Shreenidhi Baindur

Others

1  

Shreenidhi Baindur

Others

ನೆನಪಿನಂಗಳದಿಂದ

ನೆನಪಿನಂಗಳದಿಂದ

4 mins
82


ಅದು 2019ನೇ ಮೇ ಮೊದಲವಾರ, ನನ್ನವರ ಬಿಟ್ಟು ಅಂದರೆ ಭಾರತ ಬಿಟ್ಟು ಸುಮಾರು ಇಪ್ಪತ್ತು ವರ್ಷಗಳು ಕಳೆದಿದ್ದವು. ಇಷ್ಟು ವರ್ಷಗಳ ಕಾಲ ಬಾನಂಗಳದಲ್ಲಿ ಹಾರಾಡುತ್ತಾ ಸಾಧನೆ ಶಿಖರ ಮುಟ್ಟಬೇಕೆಂಬ ಮನಸ್ಸಿಗೆ ಇತ್ತೀಚಿಗಷ್ಟೇ ತನ್ನ ಗೂಡು ಸೇರಬೇಕೆಂಬ ಆಸೆ ಮನದಲ್ಲಿ ಚಿಗುರೊಡೆಯಿತ್ತು,ತಾಯಿ ಮಣ್ಣಿನ ಸೆಳೆತವೇ ಅದಲ್ಲವೇ. 

    ಫ್ಲೈಟ್ ಗೆ ಇನ್ನೇನು ಒಂದು ಗಂಟೆ ಬಾಕಿ ಇತ್ತು ಗಡಿಬಿಡಿಯಲ್ಲಿ ಹೊರಡಲು ಸಿದ್ಧನಾದೆ, ಪ್ಯಾಕಾದ ಲಗೇಜನ್ನು ಕಾರಿನ ಒಳಗಡೆ ಹಾಕಿ ಮಂಜು ಕೂಡ ಸಿದ್ಧನಾಗಿ ನಿಂತಿದ್ದ, ಡ್ರೈವರ್ಗೆ ಕಾರ್ ತೆಗೆಯಲು ಹೇಳಿ ಇಬ್ಬರೂ ಕಾರು ಹತ್ತಿ ಹೊರಟೆವು, ಮಂಜು ನಮ್ಮದೇ ಊರಾದ ಶಿರಸಿ ಅವನು, ನಮ್ಮನೆಯಲ್ಲೇ ಆಳಾಗಿ ದುಡಿಯುತ್ತಿದ್ದ, ಊರಿನಲ್ಲಿ ನಳಪಾಕ ಎಂದು ಹೆಸರುವಾಸಿಯಾಗಿದ್ದ, ಉದ್ಯೋಗ ಅರಸಿ ಅಮೆರಿಕಾಕ್ಕೆ ಹೊರಡುವ ಸಂದರ್ಭ ಬಂದಾಗ ಅಪ್ಪ-ಅಮ್ಮ ನನ್ನ ನೋಡಿಕೊಳ್ಳಲು ನನ್ನ ಜೊತೆಗಾರನಾಗಿ ಕಳಿಸಿಕೊಟ್ಟರು, ಅಪರಿಚಿತ ನೆಲದಲ್ಲೂ ನನ್ನವರೆಂದು ಕೊಳ್ಳಲು ಇದ್ದ ಒಂದು ಜೀವ ಇದು...

 ಚೆಕಿಂಗ್ ಎಲ್ಲ ಮುಗಿಸಿ ಫ್ಲೈಟ್ ಹತ್ತಿದೆವು, ಎಷ್ಟು ವರ್ಷಗಳ ನಂತರ ತನ್ನವರ ನೋಡುವ ತುಡಿತ ಮನದಲ್ಲಿ ಚಿಟ್ಟೆಯ ಹಾರಾಟ ಸೃಷ್ಟಿಸಿತು, ಫ್ಲೈಟ್ ಆಕಾಶದೆತ್ತರಕ್ಕೆ ಹಾರುತ್ತಿದ್ದಂತೆ ನನ್ನ ಕಲ್ಪನಾ ಲೋಕದಲ್ಲಿ ಊರಿಗೆ ಬಂದು ಭೇಟಿ ಕೊಟ್ಟು ಬಿಟ್ಟೆ.

