Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

#31 Days : 31 Writing Prompts (Season 4)

SEE WINNERS

Share with friends

ಸ್ಟೋರಿಮಿರರ್ ತನ್ನ "31 ದಿನಗಳು: 31 ರೈಟಿಂಗ್ ಪ್ರಾಂಪ್ಟ್‌ಗಳು"  ಸೂಪರ್‌ಹಿಟ್ ಸೀಸನ್ 4 ರೊಂದಿಗೆ ಮತ್ತೇ ಹಿಂತಿರುಗಿ ಬಂದಿದೆ. ಇದು ನಿಮ್ಮ ಅತ್ಯುತ್ತಮ ಬರಹಗಳ ಮೂಲಕ ನಿಮ್ಮ ಪ್ರತಿಭೆಯನ್ನು ಹೊರಗೆಳೆಯುವ ಸ್ಪರ್ಧೆಯಾಗಿದ್ದು, ಅದು ನಿಮ್ಮ ಕೌಶಲ್ಯವನ್ನು ಇನ್ನಷ್ಟು ಮೆರುಗುಗೊಳಿಸುತ್ತದೆ ಮತ್ತು ಓದುಗರಿಗೆ ಅದ್ಭುತವಾದ ಬರವಣಿಗೆಯನ್ನು ಆನಂದಿಸಲು ಅವಕಾಶ ನೀಡುತ್ತದೆ.

ಈ ಅತ್ಯಾಕರ್ಷಕ ಬರವಣಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು, ಸ್ಪರ್ಧಿಗಳು ಪ್ರಾಂಪ್ಟ್ ಚಿತ್ರಗಳ ಬಗ್ಗೆ ಬುದ್ದಿವಂತಿಕೆ ಉಪಯೋಗಿಸಬೇಕು. ಇದು ಬರವಣಿಗೆಯಲ್ಲಿ ಹೆಚ್ಚಿನ ಸಾಧನೆಗೈಯಲು ನಿಜವಾಗಿಯೂ ಸ್ಪರ್ಧಿಗಳಿಗೆ ಒತ್ತು ನೀಡುತ್ತದೆ. ಸ್ಪರ್ಧೆಗೆ ಸಿದ್ಧರಿರುವ ಎಲ್ಲಾ ಲೇಖಕರು, ಮೇಲಿನ ಬ್ಯಾನರ್‌ನಲ್ಲಿ ನೀಡಲಾದ ಚಿತ್ರಕ್ಕೆ, ನಿಮ್ಮ ಕಲ್ಪನೆಯ ಮೂಲಕ ಒಂದು ಸುಂದರ ಕಥೆ ಅಥವಾ ಕವಿತೆಯನ್ನು ಸೃಷ್ಟಿಸಬೇಕು. ನೀವು ಹಾಸ್ಯ, ಪ್ರಣಯ, ದುರಂತ, ಥ್ರಿಲ್ಲರ್, ಹೀಗೆ ವಿವಿಧ ಪ್ರಕಾರಗಳಲ್ಲಿಯೂ ಬರೆಯಬಹುದು.

ಮೇಲಿನ ಬ್ಯಾನರ್‌ನಲ್ಲಿರುವ ಚಿತ್ರದಂತೆಯೇ ನಿಮ್ಮ ಪ್ರತಿದಿನದ ಪ್ರಾಂಪ್ಟ್ ಅನ್ನು ನೀಡಲಾಗುತ್ತದೆ. ನಿಮಗೆ ಪ್ರತಿದಿನ ಎರಡು ಚಿತ್ರಗಳ ಪ್ರಾಂಪ್ಟ್‌ಗಳನ್ನು ನೀಡಲಾಗುತ್ತದೆ. ಎಡಭಾಗದಲ್ಲಿರುವ ಚಿತ್ರವು, ನಿಮ್ಮ ಕಥೆ ಅಥವಾ ಕವಿತೆಯ ಆರಂಭವಾಗಿರಬೇಕು ಮತ್ತು ಬಲಭಾಗದಲ್ಲಿರುವ ಚಿತ್ರವು ಆ ಕಥೆ/ಕವಿತೆಯ ಮುಕ್ತಾಯದ ಹಂತವಾಗಿರಬೇಕು. ಆದ್ದರಿಂದ, ಎಡಭಾಗದ ಚಿತ್ರವು ಪ್ರಾರಂಭದ ದೃಶ್ಯವನ್ನು ಸೂಚಿಸಬೇಕು ಮತ್ತು ಬಲಭಾಗದ ಚಿತ್ರವು ನಿಮ್ಮ ಬರವಣಿಗೆಯ ಮುಕ್ತಾಯದ ದೃಶ್ಯವಾಗಿರಬೇಕು.

