Read #1 book on Hinduism and enhance your understanding of ancient Indian history.
Read #1 book on Hinduism and enhance your understanding of ancient Indian history.

Padmalatha Mohan

Others


4.5  

Padmalatha Mohan

Others


ಪಾಪ ಮಾಡದ ಪಾಪಿಗಳು

ಪಾಪ ಮಾಡದ ಪಾಪಿಗಳು

3 mins 114 3 mins 114


ನಾನು ಈ ಆಧುನಿಕ ಜಗತ್ತಿನಲ್ಲಿ ಬದುಕುತ್ತಿರುವ ನತದೃಷ್ಟ ಯುವ ಜನಾಂಗದ ಪ್ರತಿನಿಧಿ……

“ನಮ್ಮ ಕಾಲದಲ್ಲಿ ಮಕ್ಕಳು ಹೀಗಿರಲಿಲ್ಲ ಅನ್ನೋ ಅಜ್ಜ ಅಜ್ಜಿ, ನಾವು ಮಕ್ಕಳಾಗಿರುವಾಗ ಹೀಗಿರಲಿಲ್ಲ ಅನ್ನೋ ತಂದೆತಾಯಿ, ನಾವು ವಿದ್ಯಾರ್ಥಿಗಳಾಗಿದ್ದಾಗ ಹೀಗಿರಲಿಲ್ಲ ಅನ್ನೋ ಶಿಕ್ಷಕರೇ ನಿಮ್ಮಲ್ಲಿ ನನ್ನ ಕೆಲವು ಪ್ರಶ್ನೆಗಳಿವೆ ನೀವು ಅದಕ್ಕೆ ದಯವಿಟ್ಟು ಉತ್ತರಿಸಿ.

ನಮ್ಮನ್ನು ದೂಷಿಸುವ ಮೊದಲು ನನ್ನ ಸಮಸ್ಯೆ ಬಗ್ಗೆ ತಿಳಿದುಕೊಳ್ಳಿ”. ಎಲ್ಲರಂತೆ ನಾನೂ ಕೂಡ ಬಹಳ ಮುಗ್ಧನಾಗಿ ಅಮ್ಮನ ಹೊಟ್ಟೆಯಿಂದ ಹೊರಬಂದೆ. ಆದರೆ ಅಮ್ಮ ತನ್ನ ಮೂರು ತಿಂಗಳ ಹಸುಗೂಸನ್ನು ಕೆಲಸದವಳ ಜೊತೆ ಬಿಟ್ಟು ಕೆಲಸಕ್ಕೆ ಹೋದರು ಅಮ್ಮನ ಎದೆ ಹಾಲಿಗೆ ತಹತಹಿಸುತ್ತಿದ್ದ ನನ್ನ ಬಾಯಿಗೆ ಯಾವುದೋ ಡಬ್ಬಿಯ ಪೌಡರ್‍ನ ಹಾಲನ್ನು ತಂದು ಇಟ್ಟರು. ಅಮ್ಮನ ಎದೆಹಾಲಿನಷ್ಟು ಅದು ರುಚಿಸುತ್ತಿರಲಿಲ್ಲ. ಆದರೂ ಅಡ್ಜೆಸ್ಟ್ ಮಾಡಿಕೊಂಡೆ. ಸಂಜೆ ಅಪ್ಪ ಅಮ್ಮ ಮನೆಗೆ

ಬರುವ ಮೊದಲೇ ನಿದ್ರಾಲೋಕಕ್ಕೆ ಜಾರಿರುತ್ತಿದ್ದೆ. ಬೆಳಗ್ಗೆ ನಾನು ಏಳುವ ಮೊದಲೆ ಅವರು ಕೆಲಸಕ್ಕೆ ಹೋಗಿಯಾಗಿರುತಿತ್ತು.

