ಹೃದಯದ ಮೇಳ...
ಹೃದಯದ ಮೇಳ...
1 min
11.7K
ಬಣ್ಣದ ಕಣ್ಣಲಿ ರಂಗಿನ ಹೊದಿಕೆಯು ಬೀಳಲು...
ಹೂವಿನ ಘಮಲಿಗೂ ಮತ್ತೇರುವ ಅಮಲು...
ಚುಕ್ಕಿಗಳಂತ್ನಲಿಯಲು ಬಾನಿನ ಚಪ್ಪರ...
ಹಾರುತ ಬರುವ ಚಿಟ್ಟೆಗೂ ಘಮದೊಲವು ತರ ತರ...!!
ಹೂವಿನ ಎಸಳಿನ ಅಂದಕೆ ಮುತ್ತೇರುವ ಬಯಕೆ...
ಸನ್ನೆಯ ತವಕಕೆ ನಾಚುತ ಬರುವ ಚಿಟ್ಟೆಯ ಲಯಕೆ...
ಬಣ್ಣಗಳ್ಮಿಂಚಿ ಪಳ ಪಳ...
ತಳ ತಳವಿಲ್ಲಿ ಹೃದಯದ ಮೇಳ...
ಬಣ್ಣದ ಕಣ್ಣಿನ ಒಲವಿನ ಚುಂಬನ...
ಒಳಗೊಳಗಿನ ಮೌನದ ಕವಿತೆಗೆ ಸ್ಪಂದನ....!!!