ಸೀಮಿತ ಚೌಕಟ್ಟಿನ ಹೊರಗೂ ಯೋಚಿಸಿ. ಮತ್ತು ನಿಮ್ಮ ಕಲ್ಪನೆಗೆ ವಿಶಾಲವಾಗಿ ಬೆಳೆಯಲು ಅವಕಾಶ ನೀಡಿ. ಇದರಿಂದ ನೀವು ಸುಂದರವಾದ ಕಥೆ/ಕವಿತೆಯನ್ನು ರಚಿಸಬಹುದು ಮತ್ತು ಸ್ಪರ್ಧೆಯನ್ನು ಸಹ ಗೆಲ್ಲಬಹುದು!

ನಿಯಮಗಳು:

  • ಸ್ಟೋರಿಮಿರರ್ ಪ್ರತಿ ರಾತ್ರಿ 12 ಗಂಟೆಗೆ ಹೊಸ ಚಿತ್ರದ ರೈಟಿಂಗ್ ಪ್ರಾಂಪ್ಟ್ ಅನ್ನು ನೀಡುತ್ತದೆ.
  • ಬ್ಯಾನರ್‌ನಲ್ಲಿರುವ ಚಿತ್ರವೇ ರೈಟಿಂಗ್ ಪ್ರಾಂಪ್ಟ್ ಆಗಿರುತ್ತದೆ. ಮೇಲಿನ ಬ್ಯಾನರ್‌ನಲ್ಲಿರುವ ಚಿತ್ರದ ಆಧಾರದ ಮೇಲೆಯೇ, ನೀವು ಕಥೆ ಅಥವಾ ಕವಿತೆಯನ್ನು ಬರೆಯಬೇಕಾಗಿದೆ.
  • ಪ್ರತಿ ಪ್ರಾಂಪ್ಟ್, ಈ ಸ್ಪರ್ಧೆಯ ಕೊನೆಯ ದಿನದವರೆಗೂ (ಜೂನ್ 5) ಚಾಲ್ತಿಯಲ್ಲಿರುತ್ತದೆ. ನೀವು ಹಿಂದಿನ ಪ್ರಾಂಪ್ಟ್‌ಗಳನ್ನು "ಎಲ್ಲ ಪ್ರಾಂಪ್ಟ್‌ಗಳು" (All Prompts) ಟ್ಯಾಬ್ ಅಡಿಯಲ್ಲಿ ನೋಡಬಹುದು.
  • ಸ್ಪರ್ಧಿಗಳು ವಿವಿಧ ವಿಭಾಗಗಳಿಗೆ (ಕಥೆ/ಕವಿತೆ) ನೋಂದಾಯಿಸಿಕೊಳ್ಳಬಹುದು. ಆದಾಗ್ಯೂ, ನಿಮ್ಮ 31ಬರಹಗಳ ಪ್ರತಿಯೊಂದು ಸೆಟ್ 'ಕಥೆ' ಅಥವಾ 'ಕವಿತೆ'ಯ ಒಂದೇ ವರ್ಗದ ಅಡಿಯಲ್ಲಿರಬೇಕು. ಉಧಾಹರಣೆಗೆ ನೀವು ಕವಿತೆ ಬರೆಯಲು ಆಯ್ಕೆ ಮಾಡಿಕೊಂಡಲ್ಲಿ, ಸ್ಪರ್ಧೆಗೆ ಅರ್ಹರಾಗಲು 31 ಕವಿತೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಇದೇ ನಿಯಮ ಕಥೆಗೂ ಅನ್ವಯಿಸುತ್ತದೆ. ಕಥೆ-ಕವಿತೆ ಎರಡನ್ನೂ ಸೇರಿಸಿ 31 ಬರಹಗಳನ್ನು ಪ್ರಕಟಿಸಿದರೆ ಅದು ಸ್ಪರ್ಧೆಗೆ ಅನರ್ಹವಾಗುತ್ತದೆ.