ಹೀಗೆ ನಾನು ಹೆತ್ತವರ ಪ್ರೀತಿಯಿಂದ ವಂಚಿತನಾಗುತ್ತಾ ಬೆಳೆಯುತ್ತಿದ್ದೆ. ದೊಡ್ಡವನಾಗುತ್ತಾ ಸ್ಕೂಲಿಗೆ ಹೋಗಲಾರಂಭಿಸಿದೆ. ಸಂಜೆ ಸ್ಕೂಲ್ ಮುಗಿಸಿ ಬಂದಾಗ ಮನೆ ಬೀಗ ನಾನೇ ತೆಗೆದು ಒಂಟಿಯಾಗಿ ಕುಳಿತುಕೊಳ್ಳಬೇಕಿತ್ತು. ಆಗ ಒಡಹುಟ್ಟಿದ ತಮ್ಮನೋ ತಂಗಿಯೋ ಇದ್ದಿದ್ದರೆ ಎಂದೆನಿಸುತಿತ್ತು. ಕೆರಿಯರ್ ಬ್ರೇಕ್ ಆಗುತ್ತೆ ಎಂದು ಅಮ್ಮ ಇನ್ನೊಂದು ಮಗುವಿನ ಬಗ್ಗೆ ಯೋಚನೆ ಮಾಡೋಕು ರೆಡಿ ಇರಲಿಲ್ಲ. ಬದಲಿಗೆ ಬೆಲೆ ಬಾಳುವ ನಿರ್ಜೀವ ಬೊಂಬೆಗಳನ್ನು ಮನೆಯಲ್ಲಿ ತುಂಬಿ ಆಡು ಅಂದ್ರು. ನೆರೆ ಹೊರೆಯವರ ಮಕ್ಕಳ ಜೊತೆ ಸೇರಿದರೆ ಹಾಳಾಗುತ್ತೀಯಾ ಎಂದು ಟ್ಯೂಷನ್‍ಗೆ ಸೇರಿಸಿದರು. ಸ್ಕೂಲಿನಲ್ಲೂ ಓದು, ಟ್ಯೂಷನ್‍ನಲ್ಲೂ ಓದು. ಹೀಗೆ ಓದುವುದೆಂದರೇನೇ ಅಲರ್ಜಿಯಾಗತೊಡಗಿತ್ತು.

ಇನ್ನು ಸ್ಕೂಲಿನಲ್ಲೂ ನಮಗೆ ಸಾಕಷ್ಟು ಪ್ರಾಜೆಕ್ಟ್ ವರ್ಕ್ ಕೊಡುತ್ತಿದ್ದರು. ಅದನ್ನು ಹೇಗೆ ಮಾಡೋದು ಅಂತ ಟೀಚರ್‍ಗೆ ಕೇಳಿದರೆ ಗೂಗಲ್ ಇದೆ ಅದರಲ್ಲಿ ಹುಡುಕಿ ಮಾಡಿ ಅಂತಿದ್ದರು. ಅಮ್ಮನಲ್ಲಿ ಹೇಳಿದರೆ ಕಂಪ್ಯೂಟರ್ ಮೊಬೈಲ್ ಕೊಟ್ಟು ನೀನೆ ಮಾಡಿಕೋ ಅಂತಿದ್ರು. ಅಲ್ಲಿ ಸರ್ಚ್ ಮಾಡೋವಾಗ ಎನೋ ಟೈಪ್ ಮಾಡಿದ್ರೆ ಇನ್ನೇನೋ ಬರುತಿತ್ತು. ನಾನು ಮನೆಯಲ್ಲಿ ಒಬ್ಬನೇ ಇರುತ್ತಿದ್ದೆ ಹಾಗಾಗಿ ಟೈಂ ಪಾಸ್ ಮಾಡಲು ಅದನ್ನೆಲ್ಲ ನೋಡತೊಡಗಿದೆ. ಗೊತ್ತಾಗದೇ ಇರೋ ವಯಸ್ಸಿಗೆ ಗೊತ್ತಾಗಬಾರದಂಥವನ್ನು ನೋಡಿ ಬಿಟ್ಟೆ. ಹೀಗೆ ನನ್ನಲ್ಲಿದ್ದ ಮುಗ್ಧತೆ ಕಳೆದುಹೋಯಿತು.

