Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

#ColourYourWords

SEE WINNERS

Share with friends

ಹೋಳಿ ಎನ್ನುವುದು ಬಣ್ಣಗಳು, ಭಾವನೆಗಳು ಮತ್ತು ಸಂತೋಷ ತುಂಬಿದ ಹಬ್ಬವಾಗಿದೆ. ಜನರು ತಮ್ಮ ಆಂತರಿಕ ಸಕಾರಾತ್ಮಕತೆಯನ್ನು ಸ್ವಾಗತಿಸುತ್ತಾರೆ. ಜೊತೆಗೆ, ಜೀವನದ ಏರಿಳಿತಗಳ ಕಂಪನಗಳು ಮತ್ತು ನಗುವಿನ ವಿವಿಧ ಬಣ್ಣಗಳನ್ನು ಹೊರಸೂಸುತ್ತಾರೆ. ನೆರೆಹೊರೆಯವರು, ಬಂಧು-ಬಾಂಧವರನ್ನು ಸ್ವಾಗತಿಸುವ ಮತ್ತು ಹಬ್ಬದ ಭಾಗವಾಗಿಸುವ ಸಂಕೇತವಾಗಿ ಜನರು ಪರಸ್ಪರ ಬಣ್ಣಗಳನ್ನು ಬಳಿದುಕೊಳ್ಳುತ್ತಾರೆ. ಪ್ರಪಂಚದಾದ್ಯಂತ ಬಣ್ಣಗಳು ಜನರ ಜೀವನದಲ್ಲಿ ಪ್ರಾಮುಖ್ಯತೆಯನ್ನು ಹೊಂದಿವೆ. ಬಣ್ಣಗಳು ಭಾವನೆಗಳ ಮೇಲೆ ಪ್ರಭಾವ ಬೀರುವುದು ಮಾತ್ರವಲ್ಲದೆ, ಅವು ಧರ್ಮ ಮತ್ತು ವಿವಿಧ ಸಂಸ್ಕೃತಿಗಳಲ್ಲಿ ವಿಶೇಷ ಅರ್ಥವನ್ನು ಹೊಂದಿವೆ. ಮತ್ತು ಇಂತಹ ಬಣ್ಣಗಳಿಗಿಂತಲೂ ಸೊಗಸಾಗಿ ನಿಮ್ಮನ್ನು ನೀವು ವ್ಯಕ್ತಪಡಿಸಿಕೊಳ್ಳುವ ಉತ್ತಮ ಮಾರ್ಗ ಯಾವುದಿದೆ?

ಸ್ಟೋರಿಮಿರರ್ ಪ್ರಸ್ತುತಪಡಿಸುತ್ತದೆ #ನಿಮ್ಮಅಕ್ಷರಗಳಿಗೆಬಣ್ಣತುಂಬಿ (#ColourYourWords). ಕಥೆಗಳು, ಕವಿತೆಗಳ ರೂಪದಲ್ಲಿ ವಿವಿಧ ಬಣ್ಣಗಳ ಮಹತ್ವವನ್ನು ಆಚರಿಸಲು ಈ ಹೋಳಿ ಬರವಣಿಗೆ, ಒಂದು ವಿಶೇಷ ಸ್ಪರ್ಧೆಯಾಗಿದೆ.