  ಮಲೆನಾಡ ಶಿರಸಿಯ ಬಳಿ ಇರುವ ಪುಟ್ಟ ಹಳ್ಳಿ ನನ್ನೂರು, ಸುತ್ತ ಹಸಿರು ಸೀರೆಯುಟ್ಟು ಮೆರೆಯುತ್ತಿರುವ ಪೈರು- ಫಸಲು, ಆ ಮಣ್ಣಿನ ಗಂಧ, ಆ ಊರಿನ ಚಂದ,  ಒಮ್ಮೆ ಸ್ಮೃತಿ ಪಲ್ಲಟದಲ್ಲಿ ಹಾಗೇ ಹಾದು ಹೋದಂತಾಯಿತು.

 ಅಚ್ಚುಕಟ್ಟಾದ ಹಳ್ಳಿಮನೆ, ಗದ್ದೆ ಬಯಲು, ಎತ್ತ ನೋಡಿದರೂ ಅತ್ತ ಗಿಡ ಬಳ್ಳಿಗಳು, ಆ ಸ್ವಚ್ಛಂದ ಬಾನು ಹಕ್ಕಿಯ ಹಾರಾಟ, ಆ ಪರಿಶುದ್ಧ ನದಿಯ ಹರಿದಾಟ, ಹಳ್ಳಿಯ ಮುಗ್ಧ ಮನಸ್ಸುಗಳ ಒಡನಾಟ, ಊರ ಹಬ್ಬ ಹರಿದಿನ ಎಲ್ಲಾ ಒಮ್ಮೆ ಕಣ್ಮುಂದೆ ಬಂದು ಕಣ್ಣಂಚಲ್ಲಿ ನೀರು ತುಂಬಿಸಿತು.  ತಿಳಿಯದಾಗಿದೆ ಆ ನೀರು ಕಣ್ಣೀರೋ ಆನಂದಭಾಷ್ಪವೋ.  

   ಇಪ್ಪತ್ತು ವರ್ಷಗಳಲ್ಲಿ ತುಂಬಾ ಬದಲಾಗಿದೆ ಹಳ್ಳಿಯು ತನ್ನ ಸೊಗಡ ಮರೆತು ಕಾಲಚಕ್ರ  ಕಾಲಚಕ್ರದೊಡನೆ ತಾನು ತಿರುಗಿತ್ತು. ನನ್ನಂತ ಎಷ್ಟೋ ಮಕ್ಕಳಿಗೆ ವಿದ್ಯಾದಾನ ಮಾಡಿ ಬದುಕು ಕಟ್ಟಿಕೊಟ್ಟ ಆ ನನ್ನ ಸರಕಾರಿ ಶಾಲೆ ಮಕ್ಕಳಿಲ್ಲದೆ ಮುಚ್ಚಿಹೋಗಿಎಲ್ಲಾ ಮಕ್ಕಳನ್ನು ಹತ್ತಿರದ ಪಟ್ಟಣದ ಶಾಲೆಗೆ ಹಚ್ಚಿದರಂತೆ , ಹಳೆಯ ಜೀವಗಳೇ ಹೆಚ್ಚಾಗಿ ಕಾಣುವಂತಾಗಿದೆ ಎಂದು ಅಮ್ಮ ಹೇಳುತ್ತಿದ್ದಳು. ಹೆಚ್ಚಿನ ಶಿಕ್ಷಣಕ್ಕಾಗಿಯೋ ಉದ್ಯೋಗ ಅರಸಿಯೋ ನನ್ನ ಹಾಗೆ ಪಟ್ಟಣಗಳಿಗೆ ಸೇರುತ್ತಿದ್ದಾರಂತೆ. ವಿಪರ್ಯಾಸವೇ ಸರಿ ನಮ್ಮ್ ಅವರೊಡನೆ ಬಿಟ್ಟು ನಮ್ಮ ಎಲ್ಲಾ ಸಮಯವೂ ಅಪರಿಚಿತರ ಪರಿಚಯ ಮಾಡಿಕೊಳ್ಳುತ್ತಾ ಅವರಲ್ಲಿ ಒಂದಾಗುವುದರಲ್ಲೆ ಕಳೆದುಹೋಗುತ್ತದೆ.

