ತಪಸ್ಸು
ತಪಸ್ಸು




ನಾನು ಶಬರಿಯಲ್ಲ,
ಪ್ರತಿದಿನ ನಿನಗಾಗಿ ಕಾಯಲು..
ನಾನು ಅಹಲ್ಯೆಯಲ್ಲ,
ಪ್ರತಿದಿನ ನಿನಗಾಗಿ ಎದುರುನೋಡಲು..
ನಾನು ರಾಧೆಯಲ್ಲ,
ಪ್ರತಿದಿನ ನಿನಗಾಗಿ ಪರಿತಪಿಸಲು..
ಆದರೆ ನಾನು
ಶಬರಿಗೂ ಮೀರಿ ಕಾಯುವೆ
ಅಹಲ್ಯೆಗೂ ಮೀರಿ ಯಾತನೆ ಪಡುವೆ
ರಾಧೆಗೂ ಮೀರಿ ವಿರಹಿಯಾಗುವೆ...
ಯಾಕೆ ಗೊತ್ತೆ?
ನಿನಗಾಗಿ ತಪಿಸುವೆ
ಶಿಲೆಯಾಗಿ ಕಾಯುವೆ
ಮೌನಿಯಾಗಿಬಿಡುವೆ