Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

#WriteWithPride

SEE WINNERS

Share with friends

ಜೂನ್ ತಿಂಗಳು LGBTQ+ ಧ್ವನಿಗಳಿಗೆ ಮೀಸಲಾಗಿರುವ ತಿಂಗಳು ಎಂದು ನಮಗೆಲ್ಲರಿಗೂ ತಿಳಿದಿದೆ. ಇದನ್ನು ಹೆಮ್ಮೆಯ ತಿಂಗಳು, ಪ್ರೈಡ್ ತಿಂಗಳು (ಪ್ರೈಡ್ ಮಂತ್) ಎಂದು ಕರೆಯಲಾಗುತ್ತದೆ. ಆದರೆ ಸಮುದಾಯಕ್ಕಾಗಿ ಮೀಸಲಾಗಿರುವ ಈ ಒಂದು ತಿಂಗಳನ್ನು ನಾವೇಕೆ ಹೊಂದಿದ್ದೇವೆ ಎಂದು ನಿಮಗೆ ಗೊತ್ತಿದೆಯೇ?

1969 ರಲ್ಲಿ (ಜೂನ್), ಪೊಲೀಸರು ಮತ್ತು ಸಲಿಂಗಕಾಮಿ ಹಕ್ಕುಗಳ ಕಾರ್ಯಕರ್ತರ ನಡುವೆ ಭಾರಿ ಗಲಭೆಗಳಿಗೆ ಮತ್ತು ಘರ್ಷಣೆಗಳಿಗೆ 'ಯುನೈಟೆಡ್ ಸ್ಟೇಟ್ಸ್' ಸಾಕ್ಷಿಯಾಯಿತು. ಸ್ಟೋನ್‌ವಾಲ್ ಗಲಭೆಗಳು ಎಂದೂ ಕರೆಯಲ್ಪಡುವ ಈ ಘಟನೆಯ ಸ್ಮರಣಾರ್ಥವಾಗಿ, ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್ ಅವರು ಜೂನ್ ತಿಂಗಳನ್ನು "ಗೇ & ಲೆಸ್ಬಿಯನ್ ಪ್ರೈಡ್ ತಿಂಗಳು" ಎಂದು ಘೋಷಿಸಿದರು. ಪ್ರಸ್ತುತ ಅಧ್ಯಕ್ಷರಾದ ಜೋ ಬಿಡೆನ್ ಅವರು ಜೂನ್ ತಿಂಗಳನ್ನು LGBTQ+ ಪ್ರೈಡ್ ತಿಂಗಳೆಂದು 2021 ರಲ್ಲಿ ಘೋಷಿಸಿದರು.

ಅಂದಿನಿಂದ LGBTQ+ ಸಮುದಾಯವು ಸಾಕಷ್ಟು ಸಂಕಷ್ಟಗಳನ್ನು ಮತ್ತು ಸವಾಲುಗಳನ್ನು ಎದುರಿಸಿದೆ. ಆದಾಗ್ಯೂ, ಇದು ಸಾಕಷ್ಟು ಗೆಲುವು ಮತ್ತು ಯಶಸ್ಸನ್ನು ಸಹ ಕಂಡಿದೆ. ಈ ಪ್ರೈಡ್ ತಿಂಗಳು, ಸ್ಟೋರಿಮಿರರ್‌ನಲ್ಲಿ LGBTQ+ ಸಮುದಾಯದ ಎಲ್ಲ ಯಶಸ್ಸಿನ ಕಥೆಗಳನ್ನು ಇಡೀ ವಿಶ್ವಕ್ಕೆ ಹರಡುವ ಬೃಹತ್ ಕಾರ್ಯವನ್ನು ನಾವು ಕೈಗೆತ್ತಿಕೊಂಡಿದ್ದೇವೆ! ಬನ್ನಿ, ಈ ನಿಟ್ಟಿನಲ್ಲಿ ನಮಗೆ ಸಹಾಯ ಮಾಡಲು ನಮ್ಮ ಜೊತೆಯಾಗಿ. ನೀವು ಸಹಾಯ ಮಾಡುತ್ತೀರಲ್ಲವೇ?

ಸ್ಟೋರಿಮಿರರ್ #WriteWithPride ಸ್ಪರ್ಧೆಯನ್ನು ಪ್ರಸ್ತುತಪಡಿಸುತ್ತದೆ. ಇದು ಸೋಲು-ಗೆಲುವುಗಳ ಹೊರತಾಗಿ ಎಲ್ಲರಿಗಾಗಿ ಪ್ರೀತಿ, ಸ್ವೀಕಾರ ಮತ್ತು ಸಹಾನುಭೂತಿಯನ್ನು ಆಚರಿಸುವ ವಿಶೇಷ ಬರವಣಿಗೆಯ ಸ್ಪರ್ಧೆಯಾಗಿದೆ.

ನೀವು ನಿಮ್ಮ ಸ್ವಂತ ಯಶಸ್ಸಿನ ಕಥೆಗಳನ್ನು ಅಥವಾ ನಿಮಗೆ ತಿಳಿದಿರುವ ಬೇರೊಬ್ಬರ ಯಶಸ್ಸಿನ ಕಥೆಗಳನ್ನು ಬರೆಯಬಹುದು. ನಿಮ್ಮ ಲೇಖನಿ ಅದೆಷ್ಟು ಶಕ್ತಿಯುತವಾಗಿದೆ ಎಂದು ನೋಡೋಣ.

