Win cash rewards worth Rs.45,000. Participate in "A Writing Contest with a TWIST".
Win cash rewards worth Rs.45,000. Participate in "A Writing Contest with a TWIST".

vani shetty

Others


3.5  

vani shetty

Others


ಎಲ್ಲಿಂದರೋ ಬಂದವರು..

ಎಲ್ಲಿಂದರೋ ಬಂದವರು..

1 min 2.9K 1 min 2.9K

ಆವತ್ತು ಕೆಲಸ ಜಾಸ್ತಿ ಇದ್ದ ಕಾರಣ ಆಫೀಸ್ ಬಿಡೋವಾಗ ತಡರಾತ್ರಿಯಾಗಿತ್ತು. ಹೀಗಾದಾಗೆಲ್ಲಾ ಮನೆತನಕ ಡ್ರಾಪ್ ಇರುತ್ತೆ. ಕಾರಿನಲ್ಲಿ ನಾನು ಮತ್ತೆ ಇನ್ನೂ ಇಬ್ಬರಿದ್ದರು. ನಾವು ಪರಸ್ಪರ ಮಾತಾಡುತ್ತಾ ನೀವು ಯಾವ ಅಕೌಂಟ್ ,  ಕ್ಲೈಂಟ್ ದೇಶ ಯಾವುದು , ಯಾವ ಅಪ್ಲಿಕೇಷನ್..ಹೀಗೇ ಮಾತು ನಮ್ಮ ಭಾಷೆಯ ಕಡೆ ತಿರುಗಿತು. 


ಅದರಲ್ಲಿ ಒಬ್ಬ ಮೂಲತಃ ಕೋಲ್ಕತ್ತಾದವನು. ಬೆಂಗಳೂರಿಗೆ ಬಂದು ಆರು ವರ್ಷ ಆಯ್ತು ಅಂದ. ' ಒಹ್ ಕನ್ನಡ ಬರುತ್ತಾ' ಅಂತ ಕೇಳಿದೆ . 'ನೋ..ನೋ" ಅಂದ. 'ಸರಿ, ಅರ್ಥ ಆದ್ರೂ ಆಗತ್ತಲ್ವಾ,ಇಷ್ಟು ವರ್ಷದಲ್ಲಿ 'ಅಂದೆ.."ನೋ..Kannada is not an international language..ವೈ ಶುಡ್ ಐ ಲರ್ನ್ " ಅಂತ ನಿರ್ಲಕ್ಷ್ಯದಿಂದ ಹೇಳಿಬಿಟ್ಟ. 

ಸಿಟ್ಟಿನ ಭರದಲ್ಲಿ ನಾನಂದೆ, 'ಜಯನಗರಾನೂ ಇಂಟರ್ನ್ಯಾಶನಲ್ ಸ್ಥಳ ಅಲ್ಲ ಇಲ್ಯಾಕಿದೀರಿ??'

 

' Its none of your business' ಅಂತ ಅವನಂದ 

ಮಾತಿಗೆ ಮಾತು ಬೆಳೀತು. ಕೊನೆಗೆ ಅವ ಇಳಿಯೋ ಜಾಗಾನೂ ಬಂತು. 


ಆಗ ನಮ್ಮ ಡ್ರೈವರ್ ನಿಲ್ಲಿಸಲೇ ಇಲ್ಲ..ಈ ಆಸಾಮಿ 'ಓಯ್ ಸ್ಟಾಪ್ ಸ್ಟಾಪ್' ಅಂದ. 'ರೋಖೋ ಯಾರ್' ಅಂದ 


ಡ್ರೈವರ್ ಅವನ ಕಡೆ ತಿರುಗಿ ನೋಡದೆಯೇ ಕೈಸನ್ನೆಯಲ್ಲೇ ತಡಿ ಅಂತ ಅಂದು ಒಂದು ಕಿಲೋಮೀಟರ್ ಮುಂದೆ ನಿಲ್ಲಿಸಿ ಸ್ಪಷ್ಟ ಇಂಗ್ಲೀಷಲ್ಲಿ " mine is local vehicle sir.. Please take any international vehicle and reach your ಪ್ಲೇಸ್" ಅಂದ್ಬಿಟ್ರು. ನಂಗೆ ಒಳಗೊಳಗೇ ಒಂಥರಾ ವಿಕೃತ ಖುಷಿಯಾದರೂ ಮೆಲ್ಲಗೆ ಹೇಳಿದೆ 'ಸಾರ್ ನಿಮ್ ಕೆಲಸ ಹೋಗ್ಬಹುದು..ವಾಪಾಸ್ ಬಿಟ್ಬಿಡಿ!'


ಆಗ ಅವರಂದದ್ದು ಒಂದೇ ಮಾತು.."ನಮ್ಮತನಕ್ಕಿಂತ ನಾವು ಹೊಟ್ಟೆಪಾಡಿಗೆ ಮಾಡೋ ಕೆಲಸ ದೊಡ್ಡದಲ್ಲ ಮ್ಯಾಡಮ್. ಇದ್ ಹೋದ್ರೆ ಇನ್ನೊಂದು..ಎಲ್ಲೋ ಯಾರೋ ಏನೋ ಅಂದ್ರೇನೇ ಮೈ ಉರಿಯುತ್ತೆ. ಅಂಥಾದ್ರಲ್ಲಿ ಕಣ್ಮುಂದೆ ಹೀಗಾದ್ರೆ ತಡೆಯುತ್ತಾ ಜೀವ?"


ನಾ ಮಾತಿಲ್ಲದೇ ನಿಂತೆ.. ಗಾಡಿ ಹಿಂದಿನ ಗ್ಲಾಸಲ್ಲಿದ್ದ ಶಂಕರ್ ನಾಗ್ ಖುಷಿಯಲ್ಲಿ ನಕ್ಕಂಗಾಯ್ತು !


Rate this content
Log in