Danesh G

Others

2  

Danesh G

Others

ಕೊರೊನ - A day in ಬೆಂಗಳೂರು

ಕೊರೊನ - A day in ಬೆಂಗಳೂರು

3 mins
104


ಚೀನಾ ಮೇಲಿನ ಯಶಸ್ವಿ ದಾಳಿಯ ನಂತರ, ಎಲ್ಲಾ ಕೊರೊನಗಳು ಒಂದೆಡೆ ಗುಂಪು ಸೇರುತ್ತಾರೆ. ಆಗ‌ ಎಲ್ಲರೂ ಒಮ್ಮತದಿಂದ ಭಾರತದ ಮೇಲೆ ದಾಳಿಗೆ ಒಪ್ಪಿಗೆ ಸೂಚಿಸಿತ್ತಾರೆ. ಮುಂದಿನ ಸೂರ್ಯೊದಯದ "ಕಿಂಗ್ ಫಿಶರ್" ವಿಮಾನ ಯಾನಕ್ಕೆ ಸಹಮತ ಸೂಚಿಸಿತ್ತಿರೆ. ಯೋಜನೆಯಂತೆ ಎಲ್ಲಾ ಕೊರೊನಗಳು "ಕಿಂಗ್ ಫಿಶರ್"ನ ಸಹಾಯದಿಂದ‌ ಪ್ರಾತಃ ಕಾಲದ‌ ಸಮಯದಲ್ಲಿ ಬೆಂಗಳೂರಿಗೆ ಬಂದು ತಲುಪುತ್ತಾರೆ. 


ಇಲ್ಲಿಯವರೆಗೆ ಎಲ್ಲ ಯೋಜನೆಯಂತೆ ನಡೆಯುತ್ತಿತ್ತು, ಆದರೆ ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ತುಂಬಾ ಜೊರಾಗಿತ್ತು. ದಾಳಿಗೆ ಒಳಗಾದವರನ್ನು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಇದ‌ ಕಂಡ ಕೊರೊನಗಳು ಬೇರೆ ಯೋಜನೆಗಾಗಿ ಮತ್ತೊಂದೆಡೆ ಸೇರಿದರು. ಎಲ್ಲ ಕೊರೊನಗಳು ಸೆಕ್ಯೂರಿಟಿಯಲ್ಲಿ ಏನಾದರೂ ದೋಷ ಇದೆಯಾ ‌ಎಂಬ ಹುಡುಗಾಟದಲ್ಲಿ‌ ತೊಡಗಿದರು. ಆಗ ಅವರ‌ ಕಣ್ಣಿಗೆ ಬಿದ್ದವರು ಕೊರೊನದ ದಾಳಿ‌ಯಾಗಿಲ್ಲ ಎಂದು ದೃಢಪಟ್ಟು ಹೊರ ನಡೆಯುತ್ತಿರುವ ಪ್ರಜೆಗಳು. ಅಲ್ಲಿಯೂ ಸಹ ಎಲ್ಲರು ಮಾಸ್ಕ್ ಧರಿಸಿದ್ದರು ಆಗಾಗಿ ಅಲ್ಲಿಯೂ ಸಹ ತಮ್ಮ ದಾಳಿ ಕಷ್ಟಸಾಧ್ಯ ಎಂದು ಅರಿತರು. ಆಗೆ ಹೊರ ನಡೆಯುತ್ತಿರುವ ಪ್ರಜೆಗಳಲ್ಲಿ ನಮ್ಮ ಕಥಾನಾಯಕನು ಒಬ್ಬ. ಇವನ ನೋಡಿದ ತಕ್ಷಣ ಎಲ್ಲಾ ಕೊರೊನಗಳಲ್ಲಿ ಇನ್ನಿಲ್ಲದ ಸಂತಸ. ನಮ್ಮ ನಾಯಕನ ತಲೆ ಮೇಲೆ "ಹೆಡ್ ಫೋನ್" ಇತ್ತೆ ವಿನಃ ಮಾಸ್ಕ್ ಇರಲಿಲ್ಲ. ಎಂದಿನಂತೆ ದಾಳಿಗೆ ಒಳಗಾದ ವ್ಯಕ್ತಿಯ ಸೀನಿನ ಮೂಲಕ ನಮ್ಮ ನಾಯಕನ ದೇಹದಲ್ಲಿ ಪ್ರವೇಶ ಮಾಡುತ್ತದೆ. ನಾಯಕನ ಮೂಲಕ ನಮ್ಮ ಬೆಂಗಳೂರಿಗೆ ಕೊರೊನದ ಪ್ರವೇಶವಾಗುತ್ತದೆ.