ಥೀಮ್‌ಗಳು

ಸ್ಪರ್ಧಿಗಳು ಕೊಟ್ಟಿರುವ ವಿಷಯಗಳಿಗೆ ಮಾತ್ರವೇ ಕಥೆಗಳು ಮತ್ತು ಕವನಗಳನ್ನು ಸಲ್ಲಿಸಬಹುದು. ನಾವು ನಿಮಗಾಗಿ ನಿರ್ದಿಷ್ಟ ಬಣ್ಣಗಳು ಮತ್ತು ಬಣ್ಣಗಳ ಅರ್ಥವನ್ನು ನೀಡಿದ್ದೇವೆ. ಬಣ್ಣದ ಅರ್ಥವನ್ನು ಪ್ರತಿಬಿಂಬಿಸುವ ರೀತಿಯಲ್ಲಿ ನೀವು ಕಥೆ ಅಥವಾ ಕವಿತೆಯನ್ನು ರಚಿಸಬೇಕಾಗಿದೆ. ಉದಾಹರಣೆಗೆ, ನೀವು ಕೆಂಪು ಬಣ್ಣವನ್ನು ಆಯ್ದುಕೊಂಡರೆ, ನೀವು ಪ್ರೀತಿಯ ಬಗ್ಗೆ ಕಥೆ ಅಥವಾ ಕವಿತೆಯನ್ನು ಬರೆಯಬಹುದು.

  • ಕೆಂಪು - ಹವ್ಯಾಸ ಮತ್ತು ಪ್ರೀತಿ
  • ಕಿತ್ತಳೆ - ಸೃಜನಶೀಲತೆ, ಯುವಶಕ್ತಿ ಮತ್ತು ಉತ್ಸಾಹ
  • ಹಳದಿ - ಸಂತೋಷ, ಹೊಂಗಿರಣ
  • ಹಸಿರು - ಪ್ರಕೃತಿ, ಬೆಳವಣಿಗೆ ಮತ್ತು ಜೀವನ
  • ನೀಲಿ - ಶಾಂತ, ನಂಬಿಕೆ ಮತ್ತು ಕಲ್ಪನೆ
  • ನೇರಳೆ - ರಹಸ್ಯ ಮತ್ತು ಆಧ್ಯಾತ್ಮಿಕತೆ
  • ಗುಲಾಬಿ - ಸ್ತ್ರೀತ್ವ, ತಮಾಷೆ ಮತ್ತು ಪ್ರಣಯ
  • ಕಪ್ಪು - ಸೊಬಗು, ಶಕ್ತಿ ಮತ್ತು ಉತ್ಕೃಷ್ಟತೆ
  • ಬಿಳಿ - ಶುದ್ಧತೆ, ಶಾಂತಿ ಮತ್ತು ಸರಳತೆ
  • ಕಂದು - ಪ್ರಕೃತಿ, ಸಂಪೂರ್ಣತೆ, ಅವಲಂಬನೆ

ನಿಯಮಗಳು:

  1. ಸ್ಪರ್ಧೆಯನ್ನು ಗೆಲ್ಲಲು, ನೀವು ಎಲ್ಲಾ 10 ಥೀಮ್‌ಗಳಲ್ಲೂ ಬರೆಯಬೇಕು.
  2. ಸ್ಪರ್ಧಿಗಳು ವಿವಿಧ ವಿಭಾಗಗಳಿಗೆ (ಕಥೆ/ಕವಿತೆ) ನಿಮ್ಮ ಬರಹಗಳನ್ನು ಸಲ್ಲಿಸಬಹುದು. ಆದಾಗ್ಯೂ, 10 ಸಲ್ಲಿಕೆಗಳ ಪ್ರತಿ ಸೆಟ್, ಕಥೆ ಅಥವಾ ಕವಿತೆಯ ಒಂದೇ ವಿಭಾಗದ ಅಡಿಯಲ್ಲಿರಬೇಕು. ಅಂದರೆ ನೀವು ಕವಿತೆಯನ್ನು ಬರೆಯುವುದಾದರೆ, 10 ಕವಿತೆಗಳನ್ನು ಬರೆದರೆ ಮಾತ್ರವೇ ಅದು ಸ್ಪರ್ಧೆಗೆ ಅರ್ಹವಾಗುತ್ತದೆ. ಕಥೆ ಬರೆಯುವುದಾದರೆ, 10 ಕಥೆಗಳನ್ನು ಬರೆಯಬೇಕು. ಅಥವಾ ನೀವು ಕಥೆ-ಕವಿತೆ ಎರಡೂ ವಿಭಾಗಕ್ಕೂ ಸ್ಪರ್ಧಿಸಬಹುದು. ಆದರೆ ಎರಡೂ ವಿಭಾಗಕ್ಕು ಪ್ರತ್ಯೇಕವಾಗಿ 10 ಬರಹಗಳನ್ನು ಬರೆಯಲು ಮರೆಯದಿರಿ.
  3. ಸ್ಪರ್ಧಿಗಳು ತಮ್ಮ ಸ್ವಂತ ವಿಷಯವನ್ನು ಸಲ್ಲಿಸಬೇಕು. ನಕಲಿಸುವುದು ಅಪರಾಧ. ನೀವು ಸಲ್ಲಿಸುವ ಬರಹಗಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ.
  4. ಪದಗಳ ಮಿತಿಯಿಲ್ಲ.
  5. ಸ್ಪರ್ಧೆಗೆ ಭಾಗವಹಿಸಲು ಯಾವುದೇ ಶುಲ್ಕವಿಲ್ಲ.

