ನೇರ ಮಾತು, ನಿಜವಾದ ಮಾತು
ನೇರ ಮಾತು, ನಿಜವಾದ ಮಾತು
ನೇರ ಮಾತು ಬೇಜಾರು
ಮೃದು ಮಾತು ಸೂಪರು
ಸತ್ಯ ಕಹಿ, ಸುಳ್ಳು ಸಿಹಿ
"ನೇರವಾದ ಮಾತು" ಇದನ್ನು ಕೇಳುತ್ತಿದ್ದರೆ ನನಗೆ ಕನ್ನಡದ ಒಂದು ಪ್ರತಿಷ್ಠಿತ ಗಾದೆಯೊಂದು ನೆನಪಾಗುತ್ತಿದೆ. ಅದೇನೆಂದರೆ "ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ, ಎದ್ದು ಬಂದು ಎದೆಗೆ ಒದ್ದರಂತೆ".
ಈ ಗಾದೆ ಎಷ್ಟುು ನಿಜವಲ್ಲವೇ? ಏಕೆಂದರೆ ಇದ್ದುದನ್ನು ನೇರವಾಗಿ ಹೇಳಿದರೆ ಜನರಿಗೆ ಸಹಿಸಲು ಸಾಧ್ಯವಾಗುವುದಿಲ್ಲ. ನೇರವಾದ ಮಾತು ತುಂಬಾ ಕಠೋರವಾಗಿರುತ್ತದೆ. ಆದರೆ, ಮೃದುವಾದ ಮಾತು ಜೇನಿನಂತೆ ಸಿಹಿಯಾಗಿರುತ್ತದೆ. ನೇರವಾದ ಮಾತು ಆಡಿದವನನ್ನು ಮನುಷ್ಯರು ಕಲ್ಲು ಹೃದಯದವನು ಹಾಗೂ ಕಠೋರ ಮನಸ್ಸಿನವನು ಎಂದು ಕರೆಯುತ್ತಾರೆ. ಆದರೆ ಮೃದುವಾದ ಮಾತು ಆಡಿದವನನ್ನು ಹಾಗೂ ಅವನ ಮಾತುಗಳನ್ನ ಓಲೈಸುವವನನ್ನು ಮನುಷ್ಯರು ಸಹೃದಯದವನು ಒಳ್ಳೆಯ ಮನಸ್ಸಿನವನು ಎಂದು ಕರೆಯುತ್ತಾರೆ. ನೇರವಾದ ಮಾತು ಆ ಕ್ಷಣ. ಕಹಿಯಾಗಿದ್ದರೂ ಮುಂದೆ ತುಂಬಾ ಪರಿಣಾಮ ಬೀರುತ್ತದೆ. ಆದರೆ ಮೃದುವಾದ ಮಾತು ಆ ಕ್ಷಣಕ್ಕೆ ಹಿತವೆನಿಸಿದರೂ ಮುಂದೆ ಅದರ ಪರಿಣಾಮ ಘೋರವಾಗಿರುತ್ತದೆ. ನಮ್ಮ ನುಡಿ ಹೇಗೆ ನೇರವಾಗಿರುತ್ತದೆಯೋ ಹಾಗೆ ನಾವು ಸಹ ಬೇರೆಯವರ ನೇರವಾದ ಮಾತುಗಳನ್ನು ಒಪ್ಪಿಕೊಳ್ಳುವಂತರಾಗಬೇಕು.
#ನೇರಮಾತುಕತೆ
#seedhibaat