ಥೀಮ್‌ಗಳು -

  • ಸಂತೋಷವಾಗಿರುವ ಅಸಾಂಪ್ರದಾಯಿಕ ದಂಪತಿಗಳ ಸುತ್ತ ಕಥೆ/ಕವನ ಬರೆಯಿರಿ. #TogetherWeRise
  • ಕುಟುಂಬ/ಸಮಾಜ ಸ್ವೀಕಾರದ ಸುತ್ತ ಕಥೆ/ಕವನ ಬರೆಯಿರಿ. #ReflectionsofPride
  • ಯಶಸ್ವಿಯಾಗಿರುವ ಅಸಾಂಪ್ರದಾಯಿಕ ವಿವಾಹ ಕಥೆಗಳ ಬಗ್ಗೆ ಕಥೆ/ಕವನ ಬರೆಯಿರಿ. #FreedomtoLoveandMarry

ನಿಯಮಗಳು:

  • ಸ್ಪರ್ಧಿಗಳು ತಮ್ಮ ಬರಹವನ್ನು ಪ್ರೈಡ್ ಸಂಸ್ಕೃತಿಯ (pride culture) ಬಗ್ಗೆ ಮಾತ್ರವೇ ಬರೆದು ಸಲ್ಲಿಸಬೇಕು.
  • ಸ್ಪರ್ಧಿಗಳು ತಮ್ಮ ಸ್ವಂತ ಕವನಗಳನ್ನು/ಕಥೆಗಳನ್ನು ಸಲ್ಲಿಸಬೇಕು. ನಕಲಿಸುವುದು ಅಪರಾಧ.
  • ಸ್ಪರ್ಧಿಗಳು ತಮ್ಮ ಸ್ವಂತ ಬರಹವನ್ನು ಸಲ್ಲಿಸಬೇಕು. ನೀವು ಸಲ್ಲಿಸುವ ಬರಹಗಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ. ಹೆಚ್ಚಿನ ಸಂಖ್ಯೆಯ ಬರಹಗಳನ್ನು ನಿಮ್ಮಿಂದ ನಿರೀಕ್ಷಿಸುತ್ತೇವೆ. 
  • ನಿಮ್ಮ ಬರಹಗಳಿಗೆ ಪದಗಳ ಮಿತಿ ಇಲ್ಲ.
  • ಇಮೇಲ್ ಮೂಲಕ ಅಥವಾ ಹಾರ್ಡ್ ಕಾಪಿಯ ಮೂಲಕ ಅಥವಾ ಸ್ಪರ್ಧೆಯ ಲಿಂಕ್ ಅನ್ನು ಬಳಸದೆ ಸಲ್ಲಿಸುವ ಯಾವುದೇ ಬರಹಗಳು ಸ್ಪರ್ಧೆಗೆ ಅರ್ಹವಾಗಿರುವುದಿಲ್ಲ.
  • ಸ್ಪರ್ಧೆಗೆ ಭಾಗವಹಿಸಲು ಯಾವುದೇ ಶುಲ್ಕವಿಲ್ಲ.

ವಿಭಾಗಗಳು: ಕಥೆ, ಕವಿತೆ

ಭಾಷೆಗಳು: ಕನ್ನಡ, ಇಂಗ್ಲೀಷ್, ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಮಲಯಾಳಂ, ಒಡಿಯಾ ಮತ್ತು ಬೆಂಗಾಲಿ.

ಬಹುಮಾನಗಳು:

  • ಎಲ್ಲಾ ಥೀಮ್‌ಗಳಲ್ಲಿ ತಮ್ಮ ಬರಹಗಳನ್ನು ಸಲ್ಲಿಸುವ ಪ್ರತಿಯೊಂದು ಭಾಷೆಯ ಮತ್ತು ವಿಭಾಗದ ಅಗ್ರ 2 ಸ್ಪರ್ಧಿಗಳಿಗೆ, ಸ್ಟೋರಿಮಿರರ್‌ನಿಂದ ಒಂದು ಉಚಿತ ಭೌತಿಕ ಪುಸ್ತಕವನ್ನು ನೀಡಲಾಗುವುದು.
  • ಎಲ್ಲಾ ಸ್ಪರ್ಧಿಗಳು ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ಸ್ವೀಕರಿಸುತ್ತಾರೆ.
  • ಪ್ರತಿ ಭಾಷೆ ಮತ್ತು ವಿಭಾಗದಲ್ಲಿನ ಅಗ್ರ 30 ವಿಜೇತರ ಹೆಸರನ್ನು ಸ್ಟೋರಿಮಿರರ್‌ನ ಇ-ಬುಕ್‌ನಲ್ಲಿ ಪ್ರಕಟಿಸಲಾಗುವುದು. ಗೆಲುವಿಗೆ ನಾವು ಪರಿಗಣಿಸುವ ಮಾನದಂಡಗಳೆಂದರೆ ನಮ್ಮ ಸಂಪಾದಕೀಯ ತಂಡದಿಂದ ನಿಮ್ಮ ಬರಹಗಳಿಗೆ ದೊರೆಯುವ ಸಂಪಾದಕೀಯ ಅಂಕಗಳು (ಎಡಿಟೋರಿಯಲ್ ಸ್ಕೋರ್‌ಗಳು) 

ಸಲ್ಲಿಕೆಯ ಅವಧಿ: 18 ಜೂನ್ 2022 ರಿಂದ 18 ಜುಲೈ 2022

ಫಲಿತಾಂಶ: ಆಗಸ್ಟ್ 18, 2022

ಸಂಪರ್ಕಿಸಿ:

ಇಮೇಲ್neha@storymirror.com

ದೂರವಾಣಿ ಸಂಖ್ಯೆ: +91 9372458287 / 022-49240082

ವಾಟ್ಸಾಪ್: +91 84528 04735