kiran sumarang

Others

3  

kiran sumarang

Others

ತಾಯ್ತನ

ತಾಯ್ತನ

3 mins
12.4K


ದಿವ್ಯಾ ತನಗೆ ಮದುವೆಯಾಗಿ ಇಷ್ಟು ವರುಷಗಳಾದರು ಮಕ್ಕಳಾಗಲಿಲ್ಲ ಎಂಬ ದುಗುಡದಿಂದ ಮಗ್ಗಲು ಬದಲಿಸಿದಳು.

ಬಾಲ್ಯದಿಂದಲೂ ಮಕ್ಕಳ ಮೇಲೆ ಅಪಾರವಾಗಿ ಮಕ್ಕಳ ಮೇಲೆ ಪ್ರೀತಿ ಇಟ್ಟುಕ್ಕೊಂಡಿದ್ದ ಆಕೆ ಮದುವೆಯ ಮುಂಚೆಯೇ ಫ್ಯಾಮಿಲಿ ಪ್ಲಾನಿಂಗ್ ಎಲ್ಲಾ ಬೇಡ, ವರುಷ ತುಂಬುವುದರೊಳಗೆ ಮಗು ಬೇಕು ಅಂತ ಶೇಖರನಲ್ಲಿ ಅರುಹಿದ್ದಳು.ಇದಕ್ಕೆ ಒಲ್ಲದ ಮನಸ್ಸಿನಿಂದಲೇ ಶೇಖರ ಹ್ಞುಂ ಗುಟ್ಟಿದ್ದ.. ಎರಡು ವರುಷಗಳುರಳಿದರು ಯಾವುದೇ ಶುಭ ಸೂಚನೆ ದೊರೆಯದಾಗ ದಿವ್ಯಾ ತುಂಬಾ ಖಿನ್ನತೆಗೆ ಒಳಗಾಗಿದ್ದಳು.ಆಗ ಅವಳ ಅತ್ತೆ ತಮ್ಮ ಕುಟುಂಬದಲ್ಲಿ ಎಲ್ಲರಿಗೂ ತಡವಾಗಿ ಸಂತಾನವಾಗಿದೆ.ಕಾಯೋಣ ಇಷ್ಟು ಬೇಗ ಹತಾಶರಾಗುವುದು ಬೇಡ ದೇವರು ಅಷ್ಟು ಕಟುಕನಲ್ಲಾ ಅಂಯ ಸಮಾಧಾನ ಮಾಡುತ್ತಾ ಇದ್ದಳು. ಐದಾರೂ ವರ್ಷವಾದರೂ ಫಲ ದೊರೆಯದಾಗ ಕುಟುಂಬಸ್ಥರ ಟೆಂಪಲ್ ರನ್ ಶುರುವಾಯ್ತು. ಜಾತಕ ಕುಂಡಲಿ ಅಂತ ತೋರಿಸಿ ಜ್ಯೋತಿಷಿಗಳು ಸೂಚಿಸಿದ ನಾಗ ಬಲಿ, ನಾರಾಯಣ ಬಲಿ ಇತ್ಯಾದಿಗಳನ್ನು ಮಾಡಿದರು.ಇಷ್ಟೆಲ್ಲಾ ಆದರೂ ಅವಳ ಗರ್ಭ ಚಿಗುರೊಡೆಯುವ ಲಕ್ಷಣ ಕಾಣಲಿಲ್ಲಾ.

