ರಂಗನಾಥ ಈ

Others

1  

ರಂಗನಾಥ ಈ

Others

ಪ್ರಿಯ ದಿನಚರಿ

ಪ್ರಿಯ ದಿನಚರಿ

2 mins
141


ಪ್ರೀತಿಯ ಡೈರಿ,


ಮುಂಚೆ ಎಲ್ಲ ನನ್ನ ಹತ್ರ ಮನಸು ಬಿಚ್ಚಿ ಮಾತಾಡ್ತ ಇದ್ದ ನೀನು ಇವಾಗ ನನ್ಹತ್ರ ತಿರುಗಿ ಸಹ ನೋಡಲ್ಲ ಅಂತ ನೀನು ಸಿಟ್ಟಾಗಿರಬಹುದು ಅದಕ್ಕೆ ನಾನು ಕ್ಷಮೆ ಕೇಳ್ತೀನಿ.ನೀನು ಬೈದ್ರೂ ನನ್ನ ಕ್ಷಮಿಸಲೆ ಬೇಕು ಯಾಕಂದ್ರೆ ನಾನು ನಿನ್ನ ಪ್ರಿಯ ಗೆಳೆಯ.ಎಷ್ಟು ಸಲ ನಿದ್ದೆ ಬಾರ್ದೆ ಇದ್ದಾಗ ನಾವಿಬ್ಬರೂ ಸೇರಿ,ಪರಕಾಯ ಪ್ರವೇಶ ಮಾಡಿ ಎಷ್ಟು ಪ್ರೇಮ ಕವಿತೆ ಬರೆದಿಲ್ಲ,ಎಷ್ಟೋ ಸಲ ನಮ್ಮನ್ನ ನಾವೇ ಬೈಕೊಂಡಿಲ್ಲ! ಬರೆದಿದ್ದನ್ನೆ ಎಷ್ಟೋ ಸಲ ಬರೀತಿಯ ಅಂತ ನೀನು ಕ್ಯಾಕರಿಸಿ ಉಗಿದಿಲ್ಲ!ನಾನು ಅವನ್ನೆಲ್ಲ ಮನಸಿಗೆ ಹಚಕ್ಕೊಂಡ್ನ?ಅದೇ ತರ ನೀನು ಈ ಸಲ ಊಫಿ ಮಾಡು.ಮತ್ತೆ ನಾವಿಬ್ಬರೂ ಮಾತಾಡೋಣ.

ನಿಂಗೆ ಹೇಳದೆ ಇರೋ ತುಂಬಾ ವಿಷಯ ಇವೆ.ಏನಂದ್ರೆ ಈಗ ಕರೋನ ರೋಗ ಬಂದು ದೇಶಾನೆ 21 ದಿನ ಬಂದು ಮಾಡವ್ರೆ! ಇಟಲಿ,ಚೀನಾ ಮತ್ತೆ ಅಮೆರಿಕ ಈ ಮಹಾಮಾರಿಗೆ ತತ್ತರಿಸಿ ಹೋಗಿವೆ. ಈಗ ಎಲ್ಲರೂ ಮನೆಯಲ್ಲಿ ಇದ್ದಾರೆ, ಮನೆಯಿಂದಲೇ ಕೆಲಸ ಮಾಡ್ತಾ ಇದಾರೆ.ಡಾಕ್ಟರ್, ಪೊಲೀಸ್,ನರ್ಸ್,ಪೌರ ಕಾರ್ಮಿಕರು ಮತ್ತೆ ನಮ್ಮ ರೈತರು ಮಾತ್ರ ನಮಗೋಸ್ಕರ ಹಗಲು ರಾತ್ರಿ ಎನ್ನದೆ ಶ್ರಮ ಪಡ್ತಾ ಇದ್ದಾರೆ.ಅದಕ್ಕೆ ಅವರಿಗೆಲ್ಲ ಕೃತಜ್ಞತೆ ಅರ್ಪಿಸೋಕೆ ಒಂದು ಕವಿತೆ ಕೂಡ ಬರೆದೆ.ನಾನು ಇವಾಗ ಊರಿಗೆ ಬಂದಿದ್ದೀನಿ ಮನೆಯಲ್ಲೇ ಇದ್ದೀನಿ.ಕೆಲ್ಸ ಏನೂ ಇಲ್ಲ ರಜಾ ಹಾಕಿದ್ದೆ.ಒಂದಷ್ಟು ಪುಸ್ತಕ ತಂದಿದ್ದೆ ಅದ್ರಲ್ಲಿ ಬೆಳಗ್ಗೆ ಜಿ ಎಸ್ ಶಿವರುದ್ರಪ್ಪ ಅವರ ಎದೆ ತುಂಬಿ ಹಾಡಿದೆನು ಕವನ ಸಂಕಲನ ದ ಕವಿತೆ ಓದುವೆ.ಅನೇಕೆ ಯೂಟ್ಯೂಬ್ ಅಲ್ಲಿ ಅದೇ ಕವಿತೆಗಳ ಹಾಡನ್ನು ಸಹ ಕೇಳುವೆ.ಮೊನ್ನೆ "ಯಾವ ರಾಗಾಕೋ " ಹಾಡು ತುಂಬಾ ಇಷ್ಟ ಆಯ್ತು.ಮತ್ತೆ

