STORYMIRROR

Puneeth Puneeth

Others

4  

Puneeth Puneeth

Others

ತೆರೆಯೆ ಮನಸಿನ ಪುಟವ

ತೆರೆಯೆ ಮನಸಿನ ಪುಟವ

1 min
22.6K

ಮನಸು ಮಾಡಿ, ಬರೆಯಲ್ಹೊರಟೆ, ಮನಸಿಗಾಗಿ ಮನಸಿನ ಪುಟಗಳ ಪದ್ಯವ.


ಅಲ್ಲಿ ಇಲ್ಲಿ, ಹುಡುಕಿ ತಡುಕಿ, ಓದಿದೆ ಕವಿಗಳ ಮನಸಿನ ಪುಟವ,

ಆದರೇನು, ನನಗೆ ಬರೆಯಲಾಗಲಿಲ್ಲ ಮನಸಿನ ಪುಟವ.


ಮತ್ತೆ ಮಾಡಿ, ಮನಸ ಕೊಟ್ಟೆ ತಲೆಗೆ ಕೆಲಸ,

ಮತ್ತೆ ಮಾಡಿ, ಮನಸ ಕೊಟ್ಟೆ ತಲೆಗೆ ಕೆಲಸ.


ಬರೆಯಲು ಹೊಳೆದವು ಪದಪುಂಜಗಳ ಕಣಜ,

ಪದಕೆ ಪದ ಪೋಣಿಸಿ, ಬರೆದೆ ಸಾಲು ಸಾಲು ಮನಸಿನ ಪುಟವ,

ನೋಡ ನೋಡುತಿರೆ, ತುಂಬಿದೆ ಮೊದಲನೆ ಪುಟವ,

ಆಗ ಅನಿಸಿತು, ನಾನು ಆಗಬಲ್ಲೆ ಕವಿಗಳಲೊಬ್ಬ ಮನುಜ.


Rate this content
Log in