ಓ ನನ್ನ ಪ್ರಕೃತಿ
ಓ ನನ್ನ ಪ್ರಕೃತಿ

1 min

11.7K
ಓ ಪ್ರಕೃತಿಯೇ ಓ ಪರಿಸರವೇ ನಿನ್ನ ಸೆರುವಾಸೆ
ನಿನ್ನ ಮಡಿಲಲಿ ನಾ ಮಗುವಾಗುವಾಸೆ
ಹೂವಿನ ಮಕರಂದಕೆ ಬಲಿಯಾಗುವ ದುಂಬಿಯವಾಗಿ
ಹೂಗಳ ಸಾಲಿನಲ್ಲಿ ನಾ ಎದ್ದು ಕಾಣುವ ಆಸೆ
ಬಿಳುವ ಹನಿಮಳೆಯಲ್ಲಿ ತೊಯ್ಯುವ ಎಲೆಯಾಗಿ
ಸೂರ್ಯನಿಗೂ ಚಂದ್ರನಿಗೂ ಸರಿಸಾಟಿಯಾಗುವಾಸೆ
ಓ ಪ್ರಕೃತಿಯೇ ಓ ಪರಿಸರವೇ ನಿನ್ನ ಸೆರುವಾಸೆ
ನಿನ್ನ ಮಡಿಲಲಿ ನಾ ಮಗುವಾಗುವಾಸೆ
ಹರಡಿದ ರೆಂಬೆಗಳ ನೆರಳಲ್ಲಿ ಹಾಯಾಗಿ ಮಲಗುವ
ಮರಗಳ ಮೇಲೆ ಕುಣಿದಾಡುವ ಅಳಿಲಿನಂತಾಗುವಾಸೆ
ಓ ಪ್ರಕೃತಿಯೇ ನೀನಾಗರಿಲ್ಲಿ ಸರಿಸಾಟಿ
ಎಂದೆಂದಿಗೂ ನಿನ್ನ ಮಡಿಲಿನಲ್ಲಿ ಮಗುವಾಗುವಾಸೆ