STORYMIRROR

Denight writer

Others

2  

Denight writer

Others

ಗುರಿ ತೋರಿಸಿದ ಗುರು

ಗುರಿ ತೋರಿಸಿದ ಗುರು

1 min
154

ಶಿಕ್ಷಣ ನೀಡುವ ಶಿಕ್ಷಕ

ಗಡಿ ಕಾಯುವ ಯೋಧ

ಗುರುವಿಲ್ಲದೇ-ವಿದ್ಯೆ ಇಲ್ಲ

ಯೋಧ ನಿಲ್ಲದೆ ಜಗತ್ತಿಲ್ಲ

   


ಪ್ರತಿಯೊಬ್ಬ ಮನುಷ್ಯನು ತನ್ನ ಜೀವನದಲ್ಲಿ ಬಹಳಷ್ಟು ಕನಸುಗಳನ್ನು ಕಂಡಿರುತ್ತಾನೆ. ತನ್ನ ಕನಸುಗಳನ್ನು ನನಸು ಮಾಡಲು ಬಹಳಷ್ಟು ಕಷ್ಟ ಪಡುತ್ತಾನೆ. ಜೀವನದಲ್ಲಿ ನಮಗೆ ಗುರಿ ಎಷ್ಟು ಮುಖ್ಯನೋ ಅಷ್ಟೇ ಗುರುನು ಮುಖ್ಯ.


 ಒಬ್ಬ ಗುರು ನೂರು ಪುಸ್ತಕಗಳಿಗೆ ಸಮಾನ , ಗುರುವಿನ ಜ್ಞಾನ ಬಹಳ ಅಗಾಧವಾಗಿರುತ್ತದೆ , ಎಲ್ಲಾ ಕಠಿಣ ಸವಾಲುಗಳನ್ನು ಎದುರಿಸಿ ಮೇಲೆ ಬಂದವನೇ ಗುರು. ಗುರುವಿಗೆ ಸಮಾನವಾದವರು ಯಾರು ಇಲ್ಲ. ಹಿಂದೆ ಗುರು ಮುಂದೆ ಗುರಿ ಎರಡು ಜೀವನದಲ್ಲಿ ಮಹತ್ತರವಾದ ಪಾತ್ರವನ್ನುವಹಿಸುತ್ತದೆ


ಗುರು ಹಾಗೂ ಶಿಷ್ಯರ ಸಂಬಂಧ ಅವೀನಯ ವಾದದ್ದು. ಶಿಷ್ಯ ಅರ್ಜುನ ಹಾಗೂ ಗುರು ದ್ರೋಣಾಚಾರ್ಯ ಅವರ ಸಂಬಂಧ ಗುರು ಶಿಷ್ಯರ ಸಂಬಂಧದ ಒಂದು ಉದಾಹರಣೆಯಾಗಿದೆ. 

ಈ ರೀತಿಯಾಗಿ ನಮ್ಮ ಜೀವನದ ಪ್ರತಿಯೊಂದು ಹಂತದಲ್ಲಿಯೂ ಒಬ್ಬೊಬ್ಬ ಗುರುವನ್ನು ಕಾಣುತ್ತೇವೆ.


ತಾಯಿಯೇ ಮೊದಲ ಗುರು ಹಾಗು ತಂದೆಯೆ ಮೊದಲ ದೇವರು ಎಂದು ಹೇಳಬಹುದು. ಅಕ್ಷರ ಹೇಳಿ ಕೊಡುವವರಿಂದ ಹಿಡಿದು ಜೀವನದ ಪಾಠ ಕಲಿಯುವ ತನಕ ನಾವು ಬಹಳಷ್ಟು ಗುರುಗಳನ್ನ ನೋಡಿರುತ್ತೇವೆ. ಅಂತಹ ಗುರುಗಳಿಗೆ ನಾವು ಸದಾ  ಋಣಿಯಾಗಿರುತ್ತೇವೆ. ಅದೇ ರೀತಿ ಗುರುಗಳಿಗೆ ಧನ್ಯವಾದವನ್ನು ಹೇಳಲು ನಾವು ಪ್ರತಿವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತೇವೆ.


ನನ್ನ ಜೀವನದಲ್ಲಿ ಪ್ರತಿಯೊಂದು ಹಂತದಲ್ಲಿ ನನ್ನನ್ನು

ತಿದ್ದಿರುವಂತಹ ನನ್ನ ಎಲ್ಲಾ ಗುರುಗಳಿಗೆ ಹೃತ್ಪೂರ್ವಕ ವಂದನೆಗಳು. 



Rate this content
Log in