   ನನ್ನ ಬಾಲ್ಯದ ನೆನಪು ಹಾಗೆ ಕಣ್ಣ್ಮುಂದೆ ಹರಿದಾಡಿತು, ನನ್ನಾ ಪ್ರಾಥಮಿಕ ಪ್ರೌಢಶಿಕ್ಷಣ ಊರಲ್ಲೇ ಮುಗಿಸಿದೆ, ಅಪ್ಪ-ಅಮ್ಮನಿಗೆ ಮಗ ಇಂಜಿನಿಯರ್ ಆಗಬೇಕೆಂಬ ಆಸೆ ಬಹಳ ಇತ್ತು ಓದಿನಲ್ಲಿ ಮುಂದಿದ್ದ ನಾನು ಒಳ್ಳೆಯ ಅಂಕ ಗಳಿಸಿ ಸುಲಭವಾಗಿ ಬೆಂಗಳೂರಿನ ಕಾಲೇಜಿನಲ್ಲಿ ಸೀಟು ಗಿಟ್ಟಿಸಿದೆ. 

  ಈ ದೊಡ್ಡ ನಗರ ಬೆಂಗಳೂರು ನನ್ನಗೆ ಒಂದು ಕನಸಿನ ಲೋಕದಂತಿತ್ತು ಮೊದಲನೆಯ ಬಾರಿಗೆ ಮನೆಯಿಂದ ದೂರ ಇದ್ದು ಹಾಸ್ಟೆಲ್ನಲ್ಲಿ ಇರುವುದು ಸಿಹಿ ಖಾರ ಮಿಶ್ರಿತ ಅನುಭವವಾಗಿತ್ತು, ಒಂದೆಡೆ ಸ್ನೇಹಿತರೊಂದಿಗಿನ ಸಿಹಿ ಅನುಭವ ಮತ್ತೊಂದೆಡೆ ಅಪ್ಪ-ಅಮ್ಮನ ಬೆಚ್ಚಗಿನ ಅಪ್ಪುಗೆಯಿಂದ 