  • ಸ್ಪರ್ಧಿಗಳು ತಮ್ಮ ಸ್ವಂತ ಕವಿತೆ/ ಕಥೆಗಳನ್ನು ಸಲ್ಲಿಸಬೇಕು. ನಕಲಿಸುವುದು ಅಪರಾಧ.
  • ಸಲ್ಲಿಸಬೇಕಾದ ಕಥೆಗಳು ಅಥವಾ ಕವಿತೆಗಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ, ನೀವು ಪ್ರತಿ ಪ್ರಾಂಪ್ಟ್‌ನಲ್ಲಿ 1 ಕಥೆ / ಕವಿತೆಗಿಂತ ಹೆಚ್ಚು ಬರೆಯಬಹುದು. ನಿಮ್ಮ ಬರಹದ ಪ್ರಕಾರದ ಮೇಲೆ ಯಾವುದೇ ನಿರ್ಬಂಧಗಳಿಲ್ಲ. ನೀವು ಹಾಸ್ಯ, ಪ್ರಣಯ, ದುರಂತ, ಥ್ರಿಲ್ಲರ್, ಹೀಗೆ ವಿವಿಧ ಪ್ರಕಾರಗಳಲ್ಲಿ ಬರೆಯಬಹುದು.
  • ನೀವು ಸಲ್ಲಿಸುವ ಬರಹಗಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ. ನೀವು ಹೆಚ್ಚು ಬರೆದಷ್ಟು, ಸ್ಟೋರಿಮಿರರ್ ವೇದಿಕೆ ಅದನ್ನು ಸಂಭ್ರಮಿಸುತ್ತದೆ.
  • ನಿಮ್ಮ ಬರಹಗಳಿಗೆ ಪದಗಳ ಮಿತಿ ಇಲ್ಲ.
  • ಇಮೇಲ್ ಮೂಲಕ ಅಥವಾ ಹಾರ್ಡ್ ಕಾಪಿಯ ಮೂಲಕ ಅಥವಾ ಸ್ಪರ್ಧೆಯ ಲಿಂಕ್ ಅನ್ನು ಬಳಸದೆ ರಚಿಸಿದ ಯಾವುದೇ ಬರಹವು, ಸ್ಪರ್ಧೆಗೆ ಪ್ರವೇಶಿಸಲು ಅರ್ಹವಾಗಿರುವುದಿಲ್ಲ.
  • ಸ್ಪರ್ಧಿಗಳಿಗೆ ಭಾಗವಹಿಸಲು ಯಾವುದೇ ಶುಲ್ಕವಿಲ್ಲ.
  • ನಿಮ್ಮ ಭಾಗವಹಿಸುವಿಕೆಯ ಪ್ರಮಾಣಪತ್ರಗಳು, ನಿಮ್ಮ ಪ್ರೊಫೈಲ್‌ನಲ್ಲಿ 'ಸರ್ಟಿಫಿಕೇಟ್' ವಿಭಾಗದ ಅಡಿಯಲ್ಲಿ ಲಭ್ಯವಿರುತ್ತವೆ.

ಕೆಟಗರಿಗಳು:

 ಕಥೆ

 ಕವಿತೆ

ಭಾಷೆಗಳು: ಕನ್ನಡ, ಇಂಗ್ಲೀಷ್, ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಮಲಯಾಳಂ, ಒಡಿಯಾ ಮತ್ತು ಬೆಂಗಾಲಿ.

