ಪ್ರಕೃತಿ
ಪ್ರಕೃತಿ
1 min
4
ಪೋಷಸುವುದರಲ್ಲಿ ತಾಯಿಯಂತೆ ಇವಳು
ಜಗಕೆಲ್ಲ ಆಮ್ಲಜನಕ ನೀಡುವಳು
ಹಾಗೆಯೇ ಇಳೆಗೆ ಮಳೆ ತರಿಸುವಳು
ಒಂಟಿತನಕ್ಕೆ ಉತ್ತಮ ಗೆಳತಿ ಇವಳು
ಸ್ವರ್ಗದಿಂದ ಧರೆಗಿಳಿದ ಸುಂದರಿ ಇವಳು
ಹಚ್ಚಹಸುರಿನ ದೇವತೆ ಇವಳು
ಪ್ರಾಣಿ ಪಕ್ಷಿಗಳಿಗೆ ಆಶ್ರಯ ಒದಗಿಸಿರುವಳು
ನಾವು ಇವಳನ್ನು ನೋಡುತ್ತಲಿದ್ದರೆ
ನಮ್ಮಲ್ಲಿ ಹೊಸ ಹೊಸ ಭಾವನೆ ಕಲ್ಪನೆಗಳ
ಹುಟ್ಟಿ ಹಾಕುತ್ತಾ ಅಮರಗೊಂಡಿರುವಳು
ಇವಳಿದ್ದರೆ ಈ ಜಗವಿರುವುದು
ಇವಳಿಲ್ಲದೆ ಹೋದರೆ ನಾವೆಲ್ಲಿ
ಅತಿಯಾಗುತ್ತಿದೆ ಮಾನವನ ದುರಾಸೆ
ಪ್ರಕೃತಿಗೆ ಆಗುತ್ತಿದೆ ಈ ದುರಾಸೆಗೆ ಅಂತ್ಯ
ನಾಶ ಮಾಡಬೇಡಿರಣ್ಣ ಈ ಪ್ರಕೃತಿಯ
ಇವಳಿದ್ದರೆ ಈ ಭೂಮಿ ಕಣಣ್ಣ
ಪ್ರಕೃತಿಯನ್ನು ಉಳಿಸೋಣ
ಮರಗಳ ಬೆಳೆಸಿದ ಭೂಮಿಯ ಹಸಿರಾಗಿಸೋಣ
✍️ ವಿನಯ್ ಕುಮಾರ್, 10ನೇ ತರಗತಿ, ಸರ್ಕಾರಿ ಪ್ರೌಢಶಾಲೆ ಹುಲಿಕುಂಟೆ.
