ನಮ್ಮ ಹೃದಯ ನಮ್ಮ ಕಣ್ಣುಗಳಿಗೆ ಕಾಣುವುದಿಲ್ಲ ಆದ್ರೆ ಅದರ ಬಡಿತ ಕಿವಿಗಳಿಗೆ ಕೇಳುತ್ತದೆ ಹಾಗೇ ಹೃದಯದ ನೋವು ಯಾರಿಗೂ ಕಾಣುವುದಿಲ್ಲ ಆದರೆ ಕಣ್ಣುಗಳು ಎಲ್ಲವನ್ನು ತಿಳಿಸುತ್ತವೆ ✍️ಸೂಗಮ್ಮ ಪಾಟೀಲ್
ಪ್ರತಿ ಮನೆಯಲ್ಲಿಯೂ ಮಹಾನ್ ವ್ಯಕ್ತಿಗಳು ಜನಿಸಲಾರರು ಆದರೆ ಜನಿಸಿರುವ ಪ್ರತಿಯೊಬ್ಬರನ್ನು ಮಹಾನ್ ವ್ಯಕ್ತಿಗಳಾಗಿ ಬೆಳೆಸುವ ಸಾಮರ್ಥ್ಯ ಪ್ರತಿ ತಂದೆ ತಾಯಿಗೂ ಇರುತ್ತದೆ ಮಹಾನ್ ವ್ಯಕ್ತಿಗಳು ಜನಿಸಲಿಲ್ಲವೆಂದು ಕೊರಗುವದಕ್ಕಿಂತ ಜನಿಸಿರುವ ಮಕ್ಕಳನ್ನೇ ಮಹಾನ್ ವ್ಯಕ್ತಿಗಳಾಗಿ ರೂಪಿಸಿರಿ ✍️ಸೂಗಮ್ಮ ಡಿ ಪಾಟೀಲ್
ನಿದಿರೆಯಲಿ ಸುಳಿಯುವ ಕನಸುಗಳು ಒಂದಲ್ಲ ಒಂದು ದಿನ ನನಸಾಗುತ್ತವೆ ಆತ್ಮ ವಿಶ್ವಾಸದಿಂದ ಮುನ್ನುಗ್ಗಬೇಕು ಸೂಗಮ್ಮ ಡಿ ಪಾಟೀಲ್
ಈ ಜಗತ್ತು ದೇವರು ಕೊಟ್ಟ ಉಡುಗೊರೆ ಈ ಜಗತ್ತಿನಲ್ಲಿಯ ಜನ ನಮ್ಮ ಜೀವನದಲ್ಲಿ ಕನ್ನಡಿ ಇದ್ದ ಹಾಗೇ ಸದಾ ನಮ್ಮ ದೋಷಗಳನ್ನು ನಮಗೆ ತೋರಿಸುತ್ತಾರೆ ಸೂಗಮ್ಮ ಡಿ ಪಾಟೀಲ್
ಶುಭೋದಯ ಬೇಡವಾದ ಕಸ ಎಲ್ಲೆಂದರಲ್ಲಿ ತಾನಾಗಿಯೇ ಸಮೃದ್ಧವಾಗಿ ಬೆಳೆಯುತ್ತದೆ ಯಾರ ಆರೈಕೆಯು ಇಲ್ಲದೆಯೇ ಬೇಕಾದ ಬೆಳೆ ಮಾತ್ರ ನಾವು ಬೆಳೆಸಿದಾಗ ನಮ್ಮ ಆರೈಕೆಯಲ್ಲಿ ನಾವು ಬೆಳೆಸಿದಂತೆ ಬೆಳೆಯುತ್ತದೆ ಕಳೆಯನ್ನು ಕಿತ್ತು ಬಿಸಾಕಿ ಬೆಳೆಯನ್ನು ಬೆಳೆಸಬೇಕು ಆಯ್ಕೆ ನಮ್ಮ ಕೈಯಲ್ಲಿಯೇ ಇರುತ್ತದೆ ಸೂಗಮ್ಮ ಡಿ ಪಾಟೀಲ್ ಉತ್ನಾಳ್
ಪ್ರತಿದಿನವು ಪ್ರತಿಯೊಬ್ಬರ ಜೀವನದಲ್ಲಿಯೂ ಬೆಳಿಗ್ಗೆ ಬರುತ್ತದೆ ಆದರೆ ಎಲ್ಲರ ಮುಂಜಾನೆಯು ಸಂತೋಷದಾಯಕವಾಗಿರುವುದಿಲ್ಲ ಯಾರ ಹೃದಯ ಸಂತೃಪ್ತಿಯಿಂದ ಕೂಡಿರುತ್ತದೆಯೋ ಅವರುಗಳ ದಿನದ ಆರಂಭ ಮಾತ್ರ ಆನಂದಮಯವಾಗಿರುತ್ತದೆ ಸೂಗಮ್ಮ ಡಿ ಪಾಟೀಲ್
ಶುಭೋದಯ ನಮ್ಮ ಜೀವನದಲ್ಲಿ ಸುಲಭವಾಗಿ ಸಿಗುವ ಯಶಸ್ಸಿಗೆ ಆಯಸ್ಸು ಕಮ್ಮಿ ಮಹತ್ವವು ಕಮ್ಮಿಯಾಗಿರುತ್ತದೆ ಕಷ್ಟ ಪಟ್ಟು ಪಡೆದಾಗಲೇ ಅದರ ಮಹತ್ವ ಮತ್ತು ಆಯಸ್ಸು ಹೆಚ್ಚಾಗುತ್ತದೆ ಸುಲಭವಾಗಿ ಸಿಕ್ಕಿದ್ದು ಶೀಘ್ರವಾಗಿ ನಶಿಸುತ್ತದೆ ಪ್ರಯತ್ನದಿಂದ ಪಡೆದದ್ದು ಕೊನೆವರೆಗೂ ಉಳಿಯುತ್ತದೆ ಪ್ರಯತ್ನಶೀಲರಾಗಿರೋಣ ಸೂಗಮ್ಮ ಡಿ ಪಾಟೀಲ್