ದೂರ ಇರಬೇಕಾದ ಅನಿವಾರ್ಯತೆ, ಕಾಲಕ್ರಮೇಣ ಇದೇ ಜೀವನದ ಒಂದು ಭಾಗವಾಗಿ ಹೋಯಿತು. ಸ್ನೇಹಿತರೆಲ್ಲ ಒಟ್ಟುಗೂಡಿ ಓದುತ್ತಾ ಆಡುತ್ತಾ ಕಾಲ ಸರಿಯುತ್ತಿತ್ತು, ಪ್ರತಿ ಸೇಮ್ ಒಳ್ಳೆಯ ಅಂಕಗಳನ್ನು ಗಳಿಸುತ್ತಾ ಹೋಗಿದ್ದೆ, ಹಾಗೆ ಕಾಲ ಸರಿಯುತ್ತಾ ಫೈನಲ್ ಸೆಮ್ ಕೂಡ ಬಂದೇಬಿಟ್ಟಿತು, ಕ್ಯಾಂಪಸ್ ಸೆಲೆಕ್ಷನ್ ಎಂಬ ಬೆಂಕಿ ಎಲ್ಲೆಡೆ ಹರಡಿತ್ತು, ಅತಿಬುದ್ದಿವಂತರು ಪ್ರತಿಷ್ಠಿತ ಕಂಪನಿ ಸೇರಲು ಪೈಪೋಟಿ ನಡೆಸಿದ್ದರು, ಹಾಗೆ ಇನ್ನುಳಿದವರು ಹೆಸರಿಗಾದರೂ ಸೆಲೆಕ್ಟ್ ಆಗಲಿ ಎಂದು ಸಿದ್ಧತೆ ನಡೆಸಿದ್ದರು. ಪ್ರತಿ ಸೆಮ್ ನ  ಹಾಗೆ ಇದ್ದಕು ಕೂಡ ಎಲ್ಲಾ ಸ್ನೇಹಿತರು ಒಟ್ಟುಗೂಡಿ ಸಿದ್ಧತೆ ನಡೆಸಿದೆವು, ಈ ಸಮಯ ಒಂದು ಅಗ್ನಿಪರೀಕ್ಷೆಯೇ ಸರಿ, ಎಷ್ಟೋ ಕಂಪನಿಗಳು ಬಂದು ಹೋಗುತ್ತಿತ್ತು ಒಂದು ರೌಂಡ್ ಕ್ಲಿಯರ್ ಆದರೆ ಇನ್ನೊಂದು ಬಾಕಿ ಹೋಗುತ್ತಿತ್ತು ಮನಸ್ಸಿನಲ್ಲಿ ಏರುಪೆರಾಟಾ ಶುರುವಾಗಿ ಹೋಗಿತ್ತು. ನಮ್ಮಲ್ಲಿ ವಿದ್ಯಾರ್ಥಿಗಳ ಪರಿಶ್ರಮಕ್ಕೆ ಪ್ರತಿಫಲವೇ ಕ್ಯಾಂಪಸ್ ಸೆಲೆಕ್ಷನ್ ಎನ್ನುವ ಮನೋಭಾವವನ್ನು ಸೃಷ್ಟಿಸಿದೆ ಇ ಶಿಕ್ಷಣ, ಎಲ್ಲ ಏರುಪೇರುಗಳ ದಾಟಿ ಕೊನೆಯ ಸೆಮಿಸ್ಟರ್ ಮುಗಿಯುವುದರೊಳಗೆ ಒಂದು ಒಳ್ಳೆಯ ಕಂಪನಿಯಲ್ಲಿ ಸೆಲೆಕ್ಟ್ ಆಗೆಬಿಟ್ಟೆ, ವಿಷಯ ತಿಳಿದ ಅಪ್ಪ ಅಮ್ಮನಿಗೆ ಬಹಳ ಖುಷಿಯಾಗಿತ್ತು. ಫೈನಲ್ ಸೆಮಿಸ್ಟರ್ ಮುಗಿದ ಎರಡೇ ವಾರದಲ್ಲಿ ರಿಪೋರ್ಟ್ ಆಗಬೇಕೆಂದು ಮೇಲ್ ಬಂದಿತ್ತು, ಹಾಗೆ ಫೈನಲ್ ಸೆಮಿಸ್ಟರ್ ಎಕ್ಸಾಮ್ ಕೂಡ ಮುಗಿದಿತ್ತು, ಇಷ್ಟು ದಿನ ಎರಡನೇ ಮನೆಯಂತಿದ್ದ ಹಾಸ್ಟೆಲ್ ಬಿಡಲು ಹಾಗೆ ಮನಸೆಂಬ ಖಾಲಿ ಹಾಳೆಯಲ್ಲಿ ಸ್ನೇಹವೆಂಬ ಅಕ್ಷರ ಬರೆದ ಜೊತೆಗಾರರ ಅಗಲುವ ಸಮಯ ಬಂದೇಬಿಟ್ಟಿತು. ಮೊದಮೊದಲು ಅಪರಿಚಿತರೊಡನೆ ಒಂದಾಗಲು ಮನ ಕಣ್ಣೀರು ಹಾಕುತಿತ್ತು ಇಗ ಇದೆ ಜೀವಗಳ ಬಿಟ್ಟುಹೋಗಬೇಕೆಂದು ಮನಕರಗಿ ಕೂಗಲು ಶುರುಮಾಡಿತು,ಊರಿಗೆ ಕರೆದೊಯ್ಯಲು ಬಂದ ಅಪ್ಪ ಅಮ್ಮನ ಜೊತೆ ಭಾರವಾದ ಮನಸ್ಸಿನಿಂದಲೇ ಎಲ್ಲಾ ಸ್ನೇಹಿತರಿಗೂ ವಿದಾಯ ಹೇಳಿ ಗೇಟ್ ದಾಟಿದೆ. 

