Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Vani Shetty

Children Stories Inspirational Others

3  

Vani Shetty

Children Stories Inspirational Others

ಮರೆತೆನೆಂದರೂ ಮರೆಯಲಿ ಹ್ಯಾಂಗ…

ಮರೆತೆನೆಂದರೂ ಮರೆಯಲಿ ಹ್ಯಾಂಗ…

1 min
203


ಶಿಕ್ಷಕರ ದಿನಾಚರಣೆ ಬಂತೆಂದರೆ ಸಾಕು ಸಾಲು ಸಾಲು ನೆನೆಪುಗಳು ಮನದಂಗಳದಲ್ಲಿ ಸದ್ದು ಮಾಡಲು ಶುರುಮಾಡುತ್ತದೆ. ಆ ಬಾಲ್ಯ, ಆ ಶಾಲೆ, ಅಲ್ಲಿಯ ಮೇಷ್ಟ್ರು ಕಣ್ಮುಂದೆ ಸರಿದು ಹೋದಂತೆ ಕಣ್ಣಂಚು ಕೂಡ ತೇವವಾಗುತ್ತದೆ. ಮನದ ಪುಟದಲ್ಲಿ ಮೂಡಿದ ಒಂದಷ್ಟು ನೆನಪುಗಳನ್ನು ಇಲ್ಲಿ ಅಕ್ಷರರೂಪ ಪಡೆದಿವೆ.


"ಸಾಹಿತಿಯೊಬ್ಬ ಅಧ್ಯಾಪಕ ಆಗೋದು ಕಬ್ಬು ತಿನ್ನಲು ಕೂಲಿ ಕೊಟ್ಟಂತೆ (ತೀನಂಶ್ರೀ)"

ಶಾಲೆ ಅಂದ್ರೆ ಜಾಸ್ತಿ ನೆನಪಾಗೋ ಆ ದಿನಗಳು... 


ಡೆಸ್ಕ್ ತುಂಬಾ ಲಮಂಗಳ,ಚಂದಾಮಾಮ,ಗಿಳಿವಿಂಡು,ಚಿತ್ರಕಥಾ,ಬಾಲಮಿತ್ರ! 

ಕ್ಲಾಸಲ್ಲಿ ಜಾಸ್ತಿ ಮಾತಾಡೋರೆ ಲೀಡರ್ ,ಸ್ಥಳ ಬಿಟ್ಟವರು, ನಕ್ಕಿದ್ದು (ಎರಡನೇ ಸಲ)... ಜಗಳವಾಡಿದವರು (ಹುಡುಗರು ಮಾತ್ರ )!!

ಪಕ್ಕದಲ್ಲಿರೋರಿಗೆ ಹೊಟ್ಟೆನೋವು, ತಲೆನೋವು ಬಂದ್ರೆ ನಾವೇ ಮನೆಗೆ ಬಿಟ್ಟು ಬರೋ ತವಕ...

ಮಾಷ್ಟರ್ ಹೊಡೆದ್ರೂ, ಕಿವಿ ಚಿವುಟಿದರೂ ಆ ನೋವು, ಅವಮಾನ ಪೀಟಿ ಕ್ಲಾಸ್ ಬೆಲ್ ಆಗೋ ತನಕ....

ಅಪ್ಪಿ ತಪ್ಪಿ ಯಾರಾದ್ರೂ ಸರ್ ಆವತ್ತು ಶಾಲೆಗೇ ಬರದಿದ್ರೆ ಅಂದಿನ ಆ ಖುಷಿ ಕೇಳಬೇಕಾ ....

ದೊಡ್ದೊರಾಗೋ ತನಕಾನೂ ಅದೇ ಮನಸ್ಥಿತಿ,- " ಸಿಕ್ಕ ಸಿಕ್ಕಲ್ಲಿ ಸಿಕ್ಕಸಿಕ್ಕವರ ಶಿಕ್ಷಿಸುವವನೇ ಶಿಕ್ಷಕ "


ಅವರೆಲ್ಲ ಕಡೆದ ಶಿಲ್ಪಗಳು ನಾವು..ಮನದಂಗಳದಲ್ಲಿ ಸರಿದುಹೋದ ಎಲ್ಲ ಟೀಚರ್ಸ್ ಗೂ "happy teachers day" 

 ಎಲ್ಲೋ ಅವರಿಗೇ ಗೊತ್ತಿಲ್ಲದೇ ಕಡೆದ ಶಿಲ್ಪಗಳು ನಾವು..ನಾವು ಬೆಳೆದು ಇನ್ಯಾವುದೋ ತಿರುವು ಪಾರಾಗಿ ಎತ್ತರಕ್ಕೇರಿದಂತೆಲ್ಲ ಪ್ರೈಮರಿ ಶಾಲೆಯನ್ನು ನೆನಪಿನ ಪುಟದೊಳಗೆ ಇಟ್ಟು ಮುಂದೆ ಸಾಗ್ತಾ ಇರ್ತೀವಿ..

ಆ ಗುರುಗಳು ಮಾತ್ರ ಇನ್ಯಾವುದೋ ಶಿಲ್ಪವನ್ನು ಕೆತ್ತುತ್ತಾ ಅದೇ ಸಾಮಾನ್ಯ ಬದುಕಲ್ಲೇ ಮುಂದುವರಿತಿರ್ತಾರೆ..

ಎಲ್ಲೆಲ್ಲೋ ಕಳೆದುಹೋದ ಎಲ್ಲಾ ಮಾಷ್ಟ್ರು, ಟೀಚರ್ಸು ನೆನಪಿನಂಗಳದಲ್ಲಿ ಇನ್ನೊಮ್ಮೆ ಸರಿದುಹೋದರು.


Rate this content
Log in