ಓ ಪ್ರೀಯೆ........
ಓ ಪ್ರೀಯೆ........

1 min

11.3K
ಓಪ್ರಿಯೆ ಓ ಪ್ರಿಯೆ ನೀನಲ್ಲಿ ನಾನಿಲ್ಲಿ
ಹೇಗೆ ಹೇಳಲಿ ನನ್ನ ವ್ಯಥೆಯ
ಹೇಗೆ ಕೇಳಲಿ ನಿನ್ನ ಕತೆಯ
ಮನದ ಮನೆಯಲ್ಲಿ ಹಲವು ನೆನಪು
ನಿನ್ನ ಧ್ವನಿಯು ಕೇಳಲು ಇಂಪು
ಕಿವಿಗೆ ಕಾತುರ ನಿನ್ನ ಕಂಪನ
ಬಯಸಿದೆ ಮನವು ಕಳೆದ ಅನುಭವ
ಕಣ್ಣಿಗೆ ಕಾತುರ ನಿನ್ನ ಅಂದವ
ಕೈಗಳು ಕಾಯ್ದಿವೆ ನಿನ್ನ ಸ್ಪರ್ಶವ
ನಾಳೆಯ ನಂಬಿಕೆ ನನ್ನ ಮನದಲಿ
ಬೇಡದ ಯೋಚನೆ ಇಲ್ಲ ಉಚಿತ
ನಿನ್ನನು ಸೇರುವೆ ಇದುವೇ ಖಚಿತ
ಓಪ್ರಿಯೆ ಓ ಪ್ರಿಯೆ ನೀನಲ್ಲಿ ನಾನಿಲ್ಲಿ
ಹೇಗೆ ಹೇಳಲಿ ನನ್ನ ವ್ಯಥೆಯ
ಹೇಗೆ ಕೇಳಲಿ ನಿನ್ನ ಕತೆಯ