        ಈ ನಡುವೆ "ವೈದ್ಯೋ ನಾರಾಯಣೋ ಹರಿಃ" ಅಂತ ವೈದ್ಯರ ಬುಡಕ್ಕೆ ಬಂದರು. ದಂಪತಿಯ ಲೈಂಗಿಕ ಶಕ್ತಿ, ವೀರ್ಯ ಹಾಗೂ ಅಂಡಾಣುಗಳ ಉತ್ಪತ್ತಿ ಪ್ರಮಾಣ ಇತ್ಯಾದಿಗಳನ್ನು ಏನೋ ಪರೀಕ್ಷಿಸಿದ ವೈದ್ಯ.. ಶೇಖರನಿಗಿದ್ದ ಬಲಹೀನ ವೀರ್ಯಾಣುಗಳ ಅವಸ್ಥೆಯನ್ನು ತನ್ನ ಸ್ವಾರ್ಥ ಸಾಧನೆ ಬಳಸಿಕೊಳ್ಳೋಕೆ ಹವಣಿಸಿದ.‌. ವಯಸ್ಸು ಮೂವತ್ಮೂರಾದರೂ, ದಿವ್ಯಾ ಹದಿನಾರರ ಕನ್ಯೆಯಂತೆ ಕಂಗೊಳಿಸುತ್ತಿದ್ದಳು... ಇಂತಹ ಚೆಲುವೆ ನನ್ನವಳಾಗಬೇಕೆಂದು ಕಾಮಿ ಡಾಕ್ಟರ್ ತನ್ನ ಛೆಂಬರ್ ನಲ್ಲಿ ದಿವ್ಯಾಳನ್ನು ಕುರಿತು " ನಿನ್ನ ಗಂಡ ಹಾಸಿಗೆಯ ಮೇಲೆ ಎಷ್ಟೇ ಶೂರನಾದರೂ ,ಆತನ ವೀರ್ಯಕ್ಕೆ ಸಂತಾನ ಕರುಣಿಸುವ ಶಕ್ತಿಯಿಲ್ಲಾ. ನೀನು ಮನಸು ಮಾಡಿದರೆ ನಿನಗೆ ಗುಪ್ತವಾಗಿ ನಾನು ಸಂತಾನ ಕರುಣಿಸುತ್ತೇನೆ. ನಿನ್ನಲ್ಲೇ ಏನೋ ಒಂದು ತೊಂದರೆ ಇದೆ ಅಂತ ನಿನ್ನ ಗಂಡನಿಗೆ ಹೇಳಿ ನನ್ನ ಬಳಿ ಚಿಕಿತ್ಸೆ ನೆಪವೊಡ್ಡಿ ಆಗಾಗ ಸಂಧಿಸು" ಎಂದು ಹೇಳಿದ..

                  ಇದನ್ನಾಲಿಸಿದ ದಿವ್ಯಾಳಿಗೆ ಒಂದೇ ಸಲ ಸಿಡಿಲು ಬಡಿಯಿತು. ಒಟ್ಟೊಟ್ಟಿಗೆ ಎರಡೆರಡು ಶಾಕ್, ತನ್ನ ಗಂಡ ಷಂಡ ಅಂತ ದುಃಖ ಒಂದು ಕಡೆಯಾದರೆ ಕಾಮುಕ ಡಾಕ್ಟರ್ ನ ಅಸಹ್ಯ ನಡುವಳಿಕೆ.. ಸಾವರಿಸಿಕೊಂಡ ದಿವ್ಯಾ ಇದರ ಬಗ್ಗೆ ಯೋಚಿಸೋಕೆ ತನಗೆ ಸಮಯ ಬೇಕು ಅಂತ ಹೇಳಿ ಸಾವಕಾಶವಾಗಿ ವೈದ್ಯನ ಕೈಯಿಂದ ಜಾರಿಕೊಂಡಳು...

ಇವಳ ಧನಾತ್ಮಕ ಉತ್ತರದ ನಿರೀಕ್ಷೆ ಇಟ್ಟುಕೊಂಡ ವೈದ್ಯ; ದಿವ್ಯಳಿಗೆ ಪ್ರಸ್ತುತ ಗರ್ಭಧಾರಣೆ ಸಾಧ್ಯವಿಲ್ಲಾ, ಚಿಕಿತ್ಸೆಯ ಅಗತ್ಯವಿದೆ ಅಂತ ಶೇಖರನ ಮುಂದೆ ಪೂಂಗಿ ಊದಿದನು..

                  ದಿವ್ಯಾ ಮನೆಯಲ್ಲಿಯ ಎಲ್ಲಾ ಕೆಲಸಗಳಲ್ಲಿ ಆಸಕ್ತಿ ಕಳೆದುಕೊಂಡು ಬೇಜಾರು ಕಳೆಯಲು ನಾಲ್ಕು ದಿನದ ಮಟ್ಟಿಗೆ ತವರು ಸೇರಿದಳು. ತವರಲ್ಲಿದ್ದರೂ ಅವಳ ಮನದಲ್ಲಿ ಈಗ ಯೋಚನೆಗಳ ಸರಮಾಲೆ.ಮಡಿಲು ತುಂಬಬೇಕೆಂದರೆ ಪರಪುರುಷನಿಗೆ ಸೆರಗು ಹಾಸಲೇಬೇಕೆ? ತನ್ನ ಅಸಹಾಯಕತೆಯನ್ನು ತನ್ನ ತಲುಬಿಗೆ ಬಳಸಿಕೊಳ್ಳಲು ಯತ್ನಿಸಿದ ಡಾಕ್ಟರ್ನ ಪಿಂಡ ನನ್ನ ಹೊಟ್ಟೆಯಲ್ಲಿ ಬೆಳೆಯ ಬೇಕೆ? ಮಗುವಿಗಾಗಿ ವ್ಯಭಿಚಾರಿಯಾಗಲೇ? ಮಗುವಾದ ಮೇಲೆ ಡಾಕ್ಟರ್ ನನ್ನ ಪಾಡಿಗೆ ನನ್ನ ಬಿಡುವನೇ ಅಥವಾ ಜೀವನ ಪೂರ್ತಿ ನಾನವನಿಗೆ ದೇಹ ಒಪ್ಪಿಸಬೇಕೆ?......

