ಅರ್ತಿಯದ ರಕ್ಷಣೆ
ಅರ್ತಿಯದ ರಕ್ಷಣೆ
ಆಗ ಹದಿಹರೆಯದ ವಯಸ್ಸು ಅವರಿಬ್ಬರದು, ಪ್ರಾಥಮಿಕ ಶಿಕ್ಷಣದಲ್ಲಿ ಪ್ರಥಮವಾಗಿ ಮೂಡಿದ ಆಕರ್ಷಣೆ, ಅವಳ ನಯನವೇ ಅವನಿಗಾಯಿತು ಘರ್ಷಣೆ , ಕಾಲ ಉರುಳಿದರೂ ನಿಲ್ಲದ ಪರಿಶುದ್ದ ಭಾವನೆ, ಅದು ಪ್ರೀತಿ ಎಂದು ತಿಳಿಯಲು ಪಂಚವಾರ್ಷಿಕವೇ ಬೇಕಾಯಿತು ಅವರಿಬ್ಬರಿಗೆ, ಪ್ರೀತಿ ಉಳಿಸಲು ಮುಳ್ಳಿನ ರಾಶಿಮೇಲೆ ನಡೆದರೂ ಇಬ್ಬರು ಜೊತೆಯಲಿ, ಅವರಿಬ್ಬರ ನಿಷ್ಕಲ್ಮಶ ಪ್ರೀತಿ ನೋವನ್ನೆ ತಿಳಿಯದಂತೆ ಮಾಡಿತು ಅವರಿಗೆ, ಅವನ ಕೆಲಸದಲ್ಲಿ ಇವಳು ಸ್ನೇಹಿತೆಯಾಗಿ ಪ್ರೇರೇಪಿಸಿ ಅವನ ಪಾಲಿನ ಸಂಸ್ಕೃತಿಯ ತರುಣಿಯಾಗಿ ಮೆರೆದಳವಳು ... ಎಂದು ಅವನನ್ನು ಬಿಟ್ಟು ಕೊಡದ ಅವಳು , ಎಲ್ಲು ಬೀಳದಂತೆ ಅವಳನ್ನು ನೋಡಿಕೊಂಡ ಅವನು... ಸಾಗಿತು ಅವರ ಪ್ರೀತಿಯ ಪಾಠ ಅಮ್ಮನಾಷಿರ್ವಾದದ ಮಂದಿರದಲ್ಲಿ ಈಗ ಓಡುತ್ತಿದೆ ಅವರ ಪ್ರೇಮದ ಬಂಡಿ ನೆಮ್ಮದಿಯಾಗಿ.. ಪಸರಿಸಲಿ ಚಂದನದ ಹಾಗೆ ಅವರ ಪ್ರೇಮದ ಕಾದಂಬರಿ ,ಅವರ ಪ್ರೀತಿ ಚಿನ್ನದೊಂದು ಅಂಬಾರಿ, ಅವರ ದೇವತೆಗಳಾದ ತಂದೆ ತಾಯಿಯ ಆಶಿರ್ವಾದವೇ ಅವರ ಒಲವಿಗೆ ಸಿಕ್ಕೀತು ಕೊನೆಗೂ ಉಡುಗೊರೆಯಾಗಿ, ಕಾಣದ ಶಕ್ತಿ ಜೊತೆ ಕಾಣಿಸುವ ಮನುಜನೆಂಬ ಶಕ್ತಿಯ ಆಶಿರ್ವಾದವು ಇರಲಿ ಇವರಿಬ್ಬರ ಮೇಲೆ....... -Preethika Naik