ಮತ್ತೆ ಕಾಲೇಜಿನಲ್ಲೂ ನನ್ನ ಕಥೆ ಏನು ಬದಲಾಗಲಿಲ್ಲ. ಬೆಳಗ್ಗೆ ಕೆಲಸಕ್ಕೆ ಹೋಗುವ ತರಾತುರಿಯಲ್ಲಿ ಅಡುಗೆ ಮಾಡುವುದು ಕಷ್ಟವಾದಾಗ ಅಮ್ಮ ಕೈಗೆ ಸಾಕಷ್ಟು ಹಣ ಕೊಡುತ್ತಿದ್ದರು. ಹೊರಗಡೆ ಏನಾದ್ರು ತಿನ್ನು ಅನ್ನುತ್ತಿದ್ದರು. ಕೈಯಲ್ಲಿಬೇಕಾದಷ್ಟು ದುಡ್ಡು, ಹೇಗೆ ಖರ್ಚು ಮಾಡ್ದೆ ಅಂತ ಕೇಳುವವರಿಲ್ಲ ಹಾಳಾಗೋಕೆ ಇನ್ನೂ ಸುಲಭ ಆಯಿತು. ಫ್ರೆಂಡ್ಸ್ ಜೊತೆ ಮನರಂಜನೆಗಾಗಿ ಸಿನೆಮಾಗಳಿಗೆ ಹೋಗುತ್ತಿದ್ದೆ. ಅಲ್ಲಿ ಕದ್ದು ಮುಚ್ಚಿ ನೋಡುತ್ತಿದ್ದ ನೀಲಿಚಿತ್ರದ ದೃಶ್ಯಗಳೆಲ್ಲ ಮಾಮೂಲಿಯಾಗಿ ಎಲ್ಲ ಚಿತ್ರಗಳಲ್ಲಿ ಕಾಮನ್ ಆಗಿ ತೋರಿಸುತ್ತಿದ್ದರೆ, ಮೊದಲಿಗೆ ಅವುಗಳನ್ನು ನೋಡುವಾಗ ಮುಜುಗರ ಪಟ್ಟುಕೊಂಡರೂ ಮತ್ತೆ ಅದೂ ಅಭ್ಯಾಸವಾಗತೊಡಗಿತ್ತು. ಇವುಗಳನ್ನೆಲ್ಲ ನೋಡಿ ಪ್ರಾಯೋಗಿಕವಾಗಿ ಮಾಡಿ ನೋಡುವ ಆಲೋಚನೆ ಮನಸ್ಸಿನಲ್ಲಿ ಮೂಡಿ ಕೆಲವು ಸಲ ಪ್ರಯತ್ನಪಟ್ಟಿದ್ದು ಆಯಿತು. ಹೀಗೆ ನನ್ನಲ್ಲಿದ್ದ ಅಮಾಯಕತನವೂ ಹೊರಟು ಹೋಯಿತು.

ಇನ್ನು ಕಾಲೇಜಿನಲ್ಲಿ ನಾಲ್ಕು ಗೋಡೆ ನಡುವೆ ಬೆಳಗ್ಗಿನಿಂದ ಲೆಕ್ಚರ್ ಕೇಳಿ ತಲೆನೋವು ಬರುತಿತ್ತು. ಸ್ಕೂಲಿನಲ್ಲಿ ಇದ್ದ ಆಟಗಳೂ ಇಲ್ಲ. ಬೇಜಾರಾದಾಗ ಹೊರಗಡೆ ಬರುವ ಹಾಗಿಲ್ಲ, ಸೆಂಟ್ರಲ್ ಜೈಲಿನಲ್ಲಿ ಕುಳಿತ ಹಾಗೆ ಅನ್ನಿಸುತಿತ್ತು. ಕೂತು ಬೋರ್ ಆಗಿ ಆ ಕಡೆ ಈ ಕಡೆ ತಿರುಗಿದರೆ “ಹುಡುಗಿಯರನ್ನಾ (ಹುಡುಗರನ್ನಾ) ನೋಡೋಕೆ ತಿರುಗುತ್ತಿದ್ದೀಯಾ” ಅಂತ ಬೈಗಳು. ಆದರೆ ಆ ಲೆಕ್ಚರಗಳೇ ವಿದ್ಯಾರ್ಥಿಗಳನ್ನು ಕಾಮುಕ ದೃಷ್ಟಿಯಿಂದ ನೋಡುವಾಗ ಅವರ ಕಣ್ಣ ಗುಡ್ಡೆ ಕಿತ್ತು ಬಿಸಾಡಿ

ಬಿಡಬೇಕಿನಿಸುತಿತ್ತು. ನಮಗೆ ಉಪದೇಶ ಮಾಡುವ ಅವರು ಯಾವುದೇ ತತ್ವಗಳನ್ನು ಪಾಲಿಸುತ್ತಿರಲಿಲ್ಲ. ಹಾಗಾಗಿ ಪುಸ್ತಕದ ಬದನೆಕಾಯಿ ಹೇಳೋ ಅವರ ಮೇಲೆ ಯಾವ ರೆಸ್ಪೆಕ್ಟ್ ಇರಲಿಲ್ಲ. ಯಾವಾಗಲೂ ನಾವು ತಪ್ಪು ಮಾಡುವ

ಅಪರಾಧಿಗಳು ಅನ್ನೋ ತರಹ ನೋಡುತ್ತಿದ್ದರು. ಹೀಗೆ ಅವರುಗಳ ಮೇಲೆ ಇದ್ದ ಸ್ವಲ್ಪ ಭಯ ಭಕ್ತಿನೂ ಹೊರಟು ಹೋಯಿತು.