                               ಅಪರೂಪಕ್ಕೆ ತವರಿಗೆ ಬಂದ ದಿವ್ಯಳನ್ನು ಮಾತನಾಡಿಸಲು ಕುಮಾರ ಬಂದ.ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿರುವ ಇವಳು ಏಕೋ ಮೊದಲಿನ ಹಾಗೆ ಇಲ್ಲಾ ತುಂಬಾ ಮಂಕಾಗಿದ್ದಾಳೆ ಎಂದೆಣಿಸಿ ಕಾರಣ ವಿಚಾರಿಸಿದ..ಮನಸ್ಸಿನೊಳಗಿನ ನೋವು ಹಂಚಿಕೊಂಡರೆ ದುಃಖದ ಭಾರ ಕಡಿಮೆಯಾಗುತ್ತದೆ ಅಂತಾರೆ.ಇದು ಕಡಿಮೆಯಾಗುವ ದುಃಖವಲ್ಲಾ.. ಹಾಗೂ ಇಂತಹ ವಿಚಾರ ಯಾರ್ಯಾರಲ್ಲಿಯೋ ಹಂಚಿಕೊಳ್ಳುವ ಹಾಗಿಲ್ಲಾ. ಕರುಣೆ ಹೋಗಲಿ ಮತ್ತೊಂದಿಷ್ಟು ಕಾಮುಕರನ್ನು ಆಹ್ವಾನಿಸಿದಂತೆ. ಹಾಗೆ ನೋಡಿದರೆ ಕುಮಾರ ಅಂತಹ ಮನುಷ್ಯನಲ್ಲಾ. ಎಲ್ಲರ ಕಷ್ಟಕ್ಕೆ ಒದಗುವ , ಸಹಾನೂಭೂತಿಯುಳ್ಳವ, ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣುವವನಾಗಿದ್ದ.ಆದರೂ ಅನುಮಾನದ ಹೆಣ್ಣು ಹೃದಯ ಗುಟ್ಟು ಬಿಟ್ಟುಕೊಡದೆ ಪ್ರಯಾಣದ ಆಯಾಸ ಎಂದು ಹೇಳಿ ಸುಮ್ಮನಾಗಿಸಿದಳು..

                ಕುಮಾರ ಕುಶಲೋಪರಿ ಎಲ್ಲಾ ವಿಚಾರಿಸಿ ನಾಳೆ ಸಿಗುವೆನೆಂದು ದಿವ್ಯಳನ್ನು ಬಿಳ್ಗೊಂಡ.. ಅವನು ಆ ಕಡೆ ಹೋದ ನಂತರ ಕುಮಾರನ ವಿಷಯವಾಗಿ ಇವಳಲ್ಲಿ ವಿಚಾರ ಮಂಥನ ಆರಂಭವಾಯ್ತು.. ವಯಸ್ಸು ನಲವತ್ತು ದಾಟಿದರೂ ಮದುವೆ ಭಾಗ್ಯ ಇವನಾದಾಗಿಲ್ಲ.. ಕಾರಣ ಆಸ್ತಿವಂತನಲ್ಲ.. ಹರೆಯದಲ್ಲಿ ಬಣ್ಣದ ಮಾತುಗಳನ್ನಾಡಿ ಹುಡುಗಿಯರನ್ನು ಒಲಿಸಿಕೊಳ್ಳುವ ಕಲೆಯು ಇರಲಿಲ್ಲ.. ಇಂತಹ ಕುಮಾರನನ್ನು ಕೂಡಿ ನನ್ನ ಮಡಿಲು ತುಂಬಿಕೊಂಡರೆ ಹೇಗೆ ಎನ್ನುವ ಆಲೋಚನೆ ಅವಳಲ್ಲಿ ಮೊಳಕೆಯೊಡಿಯಿತು.. ಕಾರಣ ಈತ ಡಾಕ್ಟರ್ ನ ಹಾಗೆ ತನ್ನ ದೇಹ ಬಯಸಿದವನಲ್ಲ.. ಇವನ ಮನೆ ದೂರ ಇರುವುದರಿಂದ ಈತ ಮತ್ತೆ ಮತ್ತೆ ಸಂಗ ಬಯಸಿ ಬರುವುದಿಲ್ಲಾ.. ಹೆಣ್ಣಿನ ರುಚಿಯೇ ನೋಡದ ಇವನು ಅದನ್ನು ಅನುಭವಿಸಿದ ಹಾಗೂ ಆಯಿತು ಎಂದು ಯೋಚಿಸತೊಡಗಿದಳು.

