಗುತ್ತಾರೆ ಅವಳನ್ನು ಹೇಗಾದರೂ ಮಾಡಿ ಸಾಯಿಸಬೇಕೆಂದು ತೀರ್ಮಾನಿಸುತ್ತಾರೆ. ಹಾಗೆ ಒಂದು ದಿನ ಅವಳು ನೀರನ್ನು ತರಲು ಬಾವಿಯ ಹತ್ತಿರ ಹೋದಾಗ ಅವರು ಬಾವಿಯಲ್ಲಿ ಏನೋ ಇರುವುದಾಗಿ ಹೇಳಿ ಅವಳು ನೋಡಲು ಹೋದಾಗ ತಳ್ಳಿಬಿಡುತ್ತಾರೆ. ನಂತರ ಅವಳ ಉಡುಗೆಯನ್ನು ಧರಿಸಿ ಅವರಲ್ಲೇ ಒಬ್ಬಳು ಅವನ ಮನೆಗೆ ಹೋಗುತ್ತಾಳೆ. ಅವನು ಬಿಸಿಲಿನಲ್ಲಿ ಓಡಾಡಿ ಕಪ್ಪಾಗಿರಬಹುದು ಎಂದು ಭಾವಿಸಿ ಅವಳೇ ಹೆಂಡತಿ ಎಂದು ನಂಬುತ್ತಾನೆ.
ಹಾಗೆ ಒಂದು ದಿನ ಅವಳು ಸತ್ತ ಬಾವಿಯಲ್ಲಿ ಒಂದು ಬಾಳೆಯ ಮರ ತುಂಬಾ ಚೆನ್ನಾಗಿ ಬೆಳೆದಿರುತ್ತದೆ.ಇದನ್ನು ನೋಡಿದ ಗಂಡ ಬಾಳೆಯ ಗೂಬೆಯನ್ನು ಮನೆಗೆ ತಂದು ಹೆಂಡತಿಗೆ ಕೊಡುತ್ತಾನೆ ಅವನು ಬಾವಿಯಲ್ಲಿ ಆಗಿತ್ತೆಂದು ಹೇಳಿದಾಗ ಅವಳಿಗೆ ಅನುಮಾನ ಬರುತ್ತದೆ.ಇದು ಅವನ ಹೆಂಡತಿ ಎಂದು ತಿಳಿದು ಅದನ್ನು ಚೆನ್ನಾಗಿ ಕೊಚ್ಚಿ ಮನೆಯ ಹಿಂದೆ ಬಿಸಾಡುತ್ತಾಳೆ.ಸ್ವಲ್ಪ ದಿನದ ನಂತರ ಅಲ್ಲಿ ಸೊಪ್ಪು ಚೆನ್ನಾಗಿ ಬೆಳೆದಿರುತ್ತದೆ ಅದನ್ನು ಪುನಃ ಗಂಡ ಮನೆಗೆ ತರುತ್ತಾನೆ ಇದನ್ನು ಗಮನಿಸಿದ ಹೆಂಡತಿ ಇದನ್ನು ಸಹ ಹಾಗೆ ಮಾಡುತ್ತಾಳೆ ಸ್ವಲ್ಪ ದಿನದ ನಂತರ ಅದೇ ಜಾಗದಲ್ಲಿ ಒಂದು ಹಣ್ಣಿನ ಮರ ಬೆಳೆದಿರುತ್ತದೆ ಇದನ್ನು ಗಮನಿಸಿದ ಗಂಡ ಮನೆಯಲ್ಲಿ ತಂದು ಇಡುತ್ತಾನೆ ಆದರೆ ಇಸಲ ಅವನ ಹೆಂಡತಿಗೆ ಹೇಳುವುದನ್ನು ಮರೆತಿರುತ್ತಾನೆ ಆ ಹಣ್ಣು ಬಲೇತ ಮೇಲೆ ಅದನ್ನು ನೋಡುತ್ತಾನೆ ಅಲ್ಲಿ ಹಣ್ಣಿನ ಬದಲು ಅವನ ಹೆಂಡತಿ ಇರುತ್ತಾಳೆ.ಅವನಿಗೆ ಆಶ್ಟರ್ಯ ಇದು ಹೇಗೆ ಸಾಧ್ಯ ಎಂದು ನಂತರ ಅವನ ಹೆಂಡತಿ ನಡೆದ ವಿಷಯ ಎಲ್ಲಾ ಹೇಳುತ್ತಾಳೆ ಆಗ ಊರಿನವರಿಗೆ ಬುದ್ದಿಯನ್ನು ಕಳಿಸುತ್ತಾನೆ ಮತ್ತು ಇವರಿಬ್ಬರೂ ಸಂತೋಷದಿಂದ ಜೀವನ ನಡೆಸುತ್ತಾರೆ.
ಧನ್ಯವಾದಗಳು ...
