ಮಾಯೇ...ನೀ ದೂರ ಹೋಗು.!!
ಮಾಯೇ...ನೀ ದೂರ ಹೋಗು.!!
1 min
147
ಭಯವಾಗುತ್ತಿದೆ ನನಗೆ
ಏಕೋ ತಿಳಿಯುತ್ತಿಲ್ಲ?
ಹಸಿವಾಗುತ್ತಿದೆ ನನಗೆ
ಊಟ ಯಾಕೋ ಸೇರುತ್ತಿಲ್ಲ!
ನಾ ಬಯಸಿದ್ದು ಅಂದು ಸಿಗಲಿಲ್ಲ ನನಗೆ
ಇಂದು ಅದೆ ಹುಡುಕಿ ಬಂದಿದೆ ಭಯವಾಯಿತು ನನಗೆ
ನಾ ಬಯಸುವುದು ಉಳಿಯದು ಕೊನೆಯವರೆಗೂ ನನ್ನ ಸನಿಹ
ಇದೇ ಹೆಚ್ಚಿಸುತಿಹುದು ಹೃದಯದ ನೋವ!
ಪ್ರೀತಿಗಿಂತಲೂ ಸ್ನೇಹ ದೊಡ್ಡದು
ಆಸೆಗಿಂತ ತ್ಯಾಗ ದೊಡ್ಡದು
ಪ್ರೀತಿ ಮಧುರ ತ್ಯಾಗ ಅಮರ
ನನ್ನ ಹೃದಯ ಹಾಗೂ ಮನಸಿನ ನಡುವೆ ನಡೆಯುತಿದೆ ಸಮರ!
ಸಿಕ್ಕರೆ ಸಿಗಲಿ ಬಿಟ್ಟರೆ ಬಿಡಲಿ
ಸಿಕ್ಕರೆ ಸಂತೋಷ ಬಿಟ್ಟರೆ ಸಂಕಟ!
ನೋವು ನಲಿವು ಸಮನಾದ ಜೀವನವನು
ನೀಡು ನೀ ನನಗೆ ಪ್ರೀತಿಯೆಂಬ ಬಂಧನವನು!