ಎಚ್ಚರ ಪೋಷಕರೇ
ಎಚ್ಚರ ಪೋಷಕರೇ


ಚಿಕ್ಕ ಮಕ್ಕಳನ್ನ ಕರ್ಕೊಂಡು ರಸ್ತೆಗೆ ಬರ್ತೀರಾ..ಸರಿ ಮೊಬೈಲ್ ನ ಮನೆಲಿ ಬಿಟ್ಟು ಬನ್ನಿ ,
ಇಲ್ಲಾ ಮಕ್ಕಳ ಒಂದು ಕೈಯನ್ನು ಬಿಡದಂತೆ ಹಿಡಿಯಿರಿ.
ಮಕ್ಕಳ ಬಿಟ್ಟು ಮೊಬೈಲ್ ನಲ್ಲಿ ಮುಳುಗಿರ್ತೀರಲ್ಲ
ನಿಮಗೆ ಏನಂತ ಬೈಯಬೇಕೋ ಗೊತ್ತಾಗ್ತಿಲ್ಲ....
ಏನಾದ್ರೂ ಹೆಚ್ಚು ಕಮ್ಮಿ ಆದರೆ ಬೈಕು ಕಾರು ಓಡ್ಸೋರನ್ನೇ ಹಿಡ್ಕೊಂಡು ಹಿಗ್ಗಾಮುಗ್ಗಾ ತದ್ಕೋದು..
ಪ್ರತ್ಯಕ್ಷದರ್ಶಿಗಳು ಇಲ್ಲಾಂದ್ರೆ ವಾಹನ ಚಾಲಕರ ಕಥೆ ಅಲ್ಲಿಗೆ ಮುಗಿದಂಗೆ.
ಇಂತಹ ಒಂದು ಸನ್ನಿವೇಶವನ್ನು ನಿನ್ನೆ ಎದುರಿಸಿದೆ. ನಮ್ಮ ಬೈಕ್ 10-20Kmh ಸ್ಪೀಡ್ ನಲ್ಲಿತ್ತು ಅಷ್ಟೇ. ಒಂದು ಕುಟುಂಬ ರಸ್ತೆ ಬದಿಯಲ್ಲಿ ನಿಂತಿದ್ದರು ಜೊತೆಗೆ ಒಂದು ಚಿಕ್ಕ ಹೆಣ್ಣು ಮಗು 2-3 ವರ್ಷ ವಯಸ್ಸು ನಮ್ಮ ಬೈಕ್ ಅವರ ಹತ್ತಿರ ಬರುತ್ತಾ ಇರುವಾಗ ಇದ್ದಕ್ಕಿದ್ದಂತೆ ಆ ಮಹಾ ತಾಯಿ ಮಗುವಿನ ಕೈಬಿಟ್ಟು ಮೊಬೈಲ್ ನಲ್ಲಿ ಏನೋ ನೋಡ್ತಿದ್ರು. ಅದನ್ನು ಗಮನಿಸಿದ ನಾನು ಬೈಕ್ ವೇಗವನ್ನು ಇನ್ನೂ ಕಡಿಮೆ ಮಾಡಿದೆ. ಮಗುವಿನ ಪರಿಚಿತರು ರಸ್ತೆಯ ಇನ್ನೊಂದು ಕಡೆ ಮಗಿವಿಗೆ ಕಂಡಿದ್ದರಿಂದ ಅದು ಸಹಜವಾಗಿ ರಸ್ತೆಯನ್ನು ವೇಗವಾಗಿ ದ
ಾಟಲು ಓಡಿಲು ಶುರುಮಾಡಿತು. ಸದ್ಯ ನಾನು ಬ್ರೇಕ್ ಹಾಕಿದ ಕೂಡಲೇ ಆ ಮಗು ಬಂದು ನನ್ನ ಕಾಲಿಗೆ ತಾಕಿ ರಸ್ತೆಗೆ ಬಿದ್ದಿತು. ಕೂಡಲೇ ಅವರ ಕುಟುಂಬದವರಿಗೆ ಅವರ ತಪ್ಪು ಅರಿವಾಗಿತ್ತು. ಅಲ್ಲೇನು ಅಹಿತಕರ ವಾತಾವರಣ ಸೃಷ್ಠಿಯಾಗಲಿಲ್ಲ. ಒಂದೆರಡು ನಿಮಿಷದ ನಂತರ ಸ್ಥಳಕ್ಕೆ ಬಂದ ಆ ಮಗುವಿನ ಕಡೆಯ ಒಬ್ಬ ತಾಯಿ ಅಲ್ಲ ಕಣ್ಣಪ್ಪ ಬೈಕ್ ನ ನಿಧಾನವಾಗಿ ಓಡ್ಸಕ್ಕಾಗಲ್ವಾ ಮಕ್ಕಳು ಮರಿ ಓಡಾಡ್ತಿರ್ತಾರೆ ಅಂದ್ರು. ಅವಾಗ ಅಲ್ಲೇ ಮಗುವಿನ ಬಳಿ ನಿಂತಿದ್ದ ವ್ಯಕ್ತಿ ಬಂದು ಇಲ್ಲಾ ಅವರು ನಿಧಾನವಾಗಿ ಬಂದ್ರು ಮಗು ರಸ್ತೆ ದಾಟಲು ಓಡ್ತು ಅಂದ್ರು. ನಮಗೂ ಭಯ ಆಗುತ್ತೆ ತಪ್ಪೇ ಮಾಡದ ಮಕ್ಕಳ ಕೈಗೋ ಕಾಲಿಗೋ ಪೆಟ್ಟು ಬಿದ್ದಾಗ. ನಾವು ಬಿದ್ದರೆ ತಡೆದುಕೊಳ್ಳುವ ಶಕ್ತಿ ಇದೆ, ಇನ್ನೂ ಮೂಳೆ ಬಲಿಯದ ಮಕ್ಕಳಿಗೆ ಏನಾದರೂ ಆದರೆ ನಮಗೂ ಮನಸ್ಸಲ್ಲಿ ಒಂದು ಸಣ್ಣ ನೋವು ಕಾಡ್ತಿರುತ್ತೆ. ಅಯ್ಯೋ ನಮ್ಮಿಂದ ಮಗುವಿಗೆ ಈಗಾಯಿತು ಅಂತ. ಮಕ್ಕಳ ಮೇಲೆ ಎರಡಲ್ಲಾ ಇನ್ನೆರಡು ಕಣ್ಣಿಟ್ಟರೂ ಸಾಲದು.
ಎಚ್ಚರ ಪೋಷಕರೇ ಎಚ್ಚರ ನಿಮ್ಮ ಸಣ್ಣ ನಿರ್ಲಕ್ಷ್ಯ ಮಕ್ಕಳ ಜೀವಕ್ಕೆ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾದಿತು.