Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

#31 Days : 31 Writing Prompts (Art in Ink Edition)

SEE WINNERS

Share with friends

ಸ್ಟೋರಿಮಿರರ್ ಪ್ರಸ್ತುತಪಡಿಸುತ್ತಿರುವ "31 ದಿನಗಳು : 31 ಬರವಣಿಗೆ ಪ್ರಾಂಪ್ಟ್‌ಗಳು (ಆರ್ಟ್ ಇನ್ ಇಂಕ್ ಎಡಿಷನ್)" ಸ್ಪರ್ಧೆಯ ಐದನೇ ಸೀಸನ್‌ಗೆ ಸುಸ್ವಾಗತ. ಈ ಸರಣಿಯಲ್ಲಿ, ನಾವು ಕಲೆ ಮತ್ತು ಬರವಣಿಗೆಯನ್ನು ಒಟ್ಟಿಗೆ ಅನ್ವೇಷಿಸುವ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದೇವೆ. ನಿಮ್ಮ ಸೃಜನಶೀಲ ಬರವಣಿಗೆಗೆ ಸ್ಫೂರ್ತಿಯಾಗಲೆಂದು ನಾವು ವಿವಿಧ ಕಲಾವಿದರ ವರ್ಣಚಿತ್ರಗಳನ್ನು ಬಳಸುತ್ತೇವೆ. ಪ್ರತಿದಿನ, ನಾವು ಬ್ಯಾನರ್‌ನಲ್ಲಿ ಹೊಸ ಇಮೇಜ್ ಪ್ರಾಂಪ್ಟ್‌ನೊಂದಿಗೆ ನಿಮ್ಮೆದುರು ಪ್ರಸ್ತುತಪಡಿಸುತ್ತೇವೆ, ಅದು ಅತ್ಯುತ್ತಮ ಬರವಣಿಗೆಯ ಪ್ರಾಂಪ್ಟ್ ಆಗಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ನಂಬಲಾಗದ ಅಕ್ಷರ ಸೌಂದರ್ಯ ಮತ್ತು ಮನುಷ್ಯನ ಸೃಜನಶೀಲತೆಯ ಆಳವನ್ನು ಪ್ರದರ್ಶಿಸುತ್ತದೆ.

ಕಲೆಯು ಉಳಿದವುಗಳಂತೆ ಭಾವನೆಗಳನ್ನು ಪ್ರೇರೇಪಿಸುವ ಮತ್ತು ಪ್ರಚೋದಿಸುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿದೆ. ವರ್ಣಚಿತ್ರದ ಪ್ರತಿಯೊಂದು ಕುಂಚ, ಬಣ್ಣ ಮತ್ತು ವಿವರಗಳು ಒಂದೊಂದು ಕಥೆಯನ್ನು ಹೇಳುತ್ತವೆ ಮತ್ತು ಸಂದೇಶವನ್ನು ಸಾರುತ್ತವೆ. ನಾವು ಪ್ರತಿ ವರ್ಣಚಿತ್ರವನ್ನು ಪರಿಶೀಲಿಸುವಾಗ, ಅದರ ಬಗ್ಗೆ ನಿಮ್ಮಲ್ಲಿ ಮೂಡುವ ಭಾವಗಳನ್ನು ನಿಮ್ಮ ಅಕ್ಷರಗಳಲ್ಲಿ ನೋಡಲು, ಆ ಕಲಾತ್ಮಕತೆಯನ್ನು ಪ್ರಶಂಸಿಸಲು ಕಾತುರದಿಂದ ಕಾಯುತ್ತಿದ್ದೇವೆ.

ಈ ಪ್ರಾಂಪ್ಟ್‌ಗಳ ಮೂಲಕ, ನಿಮ್ಮ ಸೃಜನಶೀಲತೆಯನ್ನು ಜಗತ್ತಿಗೆ ತೋರಿಸಲು ಮತ್ತು ನಿಮ್ಮೊಳಗೆ, ನಿಮಗಷ್ಟೇ ಕೇಳುವ ಆ ಪಿಸುಮಾತನ್ನು ಅಕ್ಷರಗಳಲ್ಲಿ ಬರೆಯಿಸಿ, ಆ ಮೂಲಕ ಅದನ್ನು ಜಗತ್ತಿಗೆ ಕೇಳುವಂತೆ ಮಾಡುವುದೇ ನಮ್ಮ ಉದ್ದೇಶ. ನೀವು ಅನುಭವಿ ಬರಹಗಾರರೇ ಆಗಿರಲಿ ಅಥವಾ ಈಗಷ್ಟೇ ಬರಹದಲ್ಲಿ ಅಂಬೆಗಾಲಿಡುತ್ತಿರುವ ಉದಯೋನ್ಮುಖ ಬರಹಗಾರರೇ ಆಗಿರಲಿ, ನಿಮಗೆ ವಿಭಿನ್ನವಾಗಿ ಯೋಚಿಸಲು ಮತ್ತು ಹೊಸದನ್ನು ರಚಿಸಲು ಈ ಪ್ರಾಂಪ್ಟ್‌ಗಳು ಸವಾಲು ಹಾಕುತ್ತವೆ.

ಈಗ ನಾವು ಸ್ಪರ್ಧೆಯ ಸ್ವರೂಪವನ್ನು ನೋಡೋಣ. ಟೀಮ್ Aಟೀಮ್ Bಟೀಮ್ C, ಟೀಮ್ D ಮತ್ತು ಟೀಮ್ E ಹೆಸರಿನ ಒಟ್ಟು ಐದು ತಂಡಗಳು ಭಾಗವಹಿಸಲಿವೆ.

ತಂಡಗಳು ನಾನ್-ಸ್ಟಾಪ್ ನವೆಂಬರ್ - T30 ಕಪ್ ಆವೃತ್ತಿಯಂತೆಯೇ ಇರುತ್ತದೆ. ಆದಾಗ್ಯೂ, ಎಲ್ಲಾ ಹೊಸ ಬರಹಗಾರರನ್ನು ಯಾದೃಚ್ಛಿಕವಾಗಿ ಪ್ರತಿ ತಂಡದ ನಡುವೆ ಸಮಾನವಾಗಿ ವಿಂಗಡಿಸಲಾಗುತ್ತದೆ. ಪ್ರತಿಯೊಬ್ಬ ಬರಹಗಾರರು ತಮ್ಮ ತಂಡದ ವಿವರಗಳೊಂದಿಗೆ ಇಮೇಲ್ ಅನ್ನು ಸ್ವೀಕರಿಸುತ್ತಾರೆ ಮತ್ತು ಪ್ರತಿ ತಂಡದಲ್ಲಿ ಉತ್ತಮ ಸಂವಹನಕ್ಕಾಗಿ ಪ್ರತ್ಯೇಕ WhatsApp ಗುಂಪನ್ನು ರಚಿಸಲಾಗುತ್ತದೆ. ಜೊತೆಗೆ, ಪ್ರತಿ ತಂಡವೂ ಬೆಂಬಲ ಮತ್ತು ಮಾರ್ಗದರ್ಶನಕ್ಕಾಗಿ, ಸ್ಟೋರಿಮಿರರ್ ಪ್ರತಿನಿಧಿಯನ್ನು ಹೊಂದಿರುತ್ತದೆ.

ಸ್ಪರ್ಧೆಯು 31 ದಿನಗಳಲ್ಲಿ 31 ವಿಭಿನ್ನ ಪೇಂಟಿಂಗ್ ಪ್ರಾಂಪ್ಟ್‌ಗಳನ್ನು ಹೊಂದಿರುತ್ತದೆ. ಭಾಗವಹಿಸಲು, ಬರಹಗಾರರು ತಮ್ಮ ವಿಷಯಕ್ಕಾಗಿ ದೈನಂದಿನ ಪ್ರಾಂಪ್ಟ್ ಅನ್ನು ಸ್ಫೂರ್ತಿಯಾಗಿ ಬಳಸಬೇಕಾಗುತ್ತದೆ. ನೀಡಿರುವ ಪ್ರಾಂಪ್ಟ್ ಅನ್ನು ಆಧರಿಸಿದ ವಿಷಯಕ್ಕೆ ಯಾವುದೇ ಶೈಲಿ, ಪ್ರಕಾರ ಅಥವಾ ಸ್ವರೂಪದ ನಿರ್ಬಂಧಗಳಿಲ್ಲ.

ನಿಯಮಗಳು:


  • ಸ್ಟೋರಿಮಿರರ್ ಪ್ರತಿ ರಾತ್ರಿ 12 ಗಂಟೆಗೆ ಹೊಸ ಚಿತ್ರ ಬರವಣಿಗೆ ಪ್ರಾಂಪ್ಟ್ ಅನ್ನು ಪ್ರಾರಂಭಿಸುತ್ತದೆ.
  • ಪ್ರತಿ ಪ್ರಾಂಪ್ಟ್, ಈ ಸ್ಪರ್ಧೆಯ ಕೊನೆಯ ದಿನದವರೆಗೆ (ಜೂನ್ 5) ಸಕ್ರಿಯವಾಗಿರುತ್ತದೆ. "ಆಲ್ ಪ್ರಾಂಪ್ಟ್ಸ್" ಟ್ಯಾಬ್ ಅಡಿಯಲ್ಲಿ ನೀವು ಹಿಂದಿನ ಪ್ರಾಂಪ್ಟ್‌ಗಳನ್ನು ನೋಡಬಹುದು.
  • ಸ್ಪರ್ಧಿಗಳು ವಿವಿಧ ವಿಭಾಗಗಳಿಗೆ (ಕಥೆ/ಕವಿತೆ) ನೋಂದಾಯಿಸಿಕೊಳ್ಳಬಹುದು. ಆದಾಗ್ಯೂ, 31 ಬರಹಗಳ ಪ್ರತಿಯೊಂದು ಸೆಟ್, 31 ಕಥೆಗಳ ಅಥವಾ 31 ಕವಿತೆಗಳ ಒಂದೇ ವಿಭಾಗದ ಅಡಿಯಲ್ಲಿರಬೇಕು. ಕಥೆಯ ವಿಭಾಗದ ಕೆಲವು ಬರಹಗಳು, ಕವಿತೆಯ ವಿಭಾಗದ ಕೆಲವು ಬರಹಗಳನ್ನು ಸೇರಿಸಿ 31 ಬರಹಗಳು ಎಂದು ಪರಿಗಣಿಸುವಂತಿಲ್ಲ. 31 ಬರಹಗಳು ಒಂದೇ ವಿಭಾಗದಲ್ಲಿ ಸಲ್ಲಿಕೆಯಾಗಿರಬೇಕು. ಹೆಚ್ಚುವರಿಯಾಗಿ ನೀವು ಕಥೆ, ಕವಿತೆ ಎರಡೂ ವಿಭಾಗಕ್ಕೂ 31 ಬರಹಗಳನ್ನು ಪ್ರತ್ಯೇಕವಾಗಿ ಸಲ್ಲಿಸಬಹುದು.
  • ನಿಮ್ಮ ತಂಡ ಗೆಲ್ಲುವ ಸಾಧ್ಯತೆಯನ್ನು ಹೆಚ್ಚಿಸಲು ನೀವು ಪ್ರತಿ ಚಿತ್ರದಕ್ಕೆ ಒಂದಕ್ಕಿಂತ ಹೆಚ್ಚು ಬರಹಗಳನ್ನು ಸಲ್ಲಿಸಬಹುದು.
  • ಸ್ಪರ್ಧಿಗಳು ತಮ್ಮ ಸ್ವಂತ ವಿಷಯವನ್ನು ಸಲ್ಲಿಸಬೇಕು. ನಕಲಿಸುವುದು ಅಪರಾಧ 
  • ಇಮೇಲ್ ಮೂಲಕ ಅಥವಾ ಹಾರ್ಡ್ ಕಾಪಿಯಾಗಿ ಅಥವಾ ಸ್ಪರ್ಧೆಯ ಲಿಂಕ್ ಅನ್ನು ಬಳಸದೆ ಮಾಡಿದ ಯಾವುದೇ ಬರಹಗಳು ಪ್ರವೇಶಕ್ಕೆ ಅರ್ಹವಾಗಿರುವುದಿಲ್ಲ.
  • ಸ್ಪರ್ಧೆಗೆ ಭಾಗವಹಿಸಲು ಯಾವುದೇ ಭಾಗವಹಿಸುವಿಕೆ ಶುಲ್ಕವಿಲ್ಲ.
  • ನಿಮ್ಮ ಭಾಗವಹಿಸುವಿಕೆಯ ಪ್ರಮಾಣಪತ್ರಗಳು ನಿಮ್ಮ ಪ್ರೊಫೈಲ್‌ನಲ್ಲಿ ಪ್ರಮಾಣಪತ್ರ ವಿಭಾಗದ ಅಡಿಯಲ್ಲಿ ಲಭ್ಯವಿರುತ್ತವೆ.