"ಮೂಡು ಬೆಳಕಿನ ಹೆಡೆಯ ಬಿಚ್ಚಿತು

ಕೆರಳಿದಿರುಳಿನ ನಾಗರ

ಕತ್ತಲೆಯ ಕದ ತೆರೆದು ತೋರುವು-

ದಾವ ನೋವಿನ ಸಾಗರ!"

ಈ ಪದ್ಯ ಓದಿ ನಂಗೆ ಆದ ಖುಷಿ ಹೇಳಕಾಗಲ್ಲ!ಎಂತಹ ಅದ್ಭುತ ಕಲ್ಪನೆ ಅಂತ.ಆಮೇಲೆ ಒಂದು ಕತೆ ಬೇರೆ ಬರೆದೆ "ಪ್ರವಾಹದ ದಿನಗಳು" ಅಂತ ಇನ್ನೂ ಸ್ವಲ್ಪ ತಿದ್ದಬೇಕು ,ಅದನ್ನ "ಯೆಸ್, ಐ ರೈಟ್" ಸ್ಪರ್ಧೆಗೆ ಹಾಕಬೇಕು.ಮತ್ತೆ ಸಂಜೆ "ಹಿಂದಿನ ಬೆಂಚಿನ ಹುಡುಗಿಯರು " ಪುಸ್ತಕದಲ್ಲಿ ಎರಡು ಕತೆ ಓದಿದೆ.ಆದ್ರೂ ಮೊಬೈಲ್ ತುಂಬಾ ಬಳಸ್ತ ಇದೀನಿ ಅಂತ ನಂಗೆ ನನ್ನ ಮೇಲೆ ಸಿಟ್ಟು ಬರ್ತ ಇದೆ.ಇವತ್ತು ಬೆಳಗ್ಗೆ ಎದ್ದು ತುಂಬಾ ದಿನ ಆದಮೇಲೆ ಸೂರ್ಯ ಹುಟ್ಟೋದ ನೋಡಿದೆ ಮತ್ತೆ ವ್ಯಾಯಾಮ ಕೂಡ ಮಾಡಿದೆ.ಆದ್ರೂ ಸ್ವಲ್ಪ ಒಳ್ಳೆ ಬದಲಾವಣೆ ಕಾಣ್ತಾ ಇವೆ ಇದನ್ನೇ ಮುಂದುವರೆಸುವೆ.ಮತ್ತೆ ಏಪ್ರಿಲ್ ಒಂದಕ್ಕೆ ಚಿದಂಬರ ರಹಸ್ಯ ಕಾದಂಬರಿ ಮೇಲೆ ರಸಪ್ರಶ್ನೆ ಕಾರ್ಯಕ್ರಮ ಇದೆ.ಅದಕ್ಕೆ ಇನ್ನೂ ಆ ಪುಸ್ತಕ ಓದಬೇಕು.21 ದಿನ ಬೆಳಗ್ಗೆ ಬೇಗ ಎದ್ದು ಓದೋ ಚಾಲೆಂಜ್ ಕೂಡ ತಗೊಂಡೆ ಆಗಲೇ 2 ದಿನ ಆಯ್ತು.ಅದೇ ತರ ವ್ಯಾಯಾಮ ಕೂಡ ಮಾಡ್ತೀನಿ.ಇನ್ನೂ ಒಂದು ಮುಖ್ಯ ವಿಷ್ಯ ಅಂದ್ರೆ ಸ್ಟೋರಿ ಮಿರರ್ 21 ದಿನ ಡೈರಿ ಬರೆಯೋ ಚಾಲೆಂಜ್ ಬೇರೆ ಶುರುಮಾಡಿದ್ದಾರೆ! ಅದು ಅದು 25 ರಿಂದ ಶುರು ಆಗಿದೆ ನಾನು ಇವತ್ತು ನೋಡಿದೆ.ಆಗಲೇ ಎರಡು ದಿನ ಆಗೋಗಿದೆ.ಕ್ಷಮಿಸಿಬಿಡು.ಮತ್ತೆ ನಾಳೆ ಸಿಗ್ತೀನಿ........

27/03/2020



Rate this content
Log in