  ಸಂಜೆ ಅಷ್ಟೊತ್ತಿಗೆ ಊರು ಸೇರಿದೆ, ಮನೆಯಲ್ಲಿ ಅಪ್ಪ ಅಮ್ಮನ ಮಮತೆಯ ಮಡಿಲಲ್ಲಿ ಇಷ್ಟಪಟ್ಟಿದ್ದನ್ನು ತಿಂದು, ಅಮ್ಮನ ಕೈರುಚಿ ಸವೆಯುತ ಮೀಯುತ್ತಿದ್ದ ನನಗೆ ಸಮಯ ಸಾಗಿದ್ದೇ ತಿಳಿಯಲಿಲ್ಲ, ಅಂತೂ ಉದ್ಯೋಗ ಅರಸಿ ಹೋಗುವ ಸಮಯ ಬಂದೇಬಿಟ್ಟಿತು.... ಅಮ್ಮ ಎಲ್ಲಾ ಪ್ಯಾಕ್ ಮಾಡಿ ತಿಂಡಿತಿನಿಸುಗಳ ಡಬ್ಬಗಳನ್ನು ಸಿದ್ಧಮಾಡಿ ಇಟ್ಟಳು, ಮತ್ತೆ ತನ್ನವರ ಬಿಟ್ಟು ಹೋಗಬೇಕಲ್ಲ ಎಂಬ ಸಂಕಟ, ಇಷ್ಟು ದಿನ ಅಪ್ಪ ಅಮ್ಮನ ಮಡಿಲಲ್ಲಿ ಹೊರಳಾಡುತ್ತಿದ್ದ ನನಗೆ ಮತ್ತೆ ಕಾಲದ ಜೊತೆ ತಿರುಗ ಬೇಕಲ್ಲ ಎಂಬ ನೋವು. ಅಪ್ಪ-ಅಮ್ಮ ಕೆಲವು ಸ್ನೇಹಿತರ ಒಳಗೊಂಡು ಬಸ್ಟ್ಯಾಂಡಿಗೆ ಬಂದು ಪುಣೆಯ ಬಸ್ ಹತ್ತಿದೆ, ಅಪ್ಪನಿಗೆ ಎಷ್ಟು ಬೇಸರವಿದ್ದರೂ ಗಂಡು ಜೀವ ಭಾವನೆಯ ಅದುಮಿಟ್ಟು ಕೊಂಡಿತ್ತು, ಅದೇ ಅಮ್ಮನ ಹೆಂಗರಳು ಕೇಳಬೇಕಲ್ಲ ಕಣ್ಣೀರಧಾರೆಯನೇ ಹರಿಸಿತು, ಅಮ್ಮನ ಕಣ್ಣೀರು ನನ್ನ  ಕಣ್ಣಂಚಲ್ಲೂ ನೀರ ತರಿಸಿತ್ತು, ಈ ಭಾರ ಮನಸ್ಸಿನೊಂದಿಗೆ ಪುಣೆಯ ಬಸ್ಸಹತ್ತಿ ಹೊರಟೆ..... 


ಮುಂಜಾನೆಯ ವೇಳೆಗೆ ಬಸ್ ಬಸ್ಟ್ಯಾಂಡ್ ಮುಟ್ಟಿತ್ತು, ಎಲ್ಲಾ ನೋವು ಮರೆತು ನಂತರದ ಓಟಕ್ಕೆ ಮನಸ್ಸು ಸಿದ್ಧತೆ ನಡೆಸಿತ್ತು.