ಮೊದಲೇ ಯೋಚಿಸಿದಂತೆ ಬೆಂಗಳೂರಿನ ಎಲ್ಲಾ ಭಾಗಗಳಲ್ಲಿ ಒಂದೇ ಸಮನೆ ದಾಳಿಗೆ ತಯಾರಾಗುತ್ತಾರೆ. ಬಸ್ನಲ್ಲಿ ಬೇರೆ ಬೇರೆ ಭಾಗದ ಜನರ ಮೇಲೆ ಯಶಸ್ವಿ ದಾಳಿಯಾಗುತ್ತದೆ. ಕೆಲವರು ವೈಟ್ ಫೀಲ್ಡ್, ಕೆಲವರು ಎಲೆಕ್ಟ್ರಾನಿಕ್ ಸಿಟಿ, ಕೆಲವರು ಕೆಂಗೇರಿ ಹಾಗೆ ಎಲ್ಲಾ ಭಾಗಗಳಲ್ಲಿ ದಾಳಿಗೆ ಹೊರಡುತ್ತಾರೆ.


ಸಂಜೆ ಹೊತ್ತಿಗೆ ಸರಿಯಾಗಿ ಎಲ್ಲಾ ಕೊರೊನಗಳು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹಿಂದಿರುಗತ್ತವೆ. ಎಲ್ಲಾ ಕೊರೊನಗಳು ತಮ್ಮ ತಮ್ಮ ಕೆಲಸದ ವಿವರಣೆ ನೀಡಲು ಶುರು ಮಾಡುತ್ತಾರೆ.

ಮೊದಲನೇ ಗುಂಪು - ನಾವು ಸಿಲ್ಕ್ ಬೋರ್ಡ್ ಅಲ್ಲಿ ದಾಳಿಗೆ ಹೋಗಿದ್ದೆವು. ಅಲ್ಲಿ ಯಶಸ್ವಿಯಾಗಿ ದಾಳಿಯು ಸಹ ಮಾಡಿದೆವು. ಆದರೆ ದುರದೃಷ್ಟವಶಾತ್ ಟ್ರಾಫಿಕ್ ನಲ್ಲಿ ಸಿಕ್ಕ ಜನರು ಮುಂದೆನೆ ಹೋಗ್ಲಿಲ್ಲ. ಅಲ್ಲಿಯೇ ಮದುವೆ ಆಗಿ ಮಕ್ಕಳು ಕೂಡ ಮಾಡುವ ಯೋಜನೆ ಮಾಡಿರುವ ಹಾಗೆ ಕಾಣುತ್ತಿತ್ತು. ಆದರೆ ಬಿಸಿಲಿನ ತಾಪಕ್ಕೆ ನಮ್ಮವರೇ ಬಹಳಷ್ಟು ಜನ ಪ್ರಾಣ ತ್ಯಾಗ ಮಾಡಬೇಕಾಯಿತು. ಆದ್ದರಿಂದ ನಾವು ಪ್ರಾಣ ಭಯದಿಂದ ಹಿಂದಿರುಗಬೇಕಾಗಿ ಬಂತು. ನಮ್ಮದು ಸಹ ಇದೇ ಕಥೆ ಎಂದು ಹೆಬ್ಬಾಳ, ಎಮ್ ಜಿ ರೋಡ್, ಬನ್ನೆರಗಟ್ಟ ರೋಡ್, ಮಹದೆವಪುರ, ಮಾರತಹಳ್ಳಿ ಕಡೆ ಹೊದ ಗುಂಪುಗಳು ಒಕ್ಕೋರಲಿನಿಂದ ಕೂಗಿ ಹೇಳಿದವು. ಇನ್ನೊಂದು ಗುಂಪು - ನಾವು ಕೆಂಗೇರಿ ಕಡೆ ಹೋಗಿದ್ದೆವು. ಅಲ್ಲಿ ಮೋರಿಯಿಂದ ಯಾವುದೋ ವಾಸನೆ ಬರುತ್ತಿತ್ತು, ಆ ವಾಸನೆಗೆ ನಮ್ಮ ಉಸಿರಾಟ ಬಿಗಿಯಾದ ಅನುಭವ ಆಯಿತು. ಹಾಗಾಗಿ ನಾವು ಸಹ ಹಿಂದಿರುಗಬೇಕಾಗಿ ಬಂತು. ಇನ್ನೂ ಕೆಲವು ಗುಂಪುಗಳು ನಮಗೂ ಸಹ ಈ ಅನುಭವ ಆಯಿತು ಆದರೆ ಮೋರಿಯಿಂದಲ್ಲ, ರಸ್ತೆಯಿಂದ. ವೈಟ್ ಫೀಲ್ಡ್ ನಲ್ಲಿ ಯಾರು ಎಲ್ಲಿ ಇರುವವರೆಂದು ಗುರುತೇ ಹಿಡಿಯದಾಗಿತ್ತು ಎಂದು ವಿವರಣೆ ನೀಡಿದರು. ಇನ್ನೊಂದು ಗುಂಪು - ನಾವು ಒಬ್ಬನ ದೇಹದಲ್ಲಿ ಅಡಗಿ ಕೊಂಡಿದ್ದೆವು. ಆ ವ್ಯಕ್ತಿಯ ದೇಹದಲ್ಲಿ ಇರುವವರೆಗೂ‌ ನಮಗೆ ಬಿಸಿ ಶಾಖದ ಅನುಭವ ಆಯಿತು. ಹಾಗೆಯೇ ‌ಆ‌ ವ್ಯಕ್ತಿಯ ‌ಹೊಟ್ಟೆ ಭಾಗ ಸುಟ್ಟಿರುವ ಹಾಗೆ ಭಾಸವಾಯಿತು. ಜೀವದ ಭಯದಿಂದ ‌ಹಿಂದಿರಗ ಬೇಕಾಗಿ ಬಂತು ಎಂದು ತಮ್ಮ ಅಳಲನ್ನು ತೋಡಿಕೊಂಡವು. ಇನ್ನೊಂದು ಗುಂಪು‌ - ನಮಗೆ ವಿಚಿತ್ರ ಅನುಭವ ಆಯಿತು. ಅಲ್ಲಿ ಇಬ್ಬರು ಯುವಕರು ಬಿಸಿಲಿನ ತಾಪಕ್ಕೆ ಬೆಸತ್ತು ಯಾವುದಾದರು ಪಾನೀಯ ಕುಡಿಯುವ ಬಗ್ಗೆ ಮಾತನಾಡಿ ಕೊಳ್ಳುತ್ತಿದ್ದರು. ಇದ‌ ಕಂಡ ನಾವು ಬಾಯಿ ಯಲ್ಲಿ ಲಡ್ಡು ಬಿದ್ದ ಹಾಗೆ ಅವರ ದೇಹದಲ್ಲಿ‌ ಹಾರಿ ಬಿಟ್ಟೆವು. ಆದರೆ ಈ ಹುಚ್ಚು ಮಂಗ್ಯಾನನ್ ಮಕ್ಕಳು ಕುಡಿದಿದ್ದು ತಂಪು ಪಾನೀಯವಲ್ಲ, ಬಿಸಿ ಪಾನೀಯ; ಅದರ ಹೆಸರು ಚಹಾ ಎಂದು ಗೊಳಿಟ್ಟವು.


