ಮೋದಕ ಪ್ರಿಯ ಹೇ ಏಕದಂತ ಗಣಪತಿ..!!
ಮೋದಕ ಪ್ರಿಯ ಹೇ ಏಕದಂತ ಗಣಪತಿ..!!
1 min
32
ಗೌರಿಯ ಪುತ್ರನೇ ಓ ಗಣಪ
ನಿನ್ನಯ ಮೂಷಿಕನೆಲ್ಲಪ್ಪ
ಪಾಯಸ ಕಡುಬು ತಂದಿರುವೆ
ಬಾರದೆ ನೀನು ಎಲ್ಲಿರುವೆ
ನಿನ್ನಯ ಭಕ್ತಿಯೇ ನಮಗೆ ಶಕ್ತಿಯೂ
ನಿನ್ನಯ ಪಾದದಿ ನಮಗೆ ಮುಕ್ತಿಯು
ಚೌತಿಯ ದಿನವು ನಿನ್ನಯ ದಿನವೂ
ಚಂದ್ರನ ನೋಡಲು ನಮಗೆ ಭಯವು
ಗಜಮುಖ ನೀನು ಗಣಪತಿಯು
ಪ್ರಥಮ ವಂದಿತ ದೇವಾಧಿಪತಿಯು
ಕುಬೇರನ ಅಹಂ ಅನು ಮುರಿದೇ ಅಂದು
ಕಾಯೋ ನೀ ನಮ್ಮೆಲ್ಲರ ಎಂದೂ
ನಿನ್ನಯ ಸಹೋದರ ಸುಬ್ರಮಣ್ಯನು
ನಿನ್ನಯ ಜಾಣ್ಮೆಗೆ ಯಾರು ಸಮಾನರು
ತಂದೆ ತಾಯಲೇ ಜಗವನು ಕಂಡವ
ಮೋದಕ ಪ್ರಿಯ ಹೇ ಗೌರಿಯ ಕಿರಿಮಗ
ಸಿಧ್ದಿ ಬುದ್ಧಿ ನಿನ್ನಯ ಶಕ್ತಿಯು
ಗರಿಕೆ ಒಲಿಯುವ ಮನಸಿನ ಮಗುವು
ಅಂಕುಶ ಹಿಡಿದು ದುಷ್ಟರ ಕೊಲ್ಲುವ
ಅವಲಕ್ಕಿ ಕೊಬ್ಬರಿ ಚೆನ್ನಾಗಿ ಮೆಲ್ಲುವ