ಈಗ ಹೇಳಿ, ಬಾಲ್ಯದಲ್ಲಿ ನನಗೆ ಸಿಗಬೇಕಿದ್ದ ಪ್ರೀತಿ ಹೆತ್ತವರ ಕೆರಿಯರ್‍ನಲ್ಲಿ ಕಳೆದುಹೋಯಿತು. ಈಗ ನಮ್ಮ ಕೆರಿಯರ್ ಬೆಳೆಸುವುದರಲ್ಲಿ ನಾವು ಬ್ಯುಸಿಯಾಗಿರುವಾಗ ಅಪ್ಪ ಅಮ್ಮನಿಗೆ ಸಮಯ ಕೊಡುವುದಿಲ್ಲ ಅಂತ ಹೇಳೋದು ಸರಿನಾ?. ನಮ್ಮನ್ನು ಕೆಲಸದವರ ಹತ್ತಿರ ಬಿಟ್ಟವರನ್ನು ಈಗ ನಾವು ಅನಾಥಾಶ್ರಮದಲ್ಲಿ ಬಿಡುವುದು ತಪ್ಪಾ?. ರಹಸ್ಯವಾಗಿರಬೇಕಿದ್ದ ವಿಷಯಗಳನ್ನು ಗೂಗಲ್‍ನಲ್ಲಿ ಅಪ್ಲೋಡ್ ಮಾಡಿ ಮಕ್ಕಳಿಗೂ ಸಿಗುವಂತೆ ಮಾಡಿ ವಯಸ್ಸಿಗೆ ಬಾರದ ಮಕ್ಕಳ ಅಮಾಯಕತನವನ್ನು ಹಾಳು ಮಾಡುತ್ತಿರುವವರು ಯಾರು?. ಸಾಮಾಜಿಕ ಮೌಲ್ಯಗಳನ್ನು ತುಂಬಬೇಕಿದ್ದ ನಮ್ಮ ದೃಶ್ಯ ಮಾಧ್ಯಮಗಳಲ್ಲಿ, ಮುಖ್ಯವಾಗಿ ಸಿನೆಮಾದಲ್ಲಿ ಅಶ್ಲೀಲತೆಗೆ ಒತ್ತುಕೊಟ್ಟು ನಮ್ಮ ಮನಸ್ಸನ್ನು ರಾಡಿ ಮಾಡಿ ಅವುಗಳಿಂದ ಜೇಬು ತುಂಬಿಸಿಕೊಳ್ಳುತ್ತಿರುವವರು ಯಾರು?. ಆದರ್ಶ ಬಾಯಲ್ಲಿ ಮಾತನಾಡಿ ಪಾಲಿಸದೆ ಇರುವ ಶಿಕ್ಷಕಕರು ನಮ್ಮನ್ನು ದೂಷಿಸುವುದು ಸರಿಯೇ?.

ಈ ಸಮಾಜವೇ ಕೀಳು ಅಭಿರುಚಿಯಿಂದ ಕೀಳುಮಟ್ಟಕ್ಕೆ ಇಳಿಯುತ್ತಿರುವಾಗ ಇದಕ್ಕೆ. ಕಾರಣರಾದ ನೀವುಗಳು ಅಂದರೆ ತಂದೆ ತಾಯಿ ಶಿಕ್ಷಣ ಮತ್ತು ಸಮಾಜ ಎಲ್ಲರೂ ಹೊಣೆ ಹೊರಬೇಕಲ್ಲವೇ?. ನಮ್ಮನ್ನು ಸರಿಯಾಗಿ ಬೆಳೆಸುವುದರಲ್ಲಿ ಎಡವಿದ ನೀವುಗಳು ನಮ್ಮನ್ನು ಅಪರಾಧಿಗಳ ಹಾಗೆ ನೋಡುವುದು ಸರಿಯೇ? …ಈಗಲಾದರೂ ನಾವುಗಳು ನೀವು

ಮಾಡಿದ ತಪ್ಪಿಗೆ ಬಲಿಪಶುಗಳು ಎನ್ನುವುದನ್ನು ಒಪ್ಪಿಕೊಳ್ಳುತ್ತೀರಾ?..

ನಮ್ಮದಲ್ಲದ ಈ ಸಮಸ್ಯೆಗೆ ಪರಿಹಾರ ಕೊಡುತ್ತೀರಾ?. ದಯವಿಟ್ಟು ಹೇಳಿ..Rate this content
Log in