ಬಹುಮಾನಗಳು:


ತಂಡದ ಬಹುಮಾನಗಳು (Team Prizes)


ವಿಜೇತ ತಂಡವನ್ನು ಸಂಪಾದಕರ ಸ್ಕೋರ್, ಚಿತ್ರದ ವಿಷಯದ ಮೇಲಿನ ಬರಹಗಳ ಸಂಖ್ಯೆ ಮತ್ತು ಓದುಗರ ತೊಡಗುವಿಕೆ (ಲೈಕ್ಸ್ ಮತ್ತು ಕಾಮೆಂಟ್‌ಗಳು) ಯನ್ನು ಆಧರಿಸಿ ನಿರ್ಧರಿಸಲಾಗುತ್ತದೆ.


1. ವಿಜೇತ ತಂಡದ ಸದಸ್ಯರು ಈ ಕೆಳಗಿನ ಬಹುಮಾನಗಳನ್ನು ಪಡೆಯುತ್ತಾರೆ -


  • ಪುಸ್ತಕಗಳನ್ನು ಖರೀದಿಸಲು, ₹150/- ಮೌಲ್ಯದ ಸ್ಟೋರಿಮಿರರ್ ಶಾಪ್ ಡಿಸ್ಕೌಂಟ್ ವೋಚರ್.
  • ಸ್ಟೋರಿಮಿರರ್‌ನ ಎಲ್ಲಾ ಪೇಪರ್‌ಬ್ಯಾಕ್ ಪುಸ್ತಕ ಪ್ರಕಾಶನ ಪ್ಯಾಕೇಜ್‌ಗಳ ಮೇಲೆ 20% ರಿಯಾಯಿತಿ.
  • ಡಿಜಿಟಲ್ ವಿಜೇತ ಪ್ರಮಾಣಪತ್ರಗಳು.


2. ರನ್ನರ್-ಅಪ್ ತಂಡಕ್ಕೆ ಈ ಕೆಳಗಿನ ಬಹುಮಾನಗಳನ್ನು ನೀಡಲಾಗುತ್ತದೆ-


  • ಪುಸ್ತಕಗಳನ್ನು ಖರೀದಿಸಲು, ₹100/- ಮೌಲ್ಯದ ಸ್ಟೋರಿಮಿರರ್ ಶಾಪ್ ಡಿಸ್ಕೌಂಟ್ ವೋಚರ್.
  • ಸ್ಟೋರಿಮಿರರ್‌ನ ಎಲ್ಲಾ ಪೇಪರ್‌ಬ್ಯಾಕ್ ಪುಸ್ತಕ ಪ್ರಕಾಶನ ಪ್ಯಾಕೇಜ್‌ಗಳ ಮೇಲೆ 10% ರಿಯಾಯಿತಿ.
  • ಡಿಜಿಟಲ್ ರನ್ನರ್ ಅಪ್ ಪ್ರಮಾಣಪತ್ರಗಳು.

ಹೆಚ್ಚು ಸಕ್ರಿಯವಾಗಿರುವ ತಂಡ (Most Active Team) - ಅತಿ ಹೆಚ್ಚು ಸ್ಪರ್ಧಿಗಳನ್ನು ಹೊಂದಿರುವ ತಂಡಕ್ಕೆ ₹150/- ಮೌಲ್ಯದ ಸ್ಟೋರಿಮಿರರ್ ಶಾಪ್ ರಿಯಾಯಿತಿ ವೋಚರ್ ಮತ್ತು ವಿಶೇಷ ಪ್ರಮಾಣಪತ್ರವನ್ನು ನೀಡಲಾಗುತ್ತದೆ.

ವೈಯಕ್ತಿಕ ಬಹುಮಾನಗಳು (Individual Prizes)


  • ಎಲ್ಲಾ ಥೀಮ್‌ಗಳಲ್ಲಿ 31 ಅಥವಾ ಹೆಚ್ಚಿನ ಬರಹಗಳನ್ನು ಸಲ್ಲಿಸುವ ಸ್ಪರ್ಧಿಗಳು ಸ್ಟೋರಿಮಿರರ್‌ನಿಂದ ಉಚಿತ ಭೌತಿಕ ಪುಸ್ತಕವನ್ನು ಪಡೆಯಲಿದ್ದಾರೆ. ಇದು ಪ್ರತಿ ಭಾಷೆ ಮತ್ತು ಪ್ರತಿ ವರ್ಗದ ಕನಿಷ್ಠ ಸರಾಸರಿ ಸಂಪಾದಕೀಯ ಸ್ಕೋರ್ 7 ಕ್ಕೆ ಒಳಪಟ್ಟಿರುತ್ತದೆ. ಆದಾಗ್ಯೂ, ಸ್ಪರ್ಧಿಗಳು ಭಾರತದ ಹೊರಗಿನವರಾಗಿದ್ದರೆ, ಆಗ ನಾವು ಕೇವಲ ಇ-ಪುಸ್ತಕವನ್ನು ಹಂಚಿಕೊಳ್ಳಲು ಮಾತ್ರ ಸಾಧ್ಯವಾಗುತ್ತದೆ.


