STORYMIRROR

MOHAMMED AZHARUDDIN

Children Stories Inspirational Others

4  

MOHAMMED AZHARUDDIN

Children Stories Inspirational Others

ಪ್ರಾಮಾಣಿಕತೆ ತಂದ ಫಲ

ಪ್ರಾಮಾಣಿಕತೆ ತಂದ ಫಲ

2 mins
387

ಒಂದಾನೊ0ದು ಕಾಲದಲ್ಲಿ ಶಿವಪುರ ಎಂಬ ಗ್ರಾಮ. ಆ ಊರಿನಲ್ಲಿ ಒಬ್ಬ ಪಟೇಲ ತನ್ನ ಸಂಸಾರದೊAದಿಗೆ ವಾಸವಾಗಿದ್ದನು. ಅವನಿಗೆ ಒಬ್ಬಳು ಸುಂದರವಾದ ಮಗಳಿದ್ದಳು. ಆ ಪಟೇಲನ ಮನೆಯಲ್ಲಿ ಐದು ಜನ ವಿದ್ಯಾವಂತರು ಕೆಲಸ ಮಾಡುತ್ತಿದ್ದರು. ಪಟೇಲನಿಗೆ ವಯಸ್ಸಾದ ಕಾರಣ ತನ್ನ ಎಲ್ಲಾ ವ್ಯವಹಾರಗಳನ್ನು ಅವರಿಗೆ ಒಪ್ಪಿಸಿ ನೆಮ್ಮದಿ ಜೀವನ ನಡೆಸುತ್ತಿದ್ದನು. ಹೀಗೆ ದಿನ ಕಳೆಯುತ್ತಾ ಹೋಗುತ್ತಿತ್ತು ಪಟೇಲನ ಮಗಳು ಮದುವೆ ವಯಸ್ಸಿಗೆ ಬಂದಳು. 


ಪಟೇಲನಿಗೆ ವಯಸ್ಸಾಗುತ್ತಿತ್ತು. ಅವನು ಯಾವುದೇ ಕೆಲಸ ಮಾಡಲು ಆಗುತ್ತಿರಲಿಲ್ಲ. ತನ್ನ ಮಗಳನ್ನು ಮದುವೆ ಮಾಡಿ ದೂರದ ಊರಿಗೆ ಕಳಿಸಲು ಆತನಿಗೆ ಮನಸ್ಸು ಬರಲಿಲ್ಲ. ಇವುಗಳನ್ನೆಲ್ಲ ಯೋಚಿಸಿದ ಪಟೇಲ ಈ ಐದು ವ್ಯಕ್ತಿಗಳಲ್ಲಿ ಯಾರಾದರೂ ಒಳ್ಳೆಯ ವ್ಯಕ್ತಿಯನ್ನು ಗುರುತಿಸಿ ಆ ವ್ಯಕ್ತಿಯ ಜೊತೆ ತನ್ನ ಮಗಳ ಮದುವೆ ಮಾಡಿ ವಾರಸುದಾರರಿಲ್ಲದ ಈ ಆಸ್ತಿಗೆ ಯೋಗ್ಯ ಪುರುಷನನ್ನು ತರಬೇಕು ಎಂದು ತನ್ನ ಮನದಲ್ಲಿ ಯೋಚಿಸಿಕೊಂಡನು. 


ತನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಐದು ಜನರನ್ನು ಕರೆದು "ನೋಡಿ ನನಗೆ ವಯಸ್ಸಾಗುತ್ತಿದೆ, ನನ್ನ ಮಗಳ ಮದುವೆಯನ್ನು ನಿಮ್ಮಲ್ಲಿ ಯಾರಿಗಾದರೂ ಒಬ್ಬರಿಗೆ ಮಾಡಿಕೊಡಬೇಕು ಎನ್ನುವುದು ನನ್ನ ಆಸೆ" ಎಂದು ಹೇಳಿದನು. ಅವನ ಈ ಮಾತು ಕೇಳಿ "ನಾ ಮುಂದು... ತಾ ಮುಂದು..." ಎಂದು ಗೂಗಲ ಆರಂಭಿಸಿದರು. ಇವರಲ್ಲಿ ಸೂಕ್ತರಾದವರನ್ನು ಆಯ್ಕೆ ಮಾಡುವುದೇ ಪಟೇಲನಿಗೆ ದೊಡ್ಡ ಸಮಸ್ಯೆಯಾಗುತ್ತಿತ್ತು. ಇದರಲ್ಲಿ ಯಾರಾದರೂ ಒಬ್ಬರು ನಿಷ್ಠಾವಂತ ವ್ಯಕ್ತಿ ಇದ್ದೇ ಇರುತ್ತಾರೆ ಅವರನ್ನು ಹುಡುಕಿ ನನ್ನ ಮನೆ ಅಳಿಯ ಮಾಡಿಕೊಳ್ಳಬೇಕು ಎಂದು ಉಪಾಯವನ್ನು ತನ್ನ ಮನದಲ್ಲಿ ಆಲೋಚನೆ ಮಾಡಿಕೊಂಡು ಕುಳಿತುಕೊಳ್ಳುತ್ತಾನೆ.


ಮರುದಿನ ಎಲ್ಲರನ್ನೂ ಮತ್ತೆ ಕರೆದು "ನೋಡಿ ಮಹಾಪುರುಷರೇ, ಈ ಚೀಲದಲ್ಲಿ ೧೦ ಲಕ್ಷ ನಾಣ್ಯಗಳಿವೆ ಇದನ್ನು ನೀವು ಪ್ರಾಮಾಣಿಕತೆಯಿಂದ ಉಳಿಸಿಕೊಂಡರೆ ನಿಮಗೆ ನನ್ನ ಮಗಳನ್ನು ಕೊಟ್ಟು ಮದುವೆ ಮಾಡುತ್ತೇನೆ ಹಾಗೂ ಈ ಸಂಪೂರ್ಣ ಆಸ್ತಿಯ ವಾರಸುದಾರನಾಗಿ ಮಾಡುತ್ತೇನೆ" ಎಂದು ಹೇಳಿ ಎಲ್ಲರಿಗೂ ಒಂದೊ0ದು ಚೀಲ ಕೊಡುತ್ತಾನೆ. 


