ಹೃದಯ ಸ್ಪರ್ಶಿ
Literary Colonel
AUTHOR OF THE YEAR 2021 - WINNER

84
Posts
7
Followers
4
Following

ಎದುರಿಗೊಂದು ಬಿಳಿ ಹಾಳೆ ಕೈಯ್ಯಲ್ಲೊಂದು ಲೇಖನಿ.. ಬಿಟ್ಟರೇ, ಬೇರೇನು ಬೇಕಿಲ್ಲ! ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹವೇ.. ಮನದ ನೆಮ್ಮದಿ.

Share with friends
Earned badges
See all

ಎಲ್ಲ ಸಂದರ್ಭಗಳಲ್ಲಿಯೂ ಮಾತನಾಡಬೇಕು ಎಂಬ ಆತುರ ಬೇಡ. ಅನೇಕ ಸಲ ಮಾತಿಗಿಂತ ಮೌನವೇ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸುತ್ತದೆ!

Expectations give us more pain.. So don't expect anything from anyone

ಮುನಿಸಿಗೂ ಮೌನವ ಕಟ್ಟುವುದು ಇಳಿಸಂಜೆಯ ಸೂರ್ಯ ನಿನ್ನೆಡೆಗೆ ಧಾವಿಸಲು ಆ ಬೆಟ್ಟದ ತುದಿಯಲಿ..

ಸ್ವಪ್ನ ಲೋಕದಿ ತೇಲುತ್ತಿದ್ದ ಮೋಡಗಳನ್ನೆಲ್ಲಾ... ಬದಿಗೆ ಸರಿಸಿ, ತನ್ನ ಹೊಂಬಣ್ಣದ ಕಿರಣವ ಬೀರಿ... ನಸುಕಿನಲ್ಲೇ ಭುವಿಯ ಕತ್ತಲು ಓಡಿಸುತ್ತಾ... ಊರ ಅಂಗಳದಲ್ಲೆಲ್ಲಾ ತನ್ನ ಬೆಳಕ ಪಸರಿಸುತ್ತಾ.. ಎದ್ದು ಬಂದಿರುವ ಆದಿತ್ಯ... ಬೆಳಗಾಯ್ತು ಎಂಬ ಸಂದೇಶದೊಂದಿಗೆ... ನಿದ್ದೆಯಿಂದ ಎದ್ದು ತಮ್ಮ ಕೆಲಸದಲ್ಲಿ ತೊಡಗಿಕೊಂಡ ಮನುಕುಲಕ್ಕೆ ಭವ್ಯ ಸ್ವಾಗತ..!! ಶುಭೋದಯ...

ಮನದ ಮಾತು ಹೊರ ಬರುವಂತಿಲ್ಲ ಬಾಯಿ ಮೇಲಿನ ಮಾತು ಮನದಲ್ಲಿಲ್ಲ ಒಟ್ಟಿನಲ್ಲಿ ಎಲ್ಲರದ್ದೂ ಬೂಟಾಟಿಕೆ ಜೀವನ ಕಾಲ ಹೇಗೆ ಬದಲಾದರೂ... ಈ ಮನುಷ್ಯ ಜೀವಿ ಬದಲಾಗಲಾರ! ಹೊರಗೊಂದು ಒಳಗೊಂದು ಅವನ ಹುಟ್ಟುಗುಣ...

ಬಿಳಿಯ ನುಣುಪಿನ ಮಂಜಿನ ಮರೆಯಲಿ ಅಡಗಿಹ ಮೊನಚು ಕಲ್ಲಿನ ಘನತೆ... ತಿಳಿಯ ಹೇಳುವುದು ನಮಗೆ ಜೀವನದ ಸಂಕಷ್ಟವ ಎದುರಿಸಿ ನಿಲ್ಲುವ ದೃಢತೆ...

ಮರೆತಂತೆ ನಟಿಸಿದರೂ ಮರೆಯದ ಆ ನೆನಪಿನಲ್ಲೊಂದು ದಿನ ಕರಗಿ ಅದೃಶ್ಯವಾಗಬೇಕೆಂಬ ಹಂಬಲ ಮನದ ತುತ್ತ ತುದಿಗೆ ತಲುಪಿದರೂ ಹಾಗೇ ಮಾಡಲಾಗದೆ ಮತ್ತೆ ಅಸಹಾಯಕಳಾಗುತ್ತಿದ್ದೇನೆ...

ಮಾತು ಮಾತಿಗೂ ಕೇಳಿದೆ ಸಾಕ್ಷಿ ಪ್ರತಿ ನಡೆಗೂ ಬಯಸಿದೆ ಕ್ಲಾರಿಟಿ ಆದರೂ ನುಡಿಯುವರಿಲ್ಲಿ ಒಂದೇ ನುಡಿ.. ನನಗಿದೆ ನಂಬಿಕೆ..?!!

ಓ ನಿದಿರೆಯೇ ಬಂದು ಬಿಡು, ತಡಮಾಡದೆ ಹರಿಸು ಹೊನಲು.. ಎಲ್ಲಾ ಸುಖವ ಧಾರೆಯೆರೆದು ಬಿಡು ಬೆಳಗು ಮೂಡುವ ಮೊದಲು...


Feed

Library

Write

Notification
Profile