 ಅಲ್ಲಿ ರೂಮ್ ಮಾಡ್ಕೊಂಡಿದ್ದ ನನ್ನ ಸೀನಿಯರ್ ಫ್ರೆಂಡ್ ಗಳಾದ ಸುಚಿತ್ ಮತ್ತು ಸಂಜಯ ಇಬ್ಬರು ಬರುವ ವಿಷಯ ತಿಳಿಸಿದಾಗ ಅಲ್ಲೇ ರೂಮ್ನಲ್ಲಿ ಸ್ವಲ್ಪ ದಿನದ ಮಟ್ಟಿಗೆ ಇರುವ ವ್ಯವಸ್ಥೆ ಮಾಡಿದರು, ಬಸ್ಸ ಇಳಿದ ನಾನು ಆಟೋ ಮಾಡಿ ರೂಮಿನ ಬಳಿ ಹೊರಡಲು ಸಿದ್ಧನಾದೆ, ರೂಮ್ ತಲುಪಿದ ನಂತರ ಒಂದೊಳೆ  ವೆಲ್ಕಮ್ ಮಾಡಿ ರೆಡಿಯಾಗಲು ತಿಳಿಸಿದರು, ರೆಡಿಯಾಗಿ ಬರುವುದರೊಳಗೆ ಕಾಫಿ ಮಾಡಿ ಇಟ್ಟಿದರು, ಅದ ಕುಡಿದು ಆಫೀಸ್ ಹೊರಡಲು ಅಣಿಯಾದೆವು.

ಮೊದಲ ದಿನದ ಆಫೀಸ್ನ ಉತ್ಸಾಹ, ಗೊಂದಲ ಎನ್ನೂ ಹೊಟ್ಟೆಯಲ್ಲಿ ಚಿಟ್ಟೆಯ ಓಡಾಟ ಸೃಷ್ಟಿಸಿತು.ಇವರಿಬ್ಬರೂ ನನಗೆ ಉತ್ಸಾಹ ತುಂಬಿ ತಮ್ಮ ಕೆಲಸಕ್ಕೆ ತೆರಳಿದ್ದರು, ನಾನು ರಿಪೋರ್ಟ್ ಹಾಗೆ ಸೀನಿಯರ್ ಮೀಟ್ ಅಂತ ಬ್ಯುಸಿಯಾದೆ ಮತ್ತೆ ಅದೇ ಹೊಸ ಹೊಸ ಮುಖಗಳ ಪರಿಚಯ ನನ್ನ ಹಾಗೆ ನಗುಮುಖ ಹೊತ್ತು ತಿರುಗುತ್ತಿರುವ ಎಲ್ಲಾ ಹೊಸಬರಲ್ಲಿ ಉತ್ಸಾಹದ ಜೊತೆ ಏನೋ ಹೊಸತನದ ಗೊಂದಲ ಕಾಣುತ್ತಿತ್ತು. ಎಲ್ಲಾ ಬೇಸಿಕ್ ಫಾರ್ಮಾಲಿಟೀಸ್ ಮುಗಿಸಿ ಚಿಕ್ಕ ಇಂಡಕ್ಷನ್ ಪ್ರೋಗ್ರಂ ಆದನಂತರ ರೂಮಿಗೆ ಹೊರಟೆ. ಹಾಗೆ ಎರಡು ತಿಂಗಳ ಕಾಲ ಟ್ರೈನಿಂಗ್ ಎಲ್ಲಾ ಮುಗಿಸಿ ಟೀಂಗೆ ಸೇರಿದೆ, ಅಷ್ಟರಲ್ಲಿ ಕಂಪನಿ ಹಾಗೂ ಊರು ಬಹಳ ಚಿರಪರಿಚಿತ ಗೆಳೆಯರಂತೆ ಆಗಿಬಿಟ್ಟಿದ್ದವು. 