ಎಲ್ಲಾ ಕೊರೊನಗಳು ಏನು ಮಾಡುವುದು ಎಂದು ತೋಚದಾಗಿ ದೇವರ ಮೋರೆ ಹೋದರು. ಆಗ ಕೊರೊನಗಳ ದೇವರಾದ "ಶ್ರೀ ರಂಗ ಕೊರೊನ" ಪ್ರತ್ಯಕ್ಷವಾಗಿ, ಕರೆಗೆ ಕಾರಣ ಏನೆಂದು ಕೇಳುತ್ತದೆ. ಆಗ ಕೊರೊನಗಳು ನಡೆದ ಸಂಗತಿಗಳನ್ನು ಚಾಚೂ ತಪ್ಪದೆ ಹೇಳುತ್ತಾರೆ. ಈ ಊರಿನ ಜನರು ನಮ್ಮನ್ನು ಎದುರಿಸಲು ಸನ್ನದ್ಧರಾಗಿದ್ದಾರೆ ಎಂದು ದುಃಖದಿಂದ ತಮ್ಮ ಅಳಲನ್ನು ತೋಡಿಕೊಳ್ಳುತ್ತವೆ. ಇದನ್ನ ಕೇಳಿದ ದೇವರು ಮುಗುಳು ನಗುತ್ತಾರೆ. ಇದು ನಮಗಾಗಿ ಮಾಡಿದ ತಂತ್ರವಲ್ಲ, ಅವರು ಅವರಿಗಾಗಿಯೇ ಮಾಡಿರುವ ಸಾವಿನ ಹಾದಿ. ಇಲ್ಲಿ ಬದುಕಿಗೆ ಯೋಗ್ಯವಾದ ನೀರು, ಗಾಳಿ ಹಾಗೂ ಮನಸ್ಸು; ಶುದ್ಧ ವಾಗದಷ್ಟು ಕಲುಷಿತ ಗೊಂಡಿವೆ. ಹಾಗೆ ಹೂಟ್ವೆ ಸುಡುವ ಬಿಸಿಗೆ ಕಾರಣ ಇಲ್ಲಿಯ ಜನ ನೀರಿಗಿಂತ ಜಾಸ್ತಿ ಎಣ್ಣೆ ಕುಡಿಯುತ್ತಾರೆ. ಇನ್ನೊಂದು ಮುಖ್ಯವಾದ ವಿಚಾರ ಇಲ್ಲಿಯ ಜನರು ಯಾವಾಗಲೂ "ಹೀಟ್"ನಲ್ಲಿ ಇರುತ್ತಾರೆ ಸ್ವಲ್ಪ ದೂರವಿರುವುದು ಉತ್ತಮ. ಖಂಡಿತವಾಗಿಯೂ ಈ ಜಾಗ ನಮಗೆ ಹಿತಕರವಲ್ಲ ಎಂದು ಹೇಳುತ್ತಾ ದೇವರು ಮಾಯವಾಗುತ್ತದೆ. ಇದನ್ನ ಕೇಳಿದ ಉಳಿದ ಕೊರೂನಗಳು, ಜೀವ ಭಯಕ್ಕೆ ಬಂದ ದಾರಿಗೆ ಸುಂಕ ವಿಲ್ಲವೆಂದು ಬೆಂಗಳೂರಿನಿಂದ ಕಾಲು ಕೀಳುತ್ತವೆ.


Rate this content
Log in

More kannada story from Danesh G