Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

#Celebrate the Republic

SEE WINNERS

Share with friends

ಭಾರತವು ಗಣರಾಜ್ಯೋತ್ಸವವನ್ನು ಪ್ರತಿ ವರ್ಷ ಜನವರಿ 26 ರಂದು ಭಾರತ ಸಂವಿಧಾನದ ಅಂಗೀಕಾರದ ಸ್ಮರಣಾರ್ಥವಾಗಿ ಆಚರಿಸಸುತ್ತದೆ ಮತ್ತು 1950 ರಲ್ಲಿ ಅದೇ ದಿನ ಭಾರತ ದೇಶವು ಬ್ರಿಟಿಷ್ ಪ್ರಭುತ್ವದಿಂದ ಗಣರಾಜ್ಯವಾಗಿ ಪರಿವರ್ತನೆಯಾಯಿತು.

ಸ್ಟೋರಿಮಿರರ್ ನಿಮ್ಮನ್ನು "ಗಣರಾಜ್ಯೋತ್ಸವವನ್ನು ಆಚರಿಸಿ(ಸೆಲೆಬ್ರೇಟ್ ದಿ ರಿಪಬ್ಲಿಕ್)" ಎಂಬ ಬರವಣಿಗೆ ಸ್ಪರ್ಧೆಯ ಭಾಗವಾಗಲು ಆಹ್ವಾನಿಸುತ್ತದೆ. ನಿಮ್ಮ ಬರವಣಿಗೆಯ ಮೂಲಕ ಈ ದಿನದ ಮಹತ್ವ ಮತ್ತು ಅದು ಪ್ರತಿನಿಧಿಸುವ ಮೌಲ್ಯಗಳ ಬಗ್ಗೆ ನಿಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು ವ್ಯಕ್ತಪಡಿಸಲು ಈ ಸ್ಪರ್ಧೆಯು ನಿಮಗೊಂದು ಸದಾವಕಾಶವಾಗಿದೆ. ಅದು ಕವಿತೆಯಾಗಿರಲಿ ಅಥವಾ ಸಣ್ಣ ಕಥೆಯಾಗಿರಲಿ, ನಿಮ್ಮ ಬರಹದಲ್ಲಿ ಏಕತೆ, ವೈವಿಧ್ಯತೆ ಮತ್ತು ದೇಶಭಕ್ತಿಯ ಥೀಮ್‌ಗಳನ್ನು ಅನ್ವೇಷಿಸಲು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.

ನಾವು ನಿಮ್ಮ ಸೃಜನಶೀಲ ಮತ್ತು ಸ್ಪೂರ್ತಿದಾಯಕ ಬರಹಗಳನ್ನು ಓದಲು ಉತ್ಸಾಹದಿಂದ ಎದುರು ನೋಡುತ್ತಿದ್ದೇವೆ.

ಬರವಣಿಗೆಗಾಗಿ ನಾವು ಕೆಳಗೆ ಕೆಲವು ವಿಷಯಗಳನ್ನು ನೀಡಿದ್ದೇವೆ. ಅವುಗಳನ್ನು ಪರಿಶೀಲಿಸಿ. ಅಷ್ಟೇ ಅಲ್ಲದೇ, ನಿಮ್ಮ ಸ್ವಂತ ಆಯ್ಕೆಯ ವಿಷಯದ ಬಗ್ಗೆಯೂ ನೀವು ಬರಹಗಳನ್ನು ಬರೆಯಬಹುದು.

  • "ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸ್ವಾತಂತ್ರ್ಯ ಹೋರಾಟಗಾರನ ಜೀವನದಲ್ಲಿ ಒಂದು ದಿನ"
  • "ಗಣರಾಜ್ಯೋತ್ಸವ ದಿನದಂದು ತಮ್ಮ ತಾಯ್ನಾಡಿಗೆ ಹಿಂದಿರುಗುತ್ತಿರುವ ಭಾರತೀಯ ವಲಸಿಗನ ಮನದಲ್ಲಿ ಮೂಡುತ್ತಿರುವ ಭಾವಗಳು"
  • "ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸುತ್ತಿರುವ ಯುವ ವಿದ್ಯಾರ್ಥಿಯ ಅನುಭವ"
  • "ಗಣರಾಜ್ಯೋತ್ಸವವನ್ನು ಆಚರಿಸಲು ಒಟ್ಟಾಗಿ ಸೇರುತ್ತಿರುವ ಒಂದು ಗುಂಪು"
  • "ಗಣರಾಜ್ಯೋತ್ಸವದ ಪರೇಡ್ ಅನ್ನು ವೀಕ್ಷಿಸುವ ಕುಟುಂಬದ ಸಂಪ್ರದಾಯ ಮತ್ತು ಅದರ ಬಗ್ಗೆ ಅವರಿಗಿರುವ ಅನಿಸಿಕೆ"
  • "ಭಾರತಕ್ಕೆ ಭೇಟಿ ನೀಡುವ ವಿದೇಶಿಯರ ದೃಷ್ಟಿಕೋನದಿಂದ ಗಣರಾಜ್ಯೋತ್ಸವದ ಆಚರಣೆ"