ಬಹುಮಾನಗಳು:

  • 31 ಕಥೆಗಳು/ಕವಿತೆಗಳನ್ನು ಅಥವಾ ಅದಕ್ಕೂ ಹೆಚ್ಚಿನ ಸಂಖ್ಯೆಯ ಬರಹಗಳನ್ನು ಸಲ್ಲಿಸುವ ಸ್ಪರ್ಧಿಗಳಿಗೆ, ಸ್ಟೋರಿಮಿರರ್‌ನಿಂದ ಒಂದು ಉಚಿತ ಭೌತಿಕ ಪುಸ್ತಕ ಮತ್ತು ಭೌತಿಕ ಪ್ರಮಾಣಪತ್ರವನ್ನು ನೀಡಲಾಗುತ್ತದೆ.
  • ಎಲ್ಲಾ ಸ್ಪರ್ಧಿಗಳು ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ಪಡೆಯುತ್ತಾರೆ.
  • ಟಾಪ್ 30 ವಿಜೇತರ ಹೆಸರನ್ನು, ಸ್ಟೋರಿಮಿರರ್‌ನ ಇ-ಬುಕ್‌ನಲ್ಲಿ ಪ್ರತಿ ಭಾಷೆ ಮತ್ತು ವಿಭಾಗದಲ್ಲಿ ಪ್ರಕಟಿಸಲಾಗುತ್ತದೆ.ಸ್ಪರ್ಧೆಯನ್ನು ಗೆಲ್ಲಲು ಪರಿಗಣಿಸಲಾಗುವ ಅಂಶವೆಂದರೆ, ನಮ್ಮ ಸಂಪಾದಕೀಯ ತಂಡದಿಂದ ನೀಡಲಾಗುವ ಸಂಪಾದಕೀಯ ಸ್ಕೋರ್‌ಗಳು.
  • 10 ಅಥವಾ ಹೆಚ್ಚಿನ ಬರಹಗಳನ್ನು ಸಲ್ಲಿಸುವ ಸ್ಪರ್ಧಿಗಳು 'ಹಂತ 1' ಅನ್ನು ಪೂರ್ಣಗೊಳಿಸುತ್ತಾರೆ ಮತ್ತು ₹100 ಮೌಲ್ಯದ ಸ್ಟೋರಿಮಿರರ್ ಶಾಪ್ ಡಿಸ್ಕೌಂಟ್ ವೋಚರ್ ಅನ್ನು ಪಡೆಯುತ್ತಾರೆ.
  • 15 ಅಥವಾ ಹೆಚ್ಚಿನ ಬರಹಗಳನ್ನು ಸಲ್ಲಿಸುವ ಸ್ಪರ್ಧಿಗಳು 'ಹಂತ 2' ಅನ್ನು ಪೂರ್ಣಗೊಳಿಸುತ್ತಾರೆ ಮತ್ತು ₹125 ಮೌಲ್ಯದ ಸ್ಟೋರಿಮಿರರ್ ಶಾಪ್ ಡಿಸ್ಕೌಂಟ್ ವೋಚರ್ ಅನ್ನು ಪಡೆಯುತ್ತಾರೆ.
  • 25 ಅಥವಾ ಹೆಚ್ಚಿನ ಬರಹಗಳನ್ನು ಸಲ್ಲಿಸುವ ಸ್ಪರ್ಧಿಗಳು 'ಹಂತ 3' ಅನ್ನು ಪೂರ್ಣಗೊಳಿಸುತ್ತಾರೆ ಮತ್ತು ₹150 ಮೌಲ್ಯದ ಸ್ಟೋರಿಮಿರರ್ ಶಾಪ್ ಡಿಸ್ಕೌಂಟ್ ವೋಚರ್ ಅನ್ನು ಪಡೆಯುತ್ತಾರೆ.

ಸಲ್ಲಿಕೆಯ ಅವಧಿ: 1 ಮೇ 2022 ರಿಂದ 5 ಜೂನ್ 2022.

ಸ್ಪರ್ಧೆಯ ಫಲಿತಾಂಶ: ಜುಲೈ 10, 2022.

ಸಂಪರ್ಕಿಸಿ:

ಇಮೇಲ್neha@storymirror.com

ದೂರವಾಣಿ ಸಂಖ್ಯೆ: +91 9372458287 / 022-49240082

ವಾಟ್ಸಾಪ್ : +91 84528 04735