ಕತ್ತೆಯ ಹಾಗೆ ದುಡಿಯುತ್ತಾ ಒಳ್ಳೆಯ ಹೆಸರುಗಳಿಸಿದೆ, ಹಾಗೆ ಒಂದು ವರ್ಷ ಕಳೆದಿದ್ದೇ ಗೊತ್ತಾಗಲಿಲ್ಲ.ಅತ್ತ ಆಗಾಗ ಫಾರಿನ್ ಬ್ರಾಂಚ ಅಮೆರಿಕಾಗೆ ಹೋಗುವುದು ಕಾಮನ್ ಆಗಿಹೋಗಿತ್ತು ಹಾಗೇ ನನಗೆ ಎರಡು ವರ್ಷದ ಮಟ್ಟಿಗೆ ಅಮೆರಿಕ ಬ್ರಾಂಚ್ ಗೆ ವರ್ಗಾಯಿಸಲಾಗಿತ್ತು, ಈ ಸಂದರ್ಭದಲ್ಲಿ ಅಮ್ಮ ಅಪ್ಪ ಹಾಗೂ ಸಂಬಂಧಿಕರು ಸ್ನೇಹಿತರ ಒಳಗೊಂಡು ಬೀಳ್ಕೊಡಲು ಬಂದಿದ್ದರು, ಕೆಲಸ ಹೇಗೂ ರೂಢಿ ಆದಕಾರಣ ಈಗ ಅತ್ಯುತ್ಸಾಹದಲ್ಲಿ ಅಮೆರಿಕಕ್ಕೆ ಹೊರಟೆ ಏರ್ಪೋರ್ಟ್ಗೆ ಇಳಿದ ನನ್ನಗೆ ಕಂಪನಿಯಿಂದಲೇ ಟ್ಯಾಕ್ಸಿ ಕಳಿಸಿದ್ದರು ಹಾಗೆ ಲಕ್ಸುರಿ ರೂಂ ಕೂಡ ಬುಕ್ ಮಾಡಿದರು.

 ಹಾಗೆ ಹೋಟೆಲ್ ನಲ್ಲಿ ಊಟ ಮಾಡಿ ರೂಮ್ ಕಡೆ ಹೊರಟೆ,  ಪುಟ್ಟ ಹಳ್ಳಿಯಿಂದ ದೊಡ್ಡಣ್ಣ ಅಮೇರಿಕಾದವರಿಗೆ ನನ್ ಪಯಣ ಒಂಥರಾ ಕನಸಿನ ಹಾಗಿತ್ತು. ಎಷ್ಟು ಏಳುಬೀಳುಗಳು ಹಾಗೆ ಏನೋ ಒಂತರ ಬೇವು ಬೆಲ್ಲ ಮಿಶ್ರಿತ ಸಿಹಿ ಕಹಿ ಅನುಭವ ಯೋಚಿಸುತ್ತಾ ನಿದ್ದೆಗೆ ಜಾರಿದೆ.

ಹಾಗೆ ಮೂಡಣದಲ್ಲಿ ಸೂರ್ಯ ಉದಯ ಆಗುತ್ತಿದ್ದಂತೆ ನನ್ನ ಆಫೀಸಿಗೆ ಹೊರಡಲು ಸಿದ್ಧನಾದೆ ಆಗಾಗ ಪ್ರಜೆಕ್ಟ್ ವರ್ಕ್ಗೆ ಇಲ್ಲಿ ಹೋಗಿ ಬಂದಿದ್ದರಿಂದ ಚಿರಪರಿಚಿತವಾಗಿತ್ತು.