ನಿಯಮಗಳು:


  • ನೀವು ಗಣರಾಜ್ಯೋತ್ಸವದ ವಿಷಯದ ಕುರಿತಾಗಿಯೇ ಬರೆಯತಕ್ಕದ್ದು.
  • ಸ್ಪರ್ಧಿಗಳು ತಮ್ಮ ಸ್ವಂತ ಬರಹವನ್ನು ಸಲ್ಲಿಸಬೇಕು. ನಕಲಿಸುವುದು ಅಪರಾಧ. ನಿಮ್ಮ ಬರಹಗಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ. 
  • ಬರಹಗಳಿಗೆ ಪದಗಳ ಮಿತಿ ಇಲ್ಲ.
  • ಸ್ಪರ್ಧೆಗೆ ಯಾವುದೇ ಭಾಗವಹಿಸುವಿಕೆಯ ಶುಲ್ಕವಿಲ್ಲ.

ವಿಭಾಗಗಳು:

ಕಥೆ

ಕವಿತೆ

ಆಡಿಯೋ

ಭಾಷೆಗಳು:

ಕನ್ನಡ, ಇಂಗ್ಲಿಷ್, ಹಿಂದಿ, ಗುಜರಾತಿ, ತಮಿಳು, ತೆಲುಗು, ಮಲಯಾಳಂ, ಒಡಿಯಾ ಮತ್ತು ಬಾಂಗ್ಲಾ - ಇವುಗಳಲ್ಲಿ ಯಾವುದೇ ಒಂದು ಅಥವಾ ಹೆಚ್ಚಿನ ಭಾಷೆಗಳಲ್ಲಿ ನಿಮ್ಮ ಬರಹವನ್ನು ಸಲ್ಲಿಸಬಹುದು

ಬಹುಮಾನಗಳು:

  • ಟಾಪ್ 30 ಕಥೆಗಳು ಮತ್ತು ಕವಿತೆಗಳು, ಸ್ಟೋರಿಮಿರರ್‌ನ ಇ-ಬುಕ್‌ನಲ್ಲಿ ಪ್ರಕಟಿಸಲ್ಪಡುತ್ತವೆ ಮತ್ತು ಡಿಜಿಟಲ್ ಮೆಚ್ಚುಗೆ ಪ್ರಮಾಣಪತ್ರವನ್ನು ಪಡೆಯುತ್ತವೆ. ಗೆಲ್ಲಲು ಪರಿಗಣಿಸಲಾಗುವ ಅಂಶಗಳೆಂದರೆ ನಮ್ಮ ಸಂಪಾದಕೀಯ ತಂಡದ ಸಂಪಾದಕೀಯ ಅಂಕಗಳು ( ಎಡಿಟೋರಿಯಲ್ ಸ್ಕೋರ್‌ಗಳು)
  • ಪ್ರತಿ ಭಾಷೆಯ ಟಾಪ್ 5 ಆಡಿಯೊಗಳಿಗೆ ₹149 ಮೌಲ್ಯದ ಸ್ಟೋರಿಮಿರರ್ ಡಿಸ್ಕೌಂಟ್ ವೋಚರ್ ಅನ್ನು ನೀಡಲಾಗುತ್ತದೆ.
  • ಎಲ್ಲಾ ಸ್ಪರ್ಧಿಗಳು ಭಾಗವಹಿಸುವಿಕೆ ಪ್ರಮಾಣಪತ್ರವನ್ನು ಪಡೆಯಲಿದ್ದಾರೆ.


ಸಲ್ಲಿಕೆಯ ಹಂತ - ಜನೇವರಿ 25, 2023 ರಿಂದ ಫೆಬ್ರವರಿ 25, 2023ರವರೆಗೆ 


ಫಲಿತಾಂಶದ ಘೋಷಣೆ: ಮಾರ್ಚ್ 20, 2023


ಸಂಪರ್ಕಿಸಿ:


ಇಮೇಲ್neha@storymirror.com


ದೂರವಾಣಿ ಸಂಖ್ಯೆ: +91 9372458287 / 022-49243888


ವಾಟ್ಸಾಪ್: +91 84528 04735