             ಮಾರನೇ ದಿನ ಕುಮಾರ ಬಂದ ಕೂಡಲೇ "ಹೇ ಊರ ಕೆರೆಯ ಕಟ್ಟೆ ಹೊಸದಾಗಿ ಕಟ್ಟಿದ್ದಾರಂತಲ್ಲಾ ನೋಡ್ಕೊಂಡ ಬರೋಣ " ಅಂತ ಹೇಳಿ ಏಕಾಂತದಲ್ಲಿ ಅವನೊಟ್ಟಿಗೆ ಸಾಗಿದಳು.ಸಮಯ ನೋಡಿ ವಿಷಯ ಪ್ರಸ್ತಾಪಿಸಿದಳು. ಕೆರೆಯು ತುಂಬಿದಂತೆ ಅವಳಲ್ಲಿರುವ ಮಗುವಿನ ಬಯಕೆ ತುಂಬಿ ಹರಿದು ಕುಮಾರನ ಗದ್ದೆಯ ಕಡೆ ಸಾಗಿತು. ಮರಭೂಮಿಯಲ್ಲಿ ಒಯಾಸಿಸ್ ಸಿಕ್ಕ ಹಾಗೆ ಕುಮಾರನ ತನು ತತ್ ಕ್ಷಣ ಈ ಆಫರ್ ಗೆ ಅಸ್ತು ಅಂದಿತು.. 

         ಡಾಕ್ಟರ್ ಹೇಳಿದ ಸುಳ್ಳನ್ನು ಪುನರಾವರ್ತಿಸಿ ತವರು ಮನೆಯ ಸಮೀಪ ನಾಟಿ ವೈದ್ಯರ ಔಷದಿ ತೆಗೆದುಕೊಳ್ಳುತೇನೆ ಎಂದ್ಹೇಳಿ ತವರಿಗೆ ಮತ್ತೆ ಮತ್ತೆ ಬರತೊಡಗಿದಳು. ಕುಮಾರನ ಕೃಪೆಯಿಂದ ವರ್ಷದೊಳಗೆ ಅವಳಿ ಮಕ್ಕಳ ತಾಯಿಯಾದಳು.. ಮಕ್ಕಳಾದ ನಂತರ ದಿವ್ಯಾ ಕುಮಾರನ ಸಂಗವೆನೋ ತೊರೆದಳು. ಇವಳ ಗಂಡನ ದೌರ್ಬಲ್ಯ ಗೊತ್ತಿದ್ದ ಡಾಕ್ಟರ್ ಗಂಡನಿಗೆ ಆತನ ದೌರ್ಬಲ್ಯ ವಿವರಿಸಿದ.

          ಸತ್ಯವರಿತ ಶೇಖರ ಕೆಂಡಾಮಂಡಲನಾದ.. ಗಂಡ ಹೆಂಡತಿಯ ಸಂಬಂಧ ವಿಚ್ಛೇದನದ ಹಂತ ತಲುಪಿದಾಗ ಪ್ರಾಮಾಣಿಕವಾಗಿ ನಡೆದ ವಿಷಯವನ್ನೆಲ್ಲಾ ಅರುಹಿದಳು. ಅಪ್ಪಿತಪ್ಪಿಯು ತನ್ನ ಮಡಿಲು ತುಂಬಿದ ಕುಮಾರನ ಹೆಸರನ್ನು ಹೇಳಲಿಲ್ಲ. ತನಗೆ ಷಂಡತನವಿದ್ದರೂ ಗಂಡೆಂಬ ದರ್ಪ ತೊಲಗೋಕೆ ಸಾಧ್ಯವಿಲ್ಲಾ. ಆದ್ದರಿಂದ ಶೇಖರ ವಿಚ್ಛೇದನ ಕೊಟ್ಟೆ ಬಿಟ್ಟ.