 ಎರಡು ವರ್ಷ ಅಂತ ಹೋದ ಕೆಲಸ ಹೀಗೆ ವರ್ಷ ವರ್ಷ ಉರುಳಿದವು, ಎರಡು ವರ್ಷದ ನಂತರ ಒಮ್ಮೆ ಮಾತ್ರ ಭಾರತಕ್ಕೆ ಭೇಟಿ ಕೊಟ್ಟು ಬಂದಿದ್ದ ನನಗೆ ಮತ್ತದೇ ಬ್ಯುಸಿ ಲೈಫ್ ಅದೇ ಜೀವನವಾಗಿತ್ತು ಹೋಗಿತ್ತು. ಅದರೇ ಅಪ್ಪ-ಅಮ್ಮನ ಅಮೇರಿಕಾ ಓಡಾಟ ಮಾತ್ರ 10 ವರ್ಷದಲ್ಲಿ ಬಹಳ ಆಗಿತ್ತು.. ಹೇಳೋದ್ ಮರೆತೇ ಎರಡು ವರ್ಷದ ನಂತರ ಊರಿಗೆ ಹೋದಾಗ ಮಂಜು ಕೂಡ ನನ್ನ ಜೊತೆ ಅಮೆರಿಕಕ್ಕೆ ಬಂದಿದ್ದ ಸಾಕಷ್ಟು ದುಡಿಯುತ್ತಿದ್ದ ನನಗೆ ಒಳ್ಳೆಯ ಅಡುಗೆಮನೆಯ ಮಾಡುತ ಮನೆ ನೋಡಿಕೊಂಡು ನನ್ನ ಜೊತೆಗಾರನಾಗಿದ್ದ, ಕೆಲಸ ದುಡಿಮೆ ದುಡ್ಡು ಅಂತ ಅದರಲ್ಲೇ ಖುಷಿಪಡುತ್ತಿದ್ದ ನನಗೆ ಮದುವೆ ಮನೆಯ ಆಸೆಯೂ ಬರಲಿಲ್ಲ ಅಮ್ಮ-ಅಪ್ಪ ಎಷ್ಟೇ ಒತ್ತಾಯ ಮಾಡಿದರು ನನಗೆ ಇದೇ ಜೀವನ ಖುಷಿ ತತ್ತರಿಸಿತ್ತು. ವೀಕೆಂಡ್ ಪಾರ್ಟಿ ಮಸ್ತಿ ದೇಶ ಸುತ್ತುತ್ತಿದೆ. ದುಡ್ಡುನ ಮೋಹವೇ ಹಾಗೆಯೇ? 

ಹೀಗೆ ಯೋಚಿಸುತ್ತಾ ಯೋಚಿಸುತ್ತಾ ಬೆಂಗಳೂರು ಏರ್ಪೋರ್ಟ್ ರಿಚ್ ಆಗ್ಗಿದೆ ಗೊತ್ತಾಗಲಿಲ್ಲ. 

ಹಾಗೆ ಚೆಕ್ಔಟ್ ಮಾಡಿ ಬರುತ್ತಿದ್ದಂತೆ ಖುಷಿ ಮುಖಗಳ ಹೊತ್ತ ನನ್ನ ಬಳಗದ ಹಿoಡು ಕಾಣಿಸಿತು, ಅಪ್ಪ ಅಮ್ಮನ ಆಗಾಗ ನೋಡುತ್ತಿರುವುದರಿಂದ ಅಷ್ಟೇನು ಆಶ್ಚರ್ಯ ಆಗಲಿಲ್ಲ ಆದರೆ ನನ್ನ ಸ್ವಾಗತಿಸಲು ಬಂದ ಅದೆಷ್ಟೋ ಸ್ನೇಹಿತರು ಹಾಗೂ ಬಂಧುಗಳು ಎಷ್ಟು ಬದಲಾದಂತೆ ಎನಿಸಿತು. ಎಲ್ಲರೂ ಸಿಹಿ ಮಾತುಗಳ ಸವಿಯುತ್ತ ಹಾಗೆ ಕಾರ್ ಹತ್ತಿ ಮನೆಕಡೆ ಹೊರಟೆ. 

ಅದೆಷ್ಟೋ ಬದಲಾದಂತೆ ಅನಿಸಿತು, ನೆನಪಿನಂಗಳದಲ್ಲಿ ಅಲೆದಾಟ ಮನಸ್ಸನ್ನು ಭಾರವಾಗಿಸಿತ್ತು.


Rate this content
Log in