ಹೀಗೆ ಮಾತು ಮಾತಲ್ಲೇ ಒಂದು ವರ್ಷ ಕಳೆದು ಹೋಗುತ್ತದೆ ಪಟೇಲನು ಎಲ್ಲರನ್ನೂ ಮತ್ತೆ ಕರೆಯುತ್ತಾನೆ. ಪಟೇಲ ಕರೆದಾಗ ಎಲ್ಲರೂ ತಮ್ಮ ಬಳಿ ಇದ್ದ ಚೀಲವನ್ನು ತೆಗೆದುಕೊಂಡು ಬರುತ್ತಾರೆ. ಎಲ್ಲರನ್ನು ನೋಡಿ "ನಾನು ನಿಮಗೆ ನೀಡಿದ್ದ ಚೀಲವನ್ನು ನನಗೆ ಹಿಂದಿರುಗಿಸಿ" ಎಂದನು. ಎಲ್ಲರ ಚೀಲದಲ್ಲಿ ನಾಣ್ಯಗಳು ಕಡಿಮೆಯಾಗಿದ್ದವು ಆದರೆ ಅದರಲ್ಲಿ ಒಬ್ಬನ ನಾಣ್ಯಗಳು ಮಾತ್ರ ಕಡಿಮೆ ಆಗಿರಲಿಲ್ಲ. ನಾಣ್ಯ ಕಡಿಮೆಯಾದ ನಾಲ್ಕು ಜನರ ಬಳಿ ಹೋಗಿ "ನಾನು ನೀಡಿದ ನಾಣ್ಯಗಳು ಏಕೆ ಕಡಿಮೆಯಾಗಿವೆ" ಎಂದು ಪ್ರಶ್ನೆ ಮಾಡಿದನು. ಆತನ ಪ್ರಶ್ನೆಗೆ ಎಲ್ಲರೂ ಒಟ್ಟಿಗೆ "ಪುಕ್ಕಟೆ ೧೦ ಲಕ್ಷ ನೀವು ಕೊಟ್ಟಿದ್ದು ಹಿಂದಿರುಗಿಸಿ ಕೇಳುವುದಿಲ್ಲ ಎಂಬ ಭಾವನೆ ನಮ್ಮ ಮನಸ್ಸುಗಳಲ್ಲಿ ಬಂತು ಆ ಕಾರಣಕ್ಕೆ ನೀವು ಕೊಟ್ಟಿದ್ದ ಹಣವನ್ನು ಖಾಲಿ ಮಾಡಿಕೊಂಡು ಜೀವನವನ್ನು ಕಳೆಯುತ್ತಿದ್ದೆವು" ಎಂಬ ಉತ್ತರವನ್ನು ನೀಡಿದರು. ನಾಣ್ಯಗಳ ಚೀಲ ಗೊತ್ತಿರುವ ವ್ಯಕ್ತಿಗೆ ಮತ್ತೆ ಇದೇ ಪ್ರಶ್ನೆಯನ್ನು ಪಟೇಲ ಕೇಳಿದನು. "ನಾನು ಮಾಡುವ ಕೆಲಸಕ್ಕೆ ನೀವು ಸಂಬಳ ನೀಡುವಿರಿ, ಪುಕ್ಕಟೆ ಬಂದ ಹಣದಲ್ಲಿ ಸುಖ ಪಡೆಯುವುದು ನಿಜವಾದ ಸಂತೋಷವಲ್ಲ ನನಗೆ ದೇವರು ಶಕ್ತಿ ಕೊಟ್ಟಿದ್ದಾನೆ ಅದರ ಜೊತೆಯಲ್ಲಿ ಯುಕ್ತಿ ಕೊಟ್ಟಿದ್ದಾರೆ ಇವುಗಳಿಂದಲೇ ನಾನು ಸಂತೋಷವಾಗಿದ್ದೇನೆ, ಈ ಪುಕ್ಕಟೆ ಹಣ ನನಗೆ ಬೇಡ" ಎಂದು ಹಿಂದುರಿಗಿಸಿದನು. ಆತನ ಈ ಮಾತುಗಳನ್ನು ಕೇಳಿದ ಪಟೇಲನಿಗೆ ತುಂಬಾ ಸಂತೋಷವಾಯಿತು. ನನ್ನ ಮನೆಗೆ ಸರಿಯಾದ ವಾರಸುದಾರ ಸಿಕ್ಕಿದ ಎಂಬ ಸಂತೋಷ ಹುಕ್ಕಿ ಬಂದಿತು. ನನ್ನ ಮಗಳಿಗೆ ಸರಿಯಾದ ಗಂಡು ಇವನೇ ಎಂಬ ಆಲೋಚನೆ ಆತನ ಮನಸ್ಸಿನಲ್ಲಿ ಬಂದಿತ್ತು. ಉಳಿದ ನಾಲ್ಕು ಜನರಿಗೆ ಬೈದು ಈತನ ಹಾಗೆ ನೀವು ಕಲಿಯಿರಿ ಎಂಬ ಸಂದೇಶವನ್ನು ಹೇಳಿ ಅಲ್ಲಿಂದ ಕಳುಹಿಸುತ್ತಾನೆ. ಊರಿನ ಎಲ್ಲಾ ಮುಖಂಡರ ನಡುವೆ ತನ್ನ ಮಗಳ ಮದುವೆಯನ್ನು ಆತನ ಜೊತೆ ಅದ್ದೂರಿಯಾಗಿ ಮಾಡುತ್ತಾನೆ. ಮದುವೆಯಾಗಿ ಕೆಲವು ದಿನಗಳ ನಂತರ ತನ್ನ ಸಂಪೂರ್ಣ ಆಸ್ತಿಯ ಜವಾಬ್ದಾರಿಯನ್ನು ಆತನಿಗೆ ವಹಿಸಿ ತನ್ನ ಕೊನೆಯ ದಿನಗಳನ್ನು ಸಂತೋಷವಾಗಿ ಕಳೆಯುತ್ತಾನೆ.



Rate this content
Log in