  • ಎಲ್ಲಾ ಥೀಮ್‌ಗಳಲ್ಲಿ 15 ಕ್ಕಿಂತ ಹೆಚ್ಚು ಮತ್ತು 31 ಕ್ಕಿಂತ ಕಡಿಮೆ ಬರಹಗಳನ್ನು ಸಲ್ಲಿಸುವ ಸ್ಪರ್ಧಿಗಳು ಸ್ಟೋರಿಮಿರರ್‌ನಿಂದ ಉಚಿತ ಇ-ಪುಸ್ತಕವನ್ನು ಪಡೆಯಲಿದ್ದಾರೆ. ಇದು ಪ್ರತಿ ಭಾಷೆ ಮತ್ತು ಪ್ರತಿ ವರ್ಗದ ಕನಿಷ್ಠ ಸರಾಸರಿ ಸಂಪಾದಕೀಯ ಸ್ಕೋರ್ 7 ಕ್ಕೆ ಒಳಪಟ್ಟಿರುತ್ತದೆ


  • ಎಲ್ಲಾ ಸ್ಪರ್ಧಿಗಳು ಭಾಗವಹಿಸುವಿಕೆ ಪ್ರಮಾಣಪತ್ರವನ್ನು ಸ್ವೀಕರಿಸುತ್ತಾರೆ.

ವಿಶೇಷ ಬಹುಮಾನಗಳು (Special Prizes)

ವಿಜೇತರಿಗೆ ಟ್ರೋಫಿ ಮತ್ತು ಡಿಜಿಟಲ್ ವಿಜೇತ ಪ್ರಮಾಣಪತ್ರವನ್ನು ನೀಡಲಾಗುತ್ತದೆ.

'ಆರ್ಟ್ ಇನ್ ಇಂಕ್ ಎಡಿಷನ್'ನ ಅತ್ಯುತ್ತಮ ಬರಹಗಾರ (Best writer of Art in Ink Editon) - ಎಲ್ಲಾ 31 ಥೀಮ್‌ಗಳಲ್ಲಿ ಅತ್ಯುತ್ತಮ ಬರಹವನ್ನು ಸಲ್ಲಿಸುವ ಬರಹಗಾರ. ಅವನಿಗೆ/ಆಕೆಗೆ ಸ್ಟೋರಿಮಿರರ್‌ನಿಂದ ಉಚಿತ ಪೇಪರ್‌ಬ್ಯಾಕ್ ಪುಸ್ತಕ ಪ್ರಕಾಶನ ಒಪ್ಪಂದವನ್ನು ಸಹ ನೀಡಲಾಗುತ್ತದೆ

'ಆರ್ಟ್ ಇನ್ ಇಂಕ್ ಎಡಿಷನ್'ನ ಅತ್ಯಂತ ಸ್ಥಿರವಾದ ಬರಹಗಾರ (Most consistent writer of the Art in Ink Editon) - ಎಲ್ಲಾ ಭಾಷೆಗಳು ಮತ್ತು ವಿಭಾಗಗಳಾದ್ಯಂತ ಹೆಚ್ಚಿನ ಬರಹಗಳನ್ನು ಸಲ್ಲಿಸುವ ಬರಹಗಾರ.

ವಿಭಾಗಗಳು: ಕಥೆ, ಕವಿತೆ

ಭಾಷೆಗಳು: ಕನ್ನಡ, ಇಂಗ್ಲೀಷ್, ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಮಲಯಾಳಂ, ಒಡಿಯಾ ಮತ್ತು ಬೆಂಗಾಲಿ.

ಸಲ್ಲಿಕೆಯ ಅವಧಿ: 01ನೇ ಮೇ 2023 ರಿಂದ 05ನೇ ಜೂನ್ 2023

ಫಲಿತಾಂಶ: 25ನೇ ಜುಲೈ 2023

ಸಂಪರ್ಕಿಸಿ:

ಇಮೇಲ್: neha@storymirror.com

ದೂರವಾಣಿ ಸಂಖ್ಯೆ: +91 9372458287

ವಾಟ್ಸಾಪ್: +91 8452804735