ವಿಭಾಗಗಳು:

  • ಕಥೆ
  • ಕವಿತೆ
  • ಉಲ್ಲೇಖಗಳು (ಕ್ವೋಟ್ಸ್)
  • ಆಡಿಯೋ

ಭಾಷೆಗಳು:

ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ, ತಮಿಳು, ತೆಲುಗು, ಮಲಯಾಳಂ, ಒಡಿಯಾ ಮತ್ತು ಬಾಂಗ್ಲಾ - ಇವುಗಳಲ್ಲಿ ಯಾವುದೇ ಒಂದು ಅಥವಾ ಹೆಚ್ಚಿನ ಭಾಷೆಗಳಲ್ಲಿ ನಿಮ್ಮ ಬರಹಗಳನ್ನು ಸಲ್ಲಿಸಬಹುದು.

ಬಹುಮಾನಗಳು:

  • ಎಲ್ಲ 10 ಥೀಮ್‌ಗಳಲ್ಲೂ, ತಮ್ಮ ಬರಹಗಳನ್ನು ಸಲ್ಲಿಸುವ ಎಲ್ಲ ಸ್ಪರ್ಧಿಗಳು ₹200 ಮೌಲ್ಯದ SM ವೋಚರ್‌ಗಳನ್ನು ಸ್ವೀಕರಿಸುತ್ತಾರೆ.
  • ವಿಜೇತರು ಮೆಚ್ಚುಗೆ ಪ್ರಮಾಣಪತ್ರಗಳನ್ನು ಸ್ವೀಕರಿಸುತ್ತಾರೆ.
  • ಎಲ್ಲ ಸ್ಪರ್ಧಿಗಳು ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ಸ್ವೀಕರಿಸುತ್ತಾರೆ.
  • ಕಥೆ ಮತ್ತು ಕವಿತೆ ವಿಭಾಗದಲ್ಲಿ, ಎಲ್ಲಾ ಭಾಷೆಗಳ ಟಾಪ್ 20 ನಮೂದುಗಳನ್ನು, ಸ್ಟೋರಿಮಿರರ್‌ನ ಇಬುಕ್‌ನಲ್ಲಿ ಪ್ರಕಟಿಸಲಾಗುತ್ತದೆ.

ಸಲ್ಲಿಕೆ ಅವಧಿ - ಮಾರ್ಚ್ 14, 2022 ರಿಂದ ಏಪ್ರಿಲ್ 05, 2022

ಫಲಿತಾಂಶದ ಘೋಷಣೆ: ಏಪ್ರಿಲ್ 30, 2022

ಸಂಪರ್ಕಿಸಿ :

ಇಮೇಲ್:  neha@storymirror.com

ದೂರವಾಣಿ ಸಂಖ್ಯೆ: +91 9372458287 / 022-49243888

ವಾಟ್ಸಾಪ್ : +91 84528 04788