     ಗಂಡು ತನ್ನ ಚಪಲಕ್ಕಾಗಿ ಹೆಣ್ಣಿನ ಸಂಗ ಮಾಡಿದರೆ ತಪ್ಪಿಲ್ಲಾ.ಮದುವೆಯಾದ ನಂತರ ಕೂಡಾ ಆಫೀಸ್ ಸ್ಟಾಫ್ ಒಬ್ಬಳೊಡನೆ ಇರುವ ಅಕ್ರಮ ಸಂಬಂಧದಿಂದ ತಾನು ಹೆಂಡತಿಗೆ ಮೋಸ ಮಾಡಿದ್ದೇನೆ ಅನ್ನುವುದು ಶೇಖರ ಒಪ್ಪಿಕೊಳ್ಳಲ್ಲಾ. ಎಲ್ಲೋ ತಾಯ್ತತನದ ಆಸೆಯಿಂದ ಬೇಲಿ ಹಾರಿದ ಹೆಂಡತಿ ಮಾಡಿದ ತಪ್ಪು ಇವನಿಗೆ ಅಕ್ಷಮ್ಯ ಅಪರಾಧವಾಯಿತು.

   ಹೆಣ್ಣಾಗಿ ಹುಟ್ಟಿದ ಪ್ರತಿಯೊಂದು ಜೀವಿ ತಾಯಿಯಾಗ ಬಯಸುವುದು ತಪ್ಪಲ್ಲಾ. ಅದೇ ವಿಧಿಯ ಕಾಲು ತುಳಿತಕ್ಕೊಳಗಾಗಿ ಹೆಣ್ಣು ತಾಯ್ತನಕ್ಕಾಗಿ ಮಾಡಿದ ಕಾರ್ಯ ಸಮಾಜದ ದೃಷ್ಟಿಯಿಂದ ತಪ್ಪಾದರೂ ಪ್ರಕೃತಿ ಧರ್ಮವನ್ನು ಅವಲೋಕಿಸಿದಾಗ ತಪ್ಪಲ್ಲಾ .ಆದರೂ ಇಲ್ಲಿ ಷಂಡ ಗಂಡನನ್ನು ದಯಪಾಲಿಸಿದ ವಿಧಿಯ ತಪ್ಪೋ? ಕಾಮುಕ ವೈದ್ಯನ ತಪ್ಪೋ? ಅಥವಾ ಮಗು ಬೇಕೆಂದು ಹಂಬಲಿಸಿದ ದಿವ್ಯಳ ತಪ್ಪೋ ? ಪರ ಸ್ತ್ರೀ ಸಂಗ ಮಾಡಿದ ಕುಮಾರನ ತಪ್ಪೋ? ಅಥವಾ ಗಂಡೆಂಬ ಜಂಭದ ಕೋಳಿಯ ತಪ್ಪೋ ನೀವೇ ನಿರ್ಧರಿಸಿ.


  (ಇಲ್ಲಿ ಎರಡು ಮೂರು ಸತ್ಯ ಘಟನೆಗಳನ್ನು ಕೇಳಿ, ಲೇಖನಿಯ ಸುಣ್ಣ ಬಣ್ಣ ಬಳಸಿ ಹೆಣೆದ ಕಥೆಯಿದೆ.ಆದ್ದರಿಂದ ಇಲ್ಲಿ ಬರುವ ಸನ್ನಿವೇಷಗಳು ಪಾತ್ರಗಳು ನಿಮ್ಮ ಜೀವನಕ್ಕೆ ಹೋಲಿಕೆಯಾದಲ್ಲಿ ಸುಮ್ಮನಿರಿ. ಕುಂಬಳ ಕಾಯಿ ಕಳ್ಳನೆಂದರೆ ಹೆಗಲು ಮುಟ್ಟಿಕೊಳ್ಳುವುದು ಬೇಡ.ಇಲ್ಲಿ ಯಾರ ಮನಸ್ಸು ನೋಯಿಸುವ ಉದ್ದೇಶವಿಲ್ಲಾ.)

                                                           

            

                     

                               

                       



Rate this content
Log in